ಮಂಗಳವಾರ, ಮಾರ್ಚ್ 2, 2021
31 °C

ಬೆಳೆ ಸಂಗತಿ–23

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳೆ ಸಂಗತಿ–23

ಮನಿಪ್ಲ್ಯಾಂಟ್‌ಗೆ ಬಿಳಿಹುಳು

ಮನಿಪ್ಲ್ಯಾಂಟ್‌ ಗಿಡಕ್ಕೆ ರಸ ಹೀರುವ ಬಿಳಿಹುಳು ಬಾಧೆ ಪರಿಹಾರಕ್ಕೆ ಬೇವಿನೆಣ್ಣೆ ಸೋಪು ಉತ್ತಮ ಔಷಧ. ಸೋಪನ್ನು 10 ಗ್ರಾಂನಂತೆ ಕತ್ತರಿಸಿ ಅದನ್ನು ಒಂದು ಲೀಟರ್‌ ನೀರಿನಲ್ಲಿ ಕರಗಿಸಿ 15 ದಿನಕ್ಕೊಮ್ಮೆ ಸಿಂಪಡಿಸುತ್ತಿರಿ.***

ಬೀನ್ಸ್‌ ಎಲೆಗಳಿಗೆ ಕೀಟ


ಬೀನ್ಸ್‌ ಎಲೆಗಳಿಗೆ ಕೀಟಗಳ ಕಾಟ ಇದ್ದರೆ 100 ಗ್ರಾಂ ಬಾರ್‌ ಸೋಪನ್ನು 4 ಲೀಟರ್‌ ನೀರಿನಲ್ಲಿ ಕರಗಿಸಿ.  ಎರಡು ಲೀಟರ್‌ ಹರಳೆಣ್ಣೆ ಮತ್ತು ಬೇವಿನ ಎಣ್ಣೆ ಹಾಗೂ 200 ಲೀಟರ್ ನೀರು ಬೆರೆಸಿ. ವಾರಕ್ಕೊಮ್ಮೆ ಎಲೆಗಳಿಗೆ ಸಿಂಪಡಿಸಿ.***

ಚಿಕ್ಕು ಗಿಡಕ್ಕೆ ಬೆಳಕು


ಚಿಕ್ಕು ಗಿಡ ಚೆನ್ನಾಗಿ ಬೆಳೆಯಬೇಕೆಂದರೆ ಅದಕ್ಕೆ ಪ್ರತಿದಿನ 8–10 ಗಂಟೆ ಸೂರ್ಯನ ಬೆಳಕು ಅವಶ್ಯಕ. ಗಿಡದಲ್ಲಿ ಹೂವು ಬಿಟ್ಟು ಉದುರಿ ಹೋಗುತ್ತಿದ್ದರೆ 20 ಕೆ.ಜಿ. ಕಟ್ಟಿಗೆ ಬೂದಿ ಮತ್ತು 100 ಕೆ.ಜಿ. ಹಸಿರೆಲೆ ಗೊಬ್ಬರ ಒದಗಿಸಿ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.