ದೊಡ್ಡ ಬಿದಿರು ಬುಟ್ಟಿಯಲ್ಲಿ ಬೇವಿನ ಸೊಪ್ಪಿನ ನಡುವೆ ಕುಳಿತ ಭಂಗಿಯಲ್ಲಿರುವ ಕರಿಬಣ್ಣದ ಜೊಕುಮಾರಸ್ವಾಮಿಯನ್ನು ಹೊತ್ತುಕೊಂಡು, `ಅಡ್ಡಡ್ಡ ಮಳಿ ಬಂದು ದೊಡ್ಡದೊಡ್ಡ ಕೆರಿತುಂಬಿ,
ಗೊಡ್ಡುಗಳೆಲ್ಲ ಹೈನಾಗೆ ಜೋಕುಮಾರ...~ ಹೀಗೆ ಶುಶ್ರಾವ್ಯ ವಾಗಿ ಹಾಡುತ್ತಾ ಮನೆಮನೆಗಳಿಗೆ ತೆರಳುವ ಮಹಿಳೆಯರು ಇಂದು ಅಪರೂಪ ವಾಗಿದ್ದಾರೆ.

ಕೆಳಜಾತಿಯ ಹುಡುಗಿಯ ಜೊತೆಗಿನ ಅನೈತಿಕ ಸಂಬಂಧದ ಕಾರಣದಿಂದ ಕೊಲೆಗೀಡಾಗುವ(?) ಜೋಕುಮಾರಸ್ವಾಮಿಯು ಶ್ರಾವಣ ಮಾಸದಲ್ಲಿ ಬರುವ ಗೌರಿ, ಗಣೇಶರಂತೆ, ದಸರೆಯಲ್ಲಿ ಪ್ರತ್ಯಕ್ಷ ವಾಗುವ ದುರ್ಗೆಯಂತೆ, ದೀಪಾವಳಿ ಯಲ್ಲಿ ಮನೆಮನೆಗಳಲ್ಲಿ ಮೆರೆಯುವ ಮಹಾಲಕ್ಷ್ಮಿಯಂತೆ ಸುಪ್ರಸಿದ್ಧನಲ್ಲ.
ಆ ಕಾರಣದಿಂದ ಬೆಂಗಳೂರು, ಮೈಸೂರು, ಹುಬ್ಬಳ್ಳಿ- ಧಾರವಾಡ ದಂಥ ಮಹಾನಗರಗಳಲ್ಲಿ ವಾಸಿಸುತ್ತಿ ರುವ ಮಕ್ಕಳಿಗೆ ಹಾಗೂ ಈ ತಲೆಮಾರಿನ ಯುವ ಸಮೂಹಕ್ಕೆ ಜೊಕುಮಾರಸ್ವಾಮಿ ಅಪರಿಚಿತ.

ಗ್ರಾಮೀಣ ಭಾಗ ಒಳಗೊಂಡಂತೆ ಭಾಗಶಃ ಅವಸಾನದ ಅಂಚಿನಲ್ಲಿರುವ ಜೋಕುಮಾರಸ್ವಾಮಿಯ ಆಚರಣೆ, ಧಾರ್ಮಿಕ ವಿಧಿವಿಧಾನ, ಮಹತ್ವ ಹಾಗೂ ಅದರ ಸಂದೇಶಗಳು ನಿಧಾನ ವಾಗಿ ಜನಮಾನಸದಿಂದ ದೂರವಾ ಗುತ್ತಿರುವುದು ಜಾನಪದ ಲೋಕದ ದೊಡ್ಡ ದುರಂತ. ಜೋಕುಮಾ ರಸ್ವಾಮಿ ಕುರಿತು ಲಭ್ಯವಿರುವ ಜಾನಪ ದಗೀತೆಯು ಇಂದಿನ ಸಿನಿಮಾ ಹಾಗೂ ವಿವಿಧ ಬಗೆಯ ಅಬ್ಬರದ ಸಂಗೀತದ ನಡುವೆ ಕಣ್ಮರೆಯಾಗತೊಡಗಿದೆ.

ಗಣೇಶ ಸತ್ತ (ವಿಸರ್ಜನೆಯಾದ) ನಂತರ ಏಳನೆ ದಿನಕ್ಕೆ ಹುಟ್ಟುವನೆಂದು ಹೇಳಲ್ಪಡುವ ಜೋಕುಮಾ ರಸ್ವಾ ಮಿಯ ಆಚರಣೆ ಇತ್ತೀಚಿನ ವರ್ಷ ಗಳಲ್ಲಿ ಅಲ್ಲೊಂದು ಇಲ್ಲೊಂದು ಹಳ್ಳಿ ಗಳಲ್ಲಿ ಮಾತ್ರ ಕಾಣಸಿಗುತ್ತದೆ. ಈಗಾ ಗಲೇ ಕಣ್ಮರೆಯಾಗಿರುವ ವಿವಿಧ ಧಾರ್ಮಿಕ, ಸಾಂಸ್ಕೃತಿಕ, ಜಾನಪದಿಯ ಆಚರಣೆಗಳ ಜೊತೆಗೆ ಜೋಕುಮಾ ರಸ್ವಾಮಿಯ ಆಚರ ಣೆಯು ಬರಲಿ ರುವ ತಲೆಮಾರಿನಿಂದ ಮರೆತು ಹೋದರೆ ಆಶ್ಚರ್ಯಪಡಬೇಕಿಲ್ಲ. ಮೇಲಾಗಿ ಗ್ರಾಮೀಣ ಭಾಗಗಳಲ್ಲಿ ಜೋಕುಮಾರಸ್ವಾಮಿಯ ಆಚರಣೆಯ ಸಂಪೂರ್ಣ ಜವಾಬ್ದಾರಿಯನ್ನು ಹೊತ್ತಿರುವ ನಿಗದಿತ ಮತ್ತು ಸೀಮಿತ ಕುಟುಂಬಗಳ ಮಹಿಳೆಯರಿಗೆ ನಿಶ್ಚಿತ ವಾದ ವರಮಾನ ಅಥವಾ ಆದಾಯದ ಮೂಲವಿಲ್ಲದಿರುವುದು ಜೋಕುಮಾ ರಸ್ವಾಮಿ ಆಚರಣೆಗೆ ಇರುವ ಬಹು ದೊಡ್ಡ ತೊಡಕಾಗಿದೆ ಎನಿಸುತ್ತಿದೆ.
ಹಿಂದಿನ ಕಾಲದಲ್ಲಿ ಏಳು ದಿನಗಳ ಕಾಲ ಭಾರವಾದ ಜೋಕುಮಾ ರಸ್ವಾ ಮಿಯನ್ನು ಹೊತ್ತು ಮನೆಮ ನೆಗಳಿಗೆ ತೆರಳುತ್ತಿದ್ದ ಮಹಿಳೆಯರಿಗೆ ಸಾಕಷ್ಟು ಪ್ರಮಾಣದಲ್ಲಿ ಜೋಳ, ಅಕ್ಕಿ, ಗೋದಿ, ಒಣ ಮೆಣಸಿನಕಾಯಿ, ಬೆಣ್ಣೆ, ಕಾಸು ದೊರೆಯುತ್ತಿತ್ತು. ಇಂದು ನೀಡು ವವರ ಸಂಖ್ಯೆ ಗಣನೀಯವಾಗಿ ಕಡಿಮೆ ಯಾಗಿದ್ದು, ಜೋಕುಮಾರಸ್ವಾ ಮಿಯನ್ನು ಹೊತ್ತು ತಿರುಗಲು ಮಹಿಳೆಯರು ಹಿಂದೆಮುಂದೆ ನೋಡುವಂತಾಗಿದೆ.

ಈ ಕುರಿತು `ಪ್ರಜಾ ವಾಣಿ~ಯೊಂದಿಗೆ ಮಾತನಾ ಡಿದ ಪಟ್ಟಣದ ಪದ್ಮಾವತಿ ಬಾರಕೇರ `ಜೋಕಪ್ಪನ ಹೊರೊದು ಈಗ ಮೊದ್ಲಿನಷ್ಟು ಸರಳ ಇಲ್ರಿ, ಮೊದ್ಲೆಲ್ಲ ಜೋಕಪ್ಪನ ಹೊತಗೊಂಡ ಹ್ವಾದವ್ರಿಗೆ ಬೆಣ್ಣಿ, ಬ್ಯಾಳಿ, ಅಕ್ಕಿ, ಬೆಲ್ಲ, ಜ್ವಾಳ, ಕಡ್ಲಿ ಸಾಕಷ್ಟ ಕೊಡತಿದ್ರರಿ. ಈಗ ಕೊಡಾವ್ರ ಭಾಳ ಕಡಿಮಿ ಆಗ್ಯಾರ್ರಿ. ಏನೋ ಹಿಂದಕಿನ ಹಿರಿಯರು ಜೋಕುಮಾರನ ಹಬ್ಬಾ ಮಾಡ ಕೊಂಡ ಬರತಿದ್ರರಿ. ಈಗ ಬಿಡಬಾರದು ಅಂತ ಹೇಳಿ ನಾವು ಮಾಡಾಕಹತ್ತೇವ್ರಿ.

ನಮ್ಮ ತಲಿ ಹ್ವಾದದ ಮ್ಯಾಲ ನಮ್ಮ ಮನ್ಯಾಗ ಜೋಕಪ್ಪನ ಯಾರು ಹೊರೊದಿಲ್ಲ ಅಂತ ಅನ್ನಸ್ತೈತ್ರಿ~ ಎಂದು ತನ್ನ ಮನದಾಳದ ಮಾತುಗಳನ್ನು ಹೊರಗೆಡವಿದರು ಅವರು. ತಲಾಂತ ರದಿಂದ ಜೋಕುಮಾ ರಸ್ವಾಮಿಯನ್ನು ಹೊರು ತ್ತಿರುವ ಪಟ್ಟಣದ ಹನುಮವ್ವ ಬಾರಕೇರ, ದೇವಕ್ಕ ಬಾರಕೇರ, ರೇಣು ಕವ್ವ ಬಾರಕೇರ ಮೊದಲಾದ ಮಹಿಳೆ ಯರು ಇದೇ ದಾಟಿಯಲ್ಲಿ ಮಾತನಾಡಿ ತಮ್ಮ ಮನದಾಳದ ನೋವನ್ನು ಹಂಚಿ ಕೊಂಡರು.
ಸರಕಾರ ಈ ಕುರಿತು ಗಂಭೀರವಾಗಿ ಚಿಂತಿಸಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.