ಚೆನ್ನೈ (ಪಿಟಿಐ): ಐಪಿಎಲ್ ಬೆಟ್ಟಿಂಗ್ನಲ್ಲಿ ಪಾಲ್ಗೊಂಡ ಆರೋಪ ಎದುರಿಸುತ್ತಿರುವ ಗುರುನಾಥ್ ಮೇಯಪ್ಪನ್ ಅವರನ್ನು ಯಾವುದೇ ಸಂದರ್ಭದಲ್ಲಿ ತಮಿಳುನಾಡಿನ ಸಿಬಿ–ಸಿಐಡಿ ಅಧಿಕಾರಿಗಳು ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದೆ.

‘ಬೆಟ್ಟಿಂಗ್ ಹಾಗೂ ಕಳ್ಳಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವು ಮಹತ್ವ ಅಂಶಗಳು ಬಹಿರಂಗವಾಗಿವೆ. ಈ ಸಂಬಂಧ ಕ್ರೈಮ್ ಬ್ರಾಂಚ್, ಹೋಟೆಲ್ ಉದ್ಯಮಿ ವಿಕ್ರಮ್ ಅಗರವಾಲ್ ಅವರ ವಿಚಾರಣೆ ಯನ್ನು ಮುಗಿಸಿದೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಬಿಸಿಸಿಐ ಅಧ್ಯಕ್ಷ ಶ್ರೀನಿವಾಸನ್ ಅವರ ಅಳಿಯ ಮೇಯಪ್ಪನ್ ಬೆಟ್ಟಿಂಗ್ನಲ್ಲಿ ಪಾಲ್ಗೊಂಡಿರುವುದು ಖಚಿತ ಎಂದು ಸುಪ್ರೀಂ ಕೋರ್ಟ್ಗೆ ಸಲ್ಲಿಸಲಾಗಿ ರುವ ವರದಿಯಲ್ಲಿ ನ್ಯಾಯಮೂರ್ತಿ ಮುಕುಲ್ ಮುದ್ಗಲ್ ಸಾರಥ್ಯದ ತನಿಖಾ ಆಯೋಗ ಹೇಳಿತ್ತು. ಜೊತೆಗೆ ಕಳ್ಳಾಟದಲ್ಲಿ ಭಾಗಿಯಾಗಿದ್ದಾರೆಯೇ ಎಂಬುದನ್ನು ಪತ್ತೆ ಹಚ್ಚಲು ಸಮಗ್ರ ತನಿಖೆ ನಡೆಸುವ ಅಗತ್ಯವಿದೆ ಎಂದಿತ್ತು. ಅಷ್ಟು ಮಾತ್ರವಲ್ಲದೇ, ಈ ಪ್ರಕರಣದ ವಿಚಾರಣೆಯನ್ನು ತಮಿಳು ನಾಡು ಪೊಲೀಸರು ಸರಿಯಾಗಿ ನಡೆಸಿಲ್ಲ ಎಂದು ಆಯೋಗ ತಿಳಿಸಿತ್ತು.

ಪ್ರಕರಣದ ವಿಚಾರಣೆ ನಡೆಸುತ್ತಿದ್ದ ತಮಿಳುನಾಡಿನ ಪೊಲೀಸ್ ವರಿಷ್ಠಾಧಿ ಕಾರಿ ಜಿ.ಸಂಪತ್ ಕುಮಾರ್ ಅವರನ್ನು ಇತ್ತೀಚೆಗೆ ಅಮಾನತು ಗೊಳಿಸಲಾಗಿತ್ತು. ‘ಪಟ್ಟಭದ್ರ ಹಿತಾಸಕ್ತಿ ಕೈವಾಡದ ಕಾರಣ ಕಳ್ಳಾಟದ ಬಗ್ಗೆ ಸಿಬಿ–ಸಿಐಡಿ ಸರಿಯಾಗಿ ತನಿಖೆ ನಡೆಸಿಲ್ಲ’ ಎಂದು ಅವರು ಆರೋಪಿಸಿದ್ದರು.
ಈಗಾಗಲೇ ಮೇಯಪ್ಪನ್ ಅವರಿಗೆ ಸಮನ್ಸ್ ಹೊರಡಿಸಲಾಗಿದೆ ಎಂದೂ ಮೂಲ ಗಳು ತಿಳಿಸಿವೆ. ಆದರೆ ಸಿಬಿ–ಸಿಐಡಿ ಮುಖ್ಯಸ್ಥ ನರೀಂದರ್ ಪಾಲ್ ಸಿಂಗ್ ಈ ಸಂಬಂಧ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.

ಸುಪ್ರೀಂನಲ್ಲಿ ಇಂದು ವಿಚಾರಣೆ
ಬೆಟ್ಟಿಂಗ್ ಹಾಗೂ ಫಿಕ್ಸಿಂಗ್ ಸಂಬಂಧ ಮುದ್ಗಲ್ ಸಲ್ಲಿಸಿರುವ ವರದಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ಕೈಗೆತ್ತಿಕೊಳ್ಳಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.