ಬೆಂಗಳೂರು: ವಿದ್ಯುತ್ ಬಿಲ್ ಸಕಾಲಕ್ಕೆ ಪಾವತಿಸದ ಜನಸಾಮಾನ್ಯರಿಗೆ ವಿದ್ಯುತ್ ಕಡಿತದ `ಶಿಕ್ಷೆ~, ದಂಡ ಎಲ್ಲವೂ ಬೀಳುತ್ತದೆ. ಆದರೆ, ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ, ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಲ ಸಚಿವರು ತಮ್ಮ ಅಧಿಕೃತ ನಿವಾಸಗಳ ವಿದ್ಯುತ್ ಬಿಲ್ ಕಟ್ಟದಿದ್ದರೆ ಅವರಿಗೆ ಯಾವ ದಂಡವೂ ಇಲ್ಲ. ವಿದ್ಯುತ್ ಪೂರೈಕೆಯೂ ಅಬಾಧಿತ!

ಅಚ್ಚರಿ ಎನಿಸಿದರೂ ಇದು ಸತ್ಯ. ಮುಖ್ಯಮಂತ್ರಿಯವರ ಅಧಿಕೃತ ನಿವಾಸ `ಅನುಗ್ರಹ~ದ ವಿದ್ಯುತ್ ಬಿಲ್ 2012ರ ಜನವರಿವರೆಗೆ 7.79 ಲಕ್ಷ ರೂಪಾಯಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಕುಮಾರಪಾರ್ಕ್ನ ಅಧಿಕೃತ ನಿವಾಸದ ವಿದ್ಯುತ್ ಬಿಲ್ 3.8 ಲಕ್ಷ ರೂಪಾಯಿ ಬಾಕಿ ಇದೆ.

ಇದೇ ರೀತಿ ಸರ್ಕಾರದ 14 ವಸತಿ ಗೃಹಗಳಿಂದ ಒಟ್ಟು 24.16 ಲಕ್ಷ ರೂಪಾಯಿ ವಿದ್ಯುತ್ ಬಿಲ್ ಬಾಕಿ ಇದ್ದು, ತಕ್ಷಣವೇ ಪಾವತಿ ಮಾಡಬೇಕು ಎಂದು ಬೆಂಗಳೂರು ವಿದ್ಯುತ್ ಸರಬರಾಜು ಕಂಪೆನಿ (ಬೆಸ್ಕಾಂ) ಸರ್ಕಾರಕ್ಕೆ ಇತ್ತೀಚೆಗೆ ಪತ್ರ ಬರೆದಿದೆ.

ವಿದ್ಯುತ್ ಬಿಲ್ ಪಾವತಿ ಮಾಡದವರ ಪಟ್ಟಿಯಲ್ಲಿ ಗೃಹ ಸಚಿವ ಆರ್.ಅಶೋಕ, ಗ್ರಾಮೀಣಾಭಿವೃದ್ಧಿ ಸಚಿವ ಜಗದೀಶ ಶೆಟ್ಟರ್, ಸಣ್ಣ ನೀರಾವರಿ ಸಚಿವ ಗೋವಿಂದ ಕಾರಜೋಳ ಅವರ ಹೆಸರು ಕೂಡ ಇದೆ.

ಡಿ.ಸುಧಾಕರ್, ಬಿ.ಶ್ರೀರಾಮುಲು, ವೆಂಕಟರಮಣಪ್ಪ, ಎಸ್.ಎನ್.ಕೃಷ್ಣಯ್ಯಶೆಟ್ಟಿ, ಪಿ.ಎಂ.ನರೇಂದ್ರಸ್ವಾಮಿ, ಜಿ.ಕರುಣಾಕರ ರೆಡ್ಡಿ ಅವರು ಸಚಿವರಾಗಿದ್ದ ಸಂದರ್ಭದಲ್ಲಿ ವಿವಿಧ ಸರ್ಕಾರಿ ವಸತಿ ಗೃಹಗಳಲ್ಲಿ ನೆಲೆಸಿದ್ದರು. ಇವರು ಕೂಡ ತಮ್ಮ ನಿವಾಸಗಳ ವಿದ್ಯುತ್ ಬಿಲ್ ಅನ್ನು ಬಾಕಿ ಉಳಿಸಿಕೊಂಡಿದ್ದಾರೆ ಎಂದು ಬೆಸ್ಕಾಂ ಸರ್ಕಾರಕ್ಕೆ ಬರೆದ ಪತ್ರದಲ್ಲಿ ಉಲ್ಲೇಖಿಸಿದೆ.

ವಿಧಾನ ಪರಿಷತ್ತಿನ ಸಭಾಪತಿಯಾಗಿದ್ದ ವೀರಣ್ಣ ಮತ್ತಿಕಟ್ಟಿ ಹಾಗೂ ಇತ್ತೀಚೆಗಷ್ಟೇ ನಿಧನರಾದ ಡಾ.ವಿ.ಎಸ್.ಆಚಾರ್ಯ ಹೆಸರು ಕೂಡ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡವರ ಪಟ್ಟಿಯಲ್ಲಿದೆ.

ಬೆಸ್ಕಾಂನ ಪಶ್ಚಿಮದ 4ನೇ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರೊಬ್ಬರು ಸರ್ಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ರಾಜ್ಯ ಶಿಷ್ಟಾಚಾರ) ಅಧೀನ ಕಾರ್ಯದರ್ಶಿ ಕೆ.ಎಚ್.ಚಂದ್ರಯ್ಯ ಅವರಿಗೆ ವಿದ್ಯುತ್ ಬಿಲ್ ಬಾಕಿ ಬಗ್ಗೆ ಮೀಟರ್ ನಂಬರ್ ಸಹಿತ ಉಲ್ಲೇಖಿಸಿ, ಯಾರಿಂದ ಎಷ್ಟು ಬಾಕಿ ಇದೆ ಎಂಬುದರ ಬಗ್ಗೆ ವಿವರವಾದ ಪತ್ರ ಬರೆದಿದ್ದಾರೆ.

ನಂತರ ಚಂದ್ರಯ್ಯ ಅವರು ಮುಖ್ಯಮಂತ್ರಿಯವರ ಪರವಾಗಿ ಅವರ ಆಪ್ತ ಕಾರ್ಯದರ್ಶಿ ಸೇರಿದಂತೆ ಇತರ ಎಲ್ಲರಿಗೂ ಪತ್ರ ಬರೆದು ತಕ್ಷಣವೇ ಬೆಸ್ಕಾಂಗೆ ವಿದ್ಯುತ್ ಬಿಲ್ ಪಾವತಿ ಮಾಡುವಂತೆ ಸೂಚಿಸಿದ್ದಾರೆ. ಪಾವತಿ ನಂತರ ಆ ಬಗ್ಗೆ ಶಿಷ್ಟಾಚಾರ ವಿಭಾಗಕ್ಕೆ ವರದಿ ಮಾಡುವಂತೆಯೂ ಆದೇಶ ಹೊರಡಿಸಿದ್ದಾರೆ. ನೋಟಿಸ್ ಸ್ವೀಕರಿಸಿರುವ ಸಚಿವರು/ಮಾಜಿ ಸಚಿವರು ಇನ್ನೂ ವಿದ್ಯುತ್ ಬಿಲ್ ಪಾವತಿ ಮಾಡಿಲ್ಲ ಎನ್ನಲಾಗಿದೆ.

ಸರ್ಕಾರವೇ ನೀಡುತ್ತದೆ: ಸಚಿವರಾದವರಿಗೆ ಸರ್ಕಾರಿ ವಸತಿ ಗೃಹ ನೀಡುವುದಲ್ಲದೆ, ವಿದ್ಯುತ್, ನೀರು ಮತ್ತು ದೂರವಾಣಿ ಸಂಪರ್ಕದ ಖರ್ಚು ವೆಚ್ಚಗಳನ್ನು ಸರ್ಕಾರವೇ ಭರಿಸುತ್ತದೆ. ಆದರೆ, ಬಿಲ್ ಬಂದ ತಕ್ಷಣ ಆಯಾ ಸಚಿವರ ಆಪ್ತ ಸಿಬ್ಬಂದಿ ಅದರ ಪಾವತಿಗೆ ಕ್ರಮ ತೆಗೆದುಕೊಳ್ಳಬೇಕು. ಹಾಗೆ ಮಾಡದ ಕಾರಣದಿಂದ ಈ ಗೊಂದಲ ಸೃಷ್ಟಿಯಾಗಿದ್ದು, ಇದರಿಂದ ಬಡವಾಗಿದ್ದು ಮಾತ್ರ ಆರ್ಥಿಕ ಸಂಕಷ್ಟದಲ್ಲಿರುವ ಬೆಸ್ಕಾಂ.

ಸರ್ಕಾರಿ ವಸತಿ ಗೃಹಗಳ ವಿದ್ಯುತ್, ನೀರು ಮತ್ತು ದೂರವಾಣಿ ಬಿಲ್ನ ಪಾವತಿ ವ್ಯವಸ್ಥೆಯನ್ನು 2006ರವರೆಗೂ ವಿಧಾನಸೌಧದಲ್ಲಿನ ಎಕ್ಸಿಕ್ಯುಟಿವ್ ವಿಭಾಗವೇ ನೋಡಿಕೊಳ್ಳುತ್ತಿತ್ತು. ಆದರೆ, 2006ರಲ್ಲಿ ಈ ಸಂಬಂಧ ತಿದ್ದುಪಡಿ ತಂದು, ಸಚಿವರ ಆಪ್ತ ಕಾರ್ಯದರ್ಶಿಯವರಿಗೇ ವಿದ್ಯುತ್ ಮತ್ತು ನೀರಿನ ಬಿಲ್ ಪಾವತಿಯ ಜವಾಬ್ದಾರಿ ವಹಿಸಲಾಗಿತ್ತು.

ಬಿಲ್ ಬಂದ ತಕ್ಷಣ ಪಾವತಿಸುವುದು ಅಥವಾ ಅದಕ್ಕೆ ಸಂಬಂಧಿಸಿದಂತೆ ದಾಖಲೆಗಳನ್ನು ಸರ್ಕಾರಕ್ಕೆ ಸಲ್ಲಿಸಿ, ಅಲ್ಲಿಂದ ಮರುಪಾವತಿ ಪಡೆಯಲು ಸೂಚನೆ ನೀಡಲಾಗಿತ್ತು. ಈ ಸೂಚನೆಯನ್ನು ಬಹುತೇಕ ಸಚಿವರ ಆಪ್ತ ಸಿಬ್ಬಂದಿ ಗಂಭೀರವಾಗಿ ಪರಿಗಣಿಸಿಲ್ಲ. ಅದರ ಫಲ ಈ ಬಾಕಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.