ಮಂಗಳವಾರ, ಜನವರಿ 28, 2020
17 °C

ಬೇಡಿಕೆ ಈಡೇರಿಕೆಗೆ ಗ್ರಾಮ ಲೆಕ್ಕಾಧಿಕಾರಿಗಳ ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗೋಕಾಕ:- ಕರ್ನಾಟಕ ರಾಜ್ಯ ಗ್ರಾಮ ಲೆಕ್ಕಾಧಿಕಾರಿಗಳ ಸಂಘದ ಗೋಕಾಕ ಶಾಖೆ ವತಿಯಿಂದ ಪದಾಧಿಕಾರಿಗಳು ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಶಾಸಕ ರಮೇಶ ಜಾರಕಿಹೊಳಿ ಅವರಿಗೆ ಬುಧವಾರ ಮನವಿ  ಸಲ್ಲಿಸಿದರು. ಗ್ರಾಮ ಲೆಕ್ಕಾಧಿಕಾರಿಗಳ ಕಚೇರಿಯ ಎಲ್ಲ ಸೇವೆಗಳನ್ನು ಸಕಾಲ ಕಾನೂನಿನ ಅಡಿಯಲ್ಲಿ ಜಾರಿಗೊಳಿಸಿರುವುದರಿಂದ ಎಲ್ಲ ಗ್ರಾಮ ಲೆಕ್ಕಾಧಿಕಾರಿಗಳು ದಿನಂಪ್ರತಿ ಅಟಲ್‌ಜಿ ಜನಸ್ನೇಹಿ ಕೇಂದ್ರಗಳಿಗೆ ಭೇಟಿ ನೀಡುವುದು ಅರ್ನಿವಾಯ.

ಆದರೆ ಸರ್ಕಾರವು ಎಫ್.ಟಿ.ಎ. ₨200   ಮಾತ್ರ ನೀಡುತ್ತಿದೆ. ಕನಿಷ್ಟ ₨ 2.000 ಗಳಿಗೆ ಹೆಚ್ಚಿಸಬೇಕು,  ಗ್ರಾಮ ಲೆಕ್ಕಾ ಧಿಕಾರಿಗಳು ದಿನಂಪ್ರತಿ ಗಣಕೀಕ­ರಣದ ಭೂಮಿ ಕೇಂದ್ರದಲ್ಲಿ ಕಾರ್ಯ ನಿರ್ವ ಹಿಸಬೇಕಾಗಿರುವುದರಿಂದ  ತಾಂತ್ರಿಕ ಸಿಬ್ಬಂದಿ ವರ್ಗಕ್ಕೆ ಪದನ್ನೋತಿ­ಗೊಳಿಸಿ ಹೊಸ ವೇತನ ಶ್ರೇಣಿ  ಜಾರಿಗೊಳಿಸಬೇಕು, ಗ್ರಾಮ ಮಟ್ಟದಲ್ಲಿ ಗ್ರಾಮ ಲೆಕ್ಕಾ­ಧಿಕಾರಿ­ಗಳ ಚಾವಡಿ ದುರಸ್ತಿ ಮಾಡಿ­ಕೊಡಲು ಹಾಗೂ ಕೆಲವೊಂದು ಗ್ರಾಮಗಳಲ್ಲಿ ಹೊಸದಾಗಿ ಚಾವಡಿ ನಿರ್ಮಿಸಬೇಕು ಮತ್ತು ಅಗತ್ಯ ಪೀಠೋಪ­ಕರಣ­ಗಳನ್ನು ಒದಗಿಸಬೇಕು, ಭೂಮಿ ಕೇಂದ್ರಗಳಿಗೆ ಗಣಕಯಂತ್ರಗಳನ್ನು 2001­ರಲ್ಲಿ ಪೂರೈಸಲಾಗಿದ್ದು ಅವೆಲ್ಲವೂ ಇದೀಗ ದುರಸ್ತಿ ಹಂತದಲ್ಲಿ ಇರುವುದರಿಂದ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗಿತ್ತಿದೆ.

ಅಲ್ಲದೆ ರಾತ್ರಿ ಸಮಯದಲ್ಲೂ ಸಹ ಕಾರ್ಯ ನಿರ್ವಸಬೇಕಾದ ಅನಿವಾರ್ಯತೆ ಎದು­ರಾ­ಗುತ್ತಿದೆ. ಕಾರಣ, ಭೂಮಿ ಕೇಂದ್ರ­ದಲ್ಲಿರುವ ಎಲ್ಲ ಗಣಕಯಂತ್ರ­ಗಳನ್ನು ಬದಲಿಸಬೇಕು ಮತ್ತು ಇನ್ನೂ ಹೆಚ್ಚು ಗಣಕ ಯಂತ್ರಗಳನ್ನು ಒದಗಿಸಬೇಕೆಂದು ಮನವಿಯಲ್ಲಿ ಆಗ್ರಹಿಸಿದ್ದಾರೆ. ಗ್ರಾಮ ಲೆಕ್ಕಾಧಿಕಾರಿಗಳ ಸಂಘದ ಅಧ್ಯಕ್ಷ ಎಸ್.ಬಿ. ಪಾಶ್ಚಾಪೂರ, ಕಾರ್ಯ­ದರ್ಶಿ ಎಸ್.ಎನ್. ಹಿರೇಮಠ, ಕೋರ ಕಮಿಟಿ ಅಧ್ಯಕ್ಷ ಎಚ್.ಎಸ್. ಪಾಟೀಲ, ಖಜಾಂಚಿ ಡಿ.ಎಸ್. ದೇಸಾಯಿ ಮತ್ತು ತಾಲ್ಲೂಕು ಸರ್ಕಾರಿ  ನೌಕರರ ಸಂಘದ ಸದಸ್ಯ ಎನ್.ಎಂ. ಬನ್ನಿಶೆಟ್ಟಿ, ಜಿ.ಬಿ. ಮುತ್ತೆಪ್ಪಗೋಳ  ಉಪಸ್ಥಿತರಿದ್ದರು.ಭೂಮಿಪೂಜೆ

ಬೆಳಗಾವಿ:
‘ವಿದ್ಯಾರ್ಥಿಗಳು ಗುಣ­ಮಟ್ಟದ ಶಿಕ್ಷಣ ಪಡೆಯುವ ಮೂಲಕ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು’ ಎಂದು ಶಾಸಕ ಅರವಿಂದ ಪಾಟೀಲ ಸಲಹೆ ನೀಡಿದರು. ಖಾನಾಪುರ ತಾಲ್ಲೂಕಿನ ಗುಂಜಿ ಗ್ರಾಮ­ದಲ್ಲಿ ಸರ್ಕಾರಿ ಮರಾಠಿ ಪ್ರೌಢ­ಶಾಲೆಯ ಕಟ್ಟಡದ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.ದೀಪಕರಾವ್‌ ದೇಸಾಯಿ ಅಧ್ಯಕ್ಷತೆ ವಹಿಸಿದ್ದರು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಕ್ಷ್ಮೀ ಸುತಾರ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಸ್ವಾತಿ ಪವಾರ, ಮುಖ್ಯಾಧ್ಯಾಪಕ ಎಸ್‌.ಎನ್‌. ದಡಗಲ್‌, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ವಸಂತ ಬಾಂದೋಡಕರ, ರಾವಜಿ ಬಿರ್ಜೆ, ವೆಂಕಟರಾಮ್, ಬಸವರಾಜ ಮ್ಯಾಗೋಟಿ ಉಪಸ್ಥಿತರಿದ್ದರು. ಎಸ್.ಎನ್‌. ದಂಡಗಲ್‌ ವಂದಿಸಿದರು.

ಪ್ರತಿಕ್ರಿಯಿಸಿ (+)