ಸೋಮವಾರ, ಜೂನ್ 14, 2021
22 °C

ಬೇಸ್ತು ಬೀಳಿಸುವ ನಾಣ್ಯಗಳು

ವಾರಿಜಾ ಜಗದೀಶ್ Updated:

ಅಕ್ಷರ ಗಾತ್ರ : | |

ದೈನಂದಿನ ಜೀವನ ನಿರ್ವಹಣೆಗೆ ಹಣವು ಅವಶ್ಯಕ ವಸ್ತುಗಳಲ್ಲಿ  ಒಂದು. ಈ ಹಣವು ನೋಟು ಅಥವಾ ನಾಣ್ಯಗಳ ರೂಪದಲ್ಲಿ  ಚಲಾವಣೆಯಲ್ಲಿ ಇದೆ. ವಿವಿಧ ಮೌಲ್ಯದ ನಾಣ್ಯಗಳು ಮತ್ತು ನೋಟುಗಳನ್ನು ಕಾಣಬಹುದು.

 

ನೋಟುಗಳು ಕಾಗದದಿಂದ ತಯಾರಿಸುವುದರಿಂದ ಕೆಲವು ಕಾಲ ಬಳಕೆಯಾಗಿ ನಂತರ ಹಾಳಾಗುವುದು ಸಹಜ. ಆದರೆ, ಲೋಹಗಳಿಂದ ತಯಾರಾದ ನಾಣ್ಯಗಳು ಎಷ್ಟು ವರ್ಷ ಬಳಕೆ ಮಾಡಿದರೂ ಹಾಳಾಗುವುದಿಲ್ಲ.ಇವು ಜನರಿಗೆ ಚಿಲ್ಲರೆ ವಿನಿಮಯ ಮಾಡಿಕೊಳ್ಳಲು ಹೆಚ್ಚು ಉಪಯೋಗಕ್ಕೆ ಬರುತ್ತವೆ.  ಈಗ  ರೂ.1  ಮತ್ತು ರೂ. 2  ನೋಟುಗಳು ಈಗ  ಚಲಾವಣೆಯಲ್ಲಿ ಇಲ್ಲ. ರೂ. 5 ನೋಟುಗಳ ಚಲಾವಣೆಯೂ ಕಡಿಮೆಯಾಗುತ್ತಿದೆ. ಆದರೆ, ಇವುಗಳ ಜಾಗದಲ್ಲಿ ರೂ. 1,  ರೂ. 2   ಮತ್ತು ರೂ. 5 ನಾಣ್ಯಗಳು ಹೆಚ್ಚು ಚಲಾವಣೆಯಲ್ಲಿ  ಇವೆ.ಇತ್ತೀಚೆಗೆ ಚಲಾವಣೆಗೆ ಬಂದಿರುವ ರೂ. 1 ಮತ್ತು ರೂ. 2  ನಾಣ್ಯಗಳ ಮದ್ಯೆ ವ್ಯತ್ಯಾಸ ಗುರುತಿಸುವುದೇ ದೊಡ್ಡಸವಾಲಿನ ಕೆಲಸವಾಗಿದೆ. 50 ಪೈಸೆಯ ನಾಣ್ಯದ ರೀತಿಯ ರೂ.5  ನಾಣ್ಯವೂ ಚಲಾವಣೆಯಲ್ಲಿದ್ದು ಜನರು ಸುಲಭವಾಗಿ ಬೇಸ್ತು ಬೀಳುತ್ತಿದ್ದಾರೆ.ಸಾಧಾರಣವಾಗಿ ಮನುಷ್ಯನ ಸ್ವಭಾವವೆಂದರೆ ನಾಣ್ಯವನ್ನು ನೋಡದೇ ಅದನ್ನು ಕೈಯಲ್ಲಿ ಹಿಡಿದುಕೊಂಡೇ ಅದರ ಮೌಲ್ಯ ನಿರ್ಧರಿಸುವುದು ಬಳಕೆಯಲ್ಲಿ ಇದೆ.ಈಗ ಚಲಾವಣೆಯಲ್ಲಿ ಇರುವ ನಾಣ್ಯಗಳನ್ನು ಮುದ್ರಿಸಿ ಬಳಕೆಗೆ ತರುತ್ತಲೇ ಹೋದರೆ ಜನರು ಮೋಸ ಹೋಗುವುದು ಖಚಿತ.  ಹೆಚ್ಚು ಕಡಿಮೆ ಎಲ್ಲ ನಾಣ್ಯಗಳೂ  ಒಂದೇ ರೀತಿ ಅನ್ನಿಸುತ್ತವೆ.ಆದ್ದರಿಂದ ಅದರ ಮೇಲೆ ಮುದ್ರಿತವಾದ ಮೌಲ್ಯ  ನೋಡಿಯೇ ಚಿಲ್ಲರೇ ವ್ಯವಹಾರ ಮಾಡುವುದು ಒಳಿತು. ನಾಣ್ಯಗಳ ಮೌಲ್ಯ ಕಡಿಮೆಯಾಗಿದ್ದರೂ ಅನವಶ್ಯಕವಾಗಿ ಹೆಚ್ಚಿಗೆ ಅಥವಾ ಕಡಿಮೆ ಕೊಡುವುದು ಅಥವಾ ತೆಗೆದುಕೊಳ್ಳುವುದು ಸಮಂಜಸವಲ್ಲ.ವಿವಿಧ ಮೌಲ್ಯದ  ನಾಣ್ಯಗಳ ರಚನೆ (ಡಿಸೈನ್) ಮತ್ತು ತೂಕಗಳಲ್ಲಿ ವ್ಯತ್ಯಾಸ ಇದ್ದರೆ ಗುರುತಿಸುವುದು ಸುಲಭ. ನಾಣ್ಯ ಮತ್ತು ನೋಟುಗಳ ಮುದ್ರಣ ಮತ್ತು ಚಲಾವಣೆಯ ಹೊಣೆ ನಿಭಾಯಿಸುವ ಭಾರತೀಯ ರಿಸರ್ವ್ ಬ್ಯಾಂಕ್, ನಾಣ್ಯಗಳ ಗಾತ್ರ, ರಚನೆ, ವಿನ್ಯಾಸ, ತೂಕ ಮತ್ತಿತರ ವಿಷಯಗಳಲ್ಲಿ ಕಂಡು ಬಂದಿರುವ ದೋಷಗಳನ್ನು ಸರಿಪಡಿಸಲು ಮುಂದಾಗಬೇಕಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.