ಗುರುಮಠಕಲ್: ಪಟ್ಟಣದಲ್ಲಿ ಆಗಬೇಕಾದ ಅಭಿ ವೃದ್ದಿ ಕಾಮಗಾರಿಗಳ ಬಗ್ಗೆ ನಿರ್ದೇಶನ ನೀಡುವ ಶಾಸಕರ ಮಾತು ಲೆಕ್ಕಕ್ಕಿಲ್ಲ. ಸಚಿವರ ಮಾತಿ ಗಾದರೂ ಮಾನ್ಯತೆ ಸಿಗುದೆಂದರೇ, ಅದೂ ಆಗು ತ್ತಿಲ್ಲ. ಇಲ್ಲಿನ ಅಧಿಕಾರಿಗಳು ತಮಗೆ ತಿಳಿದಂತೆ ವರ್ತಿ ಸುತ್ತಿದ್ದಾರೆ ಎಂಬುದು ಬಹುತೇಕ ಜನರ ಆರೋಪ.

ಸಾರ್ವಜನಿಕರಿಗೆ ರಾತ್ರಿ ವೇಳೆ ಬೆಳಕು ನೀಡಲಿ ಎಂಬ ಉದ್ದೇಶದಿಂದ ಇಲ್ಲಿನ ಶಹಾಪುರ- ಹೈದರಾಬಾದ ರಾಜ್ಯ ಹೆದ್ದಾರಿಯಲ್ಲಿ ಕಳೆದ ಆರು ತಿಂಗಳ ಹಿಂದೆ ರಸ್ತೆ ಮಧ್ಯೆ ವಿದ್ಯುತ್ ದೀಪಗಳನ್ನು ತರಾ ತುರಿಯಲ್ಲಿ ಹಾಕಲಾಯಿತು. ಇನ್ನೇನೂ ಅಭಿವೃದ್ಧಿ ಕಾರ್ಯ ಚುರುಕಿನಿಂದ ಸಾಗುತ್ತಿದೆ ಎಂದುಕೊಂಡ ಜನರಿಗೆ ಸ್ವಲ್ಪದಿನಗಳಲ್ಲಿಯೇ ಭ್ರಮನಿರಸನ ಆಗುವಂತಾಗಿದೆ.
ರಸ್ತೆ ವಿಸ್ತಾರ ಮಾಡದೇ ದೀಪಗಳನ್ನು ಹಾಕಿರು ವುದು ಜನರ ಹಿಡಿ ಶಾಪಕ್ಕೆ ಕಾರಣವಾಗಿದೆ. ರಸ್ತೆ ಮಧ್ಯದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದ್ದರಿಂದ ರಕ್ಷಾ ಬಂಧನಕ್ಕಾಗಿ ಬಂದ ತಮ್ಮ ಅಕ್ಕನ ಮನೆ ಸೇರ ದಂತಾಯಿತು. ಸುಮಾರು ನಾಲ್ಕೈದು ಲಾರಿಗಳು ನೇರವಾಗಿ ಡಿಕ್ಕಿ ಹೊಡೆದಿದ್ದರಿಂದ ಉರುಳಿ ಬಿದ್ದ ಘಟನೆಗಳು ಸಾಕಷ್ಟು ಸಂಭವಿಸಿವೆ.

ಇತ್ತೀಚೆಗಷ್ಟೇ ಕಂದೂರ ಓಣಿಯ ರಾಮುಲು ಎಂಬ ಯುವಕನ ದ್ವಿಚಕ್ರ ವಾಹನ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮವಾಗಿ ತಲೆಗೆ ಬಲವಾದ ಗಾಯವಾಗಿದ್ದು ಹೈದರಾಬಾದ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬಡ ಪೋಷಕರು ಸುಮಾರು ಎಂಬತ್ತು ಸಾವಿರ ಖರ್ಚು ಮಾಡಿ ಶಸ್ತ್ರಚಿಕಿತ್ಸೆ ಮಾಡಿಸಿ ಯುವಕನ ಪ್ರಾಣ ಉಳಿಸಿಕೊಂಡಿದ್ದಾರೆ. ಆದರೆ ಯುವಕನು ಸಂಪೂರ್ಣ ಗುಣಮುಖ ವಾಗಿಲ್ಲ ಎಂಬುದು ಪಾಲಕರ ಅಳಲು.

ಕಾಮಗಾರಿಗಳನ್ನು ಕೂಡಲೇ ಪೂರ್ಣಗೊಳಿ ಸುವಂತೆ ಕ್ಷೇತ್ರದ ಶಾಸಕ ಬಾಬುರಾವ್ ಚಿಂಚನ ಸೂರ್ ಅನೇಕ ಬಾರಿ ಸಂಬಂಧಿಸಿದ ಅಧಿಕಾರಿಗಳು ಹಾಗೂ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಗಳಿಗೆ ಸೂಚಿಸಿದರೂ, ಅದಾವುದೂ ಪ್ರಯೋಜನ ಆಗಿಲ್ಲ. ಆಗಷ್ಟೆ ತಲೆ ಅಲ್ಲಾಡಿಸಿ ಸುಮ್ಮನಾಗುವ ಅಧಿ ಕಾರಿಗಳು, ಮತ್ತೆ ಆ ಬಗ್ಗೆ ತಲೆ ಕೂಡ ಕೆಡಿಸಿಕೊಳ್ಳು ವುದಿಲ್ಲ ಎನ್ನುತ್ತಿದ್ದಾರೆ ಇಲ್ಲಿನ ನಿವಾಸಿಗಳು.

ಫೆಬ್ರವರಿ 19 ರಂದು ಪಟ್ಟಣಕ್ಕೆ ಆಗಮಿಸಿದ ಜಿಲ್ಲಾ ಉಸ್ತುವಾರಿ ಸಚಿವ ಪ್ರೊ.ಮುಮ್ತಾಜ್ ಅಲಿಖಾನ್ ಪ್ರಗತಿ ಪರಿಶೀಲನಾ ಸಭೆ ನಡೆಸಿದರು. ಕಾಮಗಾರಿಗಳು ನೆನೆಗುದಿಗೆ ಬಿದ್ದಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.

ಮಾರ್ಚ್ ಅಂತ್ಯದೊಳಗೆ ಪೂರ್ಣಗೊಳಿ ಸುವಂತೆ ನಿರ್ದೇಶನವನ್ನೂ ನೀಡಿದರು. ಇದೇ ಸಂದರ್ಭದಲ್ಲಿ ತಲೆ ಎತ್ತಿದ ರಸ್ತೆ ಮಧ್ಯದ ವಿದ್ಯುತ್ ಕಂಬಗಳಿಗೆ ವಿದ್ಯುತ್ ಸಂಪರ್ಕ ಒದಗಿಸುವ ಕಾರ್ಯವನ್ನು ಕೂಡಲೇ ಕೈಗೆತ್ತಿಕೊಳ್ಳು ವಂತೆ ಸೂಚಿಸಿದರು.

ವಿದ್ಯುತ್ ದೀಪಗಳ ಉದ್ಘಾಟನಾ ಸಮಾರಂಭ ವನ್ನು ಮಾರ್ಚ್ 2 ರಂದು ನಡೆಸಲು ದಿನಾಂಕ ವನ್ನೂ ನೀಡಿದ್ದರು. ತಾವು ಆ ದಿನ ಆಗಮಿಸುವು ದಾಗಿ ಸಾರ್ವಜನಿಕರಲ್ಲಿ ಮತ್ತು ಪಟ್ಟಣ ಪಂಚಾಯಿತಿ ಅಧಿಕಾರಿಗಳಿಗೂ ತಿಳಿಸಿದ್ದರು.

ಸಚಿವರು ಸೂಚಿಸಿದ ದಿನಾಂಕ ಪೂರ್ಣಗೊಂಡು ಒಂದು ತಿಂಗಳು ಕಳೆದರೂ ಅಧಿಕಾರಿಗಳು ಮಾತ್ರ ನಿರ್ಲಕ್ಷ್ಯ ಧೋರಣೆ ಮುಂದುವರಿಸಿದ್ದಾರೆ. ಸಚಿವರು ಸಭೆ ತೆಗೆದುಕೊಂಡ ನಂತರವೇ ಮೂರು ಅಪಘಾತಗಳು ಸಂಭವಿಸಿವೆ.

ಒಂದೇ ದಿನ ಸತತವಾಗಿ ಮೂರು ಕಂಬಗಳಿಗೆ ಲಾರಿ ಡಿಕ್ಕಿ ಹೊಡೆದಿದೆ. ಹಾಕಿದ ಕಂಬಗಳಲ್ಲಿ ಏಳು ಕಂಬಗಳು ಬುಡ ಸಮೇತವಾಗಿ ಕಿತ್ತು ಹಾಕಲಾಗಿದೆ. ಎಲ್ಲ ಕಂಬಗಳನ್ನು ಪರಿಶೀಲಿಸಿದಾಗ ಡಿಕ್ಕಿ ಹೊಡೆಯದೇ ಉಳಿದ ಕಂಬಗಳ ಸಂಖ್ಯೆ ತೀರಾ ಕಡಿಮೆ ಎಂದು ಬಿಜೆಪಿ ಮುಖಂಡ ಕೆ. ದೇವದಾಸ್ ಹೇಳುತ್ತಾರೆ.

ಪಟ್ಟಣದ ಬಿಡಿಕಿಕಟ್ಟ ಹಾಗೂ ನಾಸಿರ್ಜಂಗ್ ಕಟ್ಟದಲ್ಲಿ ಅಳವಡಿಸಲಾದ ಹೈಮಾಸ್ಟ್ ವಿದ್ಯುತ್ ದೀಪಗಳನ್ನು ಅಳವಡಿಸಿದ್ದು ಹೆಚ್ಕೆಡಿಬಿಗೆ ಸಂಬಂಧಿ ಸಿದ ಕಾಮಗಾರಿ. ಅದನ್ನು ಜಿಲ್ಲಾ ಪಂಚಾಯಿತಿ ಯವರು ಮಾಡಿದ್ದು. ಬಿಡಿಕಿಕಟ್ಟಾ ಹಾಗೂ ನಾಸಿರ್ ಜಂಗ್ ಕಟ್ಟದಲ್ಲಿ ಸುಮಾರು ಎರಡು ವರ್ಷಗಳ ಹಿಂದೆ ಹೈಮಾಸ್ಟ್ ದೀಪಗಳನ್ನು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಹಾಕಲಾಗಿದೆ. ಆದರೆ ಅವು ಉರಿಯದೇ ಕತ್ತಲಲ್ಲಿ ನಿಂತಿರುವುದು ಲೆಕ್ಕ ಕ್ಕುಂಟು ಆಟಕ್ಕಿಲ್ಲ ಎಂಬಂತಾಗಿದೆ.

ಜನಪ್ರತಿನಿಧಿಗಳು ಕೇಳಿದಾಗ ಮಾತ್ರ ಒಂದು ದಿನ ಬೆಳಕು ನೀಡುವ ವ್ಯವಸ್ಥೆ ಮಾಡಿ ಮುಖ ಒರೆಸುವ ಕೆಲಸ ಮಾಡುತ್ತಾರೆ. ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಗಮನ ಹರಿಸಿ ವಿದ್ಯುತ್ ದೀಪಗಳು ಸಾರ್ವಜನಿಕರ ಬೆಳಕು ನೀಡುವಂತೆ ಮಾಡಬೇಕು. ಅವುಗಳನ್ನು ಪಟ್ಟಣ ಪಂಚಾಯಿತಿಗೆ ಒಪ್ಪಿಸಲು ಕ್ರಮ ಕೈಗೊಳ್ಳುವಂತೆ ಪಟ್ಟಣ ಪಂಚಾಯಿತಿ ಸದಸ್ಯ ಜಿ.ತಮ್ಮಣ್ಣ ಆಗ್ರಹಿಸಿದ್ದಾರೆ.

ಕ್ಷೇತ್ರದ ಶಾಸಕ ಹಾಗೂ ಸಚಿವರ ಮಾತಿಗೆ ಬೆಲೆ ಕೊಡದ ಅಧಿಕಾರಿಗಳ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಬೇಕು. ಯಮ ಸ್ವರೂಪಿಯಾಗಿ ರಸ್ತೆ ಮಧ್ಯೆ ನಿಂತಿರುವ ಕಂಬಗಳಿಂದ ಬೆಳಕು ಒದಗಿಸುವ ಕಾರ್ಯ ಕೈಗೆತ್ತಿಕೊಳ್ಳುವಂತೆ ನರಸಿಂಹಲು ನಿರೇಟಿ, ಚಂದುಲಾಲ್ ಚೌದ್ರಿ, ವೆಂಕಟಪ್ಪ ಅವಂಗಪೂರ, ಭೀಮಾಶಂಕರ ಪಡಿಗೆ ಇತರರು ಆಗ್ರಹಿಸಿದ್ದಾರೆ.

ಇಲ್ಲವೇ ರಸ್ತೆ ಮಧ್ಯೆ ವಿಭಜಕವನ್ನು ನಿರ್ಮಿಸಿ ಅದರ ಮೇಲೆ ಕಂಬಗಳನ್ನು ನಿರ್ಮಿಸಬೇಕು. ಅಂದರೆ ಕಂಬಕ್ಕೆ ಆಗುವ ಹಾನಿ, ವಾಹನದಿಂದ ಆಗುವ ಅಪಘಾತವನ್ನು ತಕ್ಕಮಟ್ಟಿಗೆ ಕಡಿಮೆ ಮಾಡಬಹುದು. ಸುಂದರವಾಗಿರುವ ತೆಗ್ಗು ದಿನ್ನೆಗಳು ಇಲ್ಲದ ರಸ್ತೆಯ ಮೇಲೆ ವೇಗವಾಗಿ ಚಲಿಸುತ್ತಿರುವ ವಾಹನಗಳಿಗೆ ಕಡಿವಾಣ ಬೀಲಬಹುದು. ಈ ನಿಟ್ಟಿನಲ್ಲಿ ಸಂಬಂಧಿಸಿದ ಇಲಾಖೆ, ಅಧಿಕಾರಿಗಳು ಗಂಭೀರ ಚಿಂತನೆ ನಡೆಸಿ ರಸ್ತೆಯ ಮಧ್ಯೆ ಇರುವ ಕಂಬಕ್ಕೆ ಬಂದಿರುವ ದುರ್ಗತಿಯನ್ನು ತಪ್ಪಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.