ಬುಧವಾರ, ಜನವರಿ 22, 2020
21 °C

ಬೆದರಿಕೆ ಒಡ್ಡಲಾಗಿತ್ತು: ಸಂಗೀತಾ ಕುಟುಂಬ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆದರಿಕೆ ಒಡ್ಡಲಾಗಿತ್ತು: ಸಂಗೀತಾ ಕುಟುಂಬ

ನ್ಯೂಯಾರ್ಕ್‌ (ಪಿಟಿಐ): ದೇವಯಾನಿ ಖೋಬ್ರಾಗಡೆ ಅವರ ಮಾಜಿ ಮನೆಕೆಲಸದಾಕೆ ಸಂಗೀತಾ ರಿಚರ್ಡ್‌ ಅವರನ್ನು ಭಾರತಕ್ಕೆ ವಾಪಸ್‌ ಕರೆಸಿಕೊಳ್ಳುವಂತೆ ಹಲವು ಬಾರಿ ಬೆದರಿಕೆ ಒಡ್ಡಲಾಗಿತ್ತು ಎಂದು ಸಂಗೀತಾ ಕುಟುಂಬ ಆರೋಪಿಸಿದೆ.ಸಂಗೀತಾ ಅವರ ಕುಟುಂಬದ ಆಪ್ತ­ರೊಬ್ಬರ ಹೇಳಿಕೆಗಳನ್ನು ಉಲ್ಲೇಖಿಸಿರುವ  ದ ನ್ಯೂಯಾರ್ಕ್‌ ಟೈಮ್ಸ್‌ ಪತ್ರಿಕೆ, ಅವರ ಕುಟುಂಬದ ಸದಸ್ಯರಿಗೆ ಬೆದರಿಕೆ ಹಾಕಿರುವ ಘಟನೆಗಳ ಬಗ್ಗೆ ವರದಿ ಮಾಡಿದೆ.ಒಂದು ಘಟನೆಯಲ್ಲಿ, ಸಂಗೀತಾ ಪತಿ ಫಿಲಿಪ್‌ ಅವರು ಮಗುವಿನೊಂದಿಗೆ ಸೈಕಲ್‌ ಸವಾರಿ ಮಾಡುತ್ತಿದ್ದ ಸಂದರ್ಭ­ದಲ್ಲಿ  ಬಂದೂಕು­­ಧಾರಿ ವ್ಯಕ್ತಿಯೊಬ್ಬ ಅವರನ್ನು ತಡೆದು ಪತ್ನಿ­ಯನ್ನು ವಾಪಸ್‌ ಕರೆಸಿಕೊಳ್ಳು­ವಂತೆ ಒತ್ತಾಯಿಸಿದ್ದ ಎಂದು ವರದಿ ಹೇಳಿದೆ.ದೇವಯಾನಿ ಅವರ ತಂದೆ ಒಂದಕ್ಕಿಂತ ಹೆಚ್ಚು ಬಾರಿ ಕರೆ ಮಾಡಿ ಸಂಗೀತಾ ಅವರನ್ನು ಭಾರತಕ್ಕೆ ಕರೆಸಿಕೊಳ್ಳುವಂತೆ ಫಿಲಿಪ್‌ ಅವ­ರನ್ನು ಒತ್ತಾಯಿಸಿದ್ದರು ಎಂದು ಕುಟುಂಬದ ಆಪ್ತ ವ್ಯಕ್ತಿ ನ್ಯೂಯಾರ್ಕ್‌ ಟೈಮ್ಸ್‌ಗೆ ತಿಳಿಸಿದ್ದಾರೆ.ಮತ್ತೊಂದು ಘಟನೆಯಲ್ಲಿ ಫಿಲಿಪ್‌ ಅವರನ್ನು ವಿಚಾರಣೆ ನಡೆಸಿದ್ದ ಭಾರತೀಯ ಪೊಲೀಸರು, ಸಂಗೀತಾ ಎಲ್ಲಿದ್ದಾರೆ ಎಂಬ ಬಗ್ಗೆ ಮಾಹಿತಿ ಕೇಳಿದ್ದರು ಎಂದೂ ಪತ್ರಿಕೆ ವರದಿ ಮಾಡಿದೆ.

ಪ್ರತಿಕ್ರಿಯಿಸಿ (+)