ಶಿವಮೊಗ್ಗ: ನಗರದಲ್ಲಿ ಗುರುವಾರ ಸ್ಪ್ಲೆಂಡರ್ ಬೈಕ್ನಲ್ಲಿ ನಾಗರಹಾವು ಕಾಣಿಸಿಕೊಂಡರೆ, ಕೊಳಕು ಮಂಡಲ ಹಾವು ಮನೆಯೊಂದರ ಮುಂಭಾಗದಲ್ಲಿ ದರ್ಶನ ಭಾಗ್ಯ ತೋರಿಸಿದೆ.

ನಗರದ ನಿವಾಸಿ ಕಿರಣ್ಕುಮಾರ್ ತಮ್ಮ ಬೈಕ್ ದುರಸ್ತಿಗಾಗಿ ಎನ್.ಟಿ.ರಸ್ತೆಯ ನ್ಯೂ ಮಂಡ್ಲಿ ಸಮೀಪದ ಗ್ಯಾರೇಜ್ವೊಂದರ ಬಳಿ ಬಿಟ್ಟಿದ್ದರು. ಈ ವೇಳೆ ಬೈಕ್ನ ಸೀಟ್ ಕೆಳಭಾಗದಲ್ಲಿ ನಾಗರ ಹಾವು ಅಡಗಿ ಕುಳಿತಿರುವುದು ಗಮನಕ್ಕೆ ಬಂದಿದೆ. ತಕ್ಷಣವೇ ಅವರು ಉರಗತಜ್ಞ ಸ್ನೇಕ್ ಕಿರಣ್ ಅವರನ್ನು ಸಂಪರ್ಕಿಸಿದ್ದಾರೆ.

ಈ ಹಾವನ್ನು ಕೆಲ ನಿಮಿಷಗಳಲ್ಲಿಯೇ ಸುರಕ್ಷಿತವಾಗಿ ಕಿರಣ್ ಸೆರೆ ಹಿಡಿದರು. ಬೈಕ್ ಸೀಟ್ ಕೆಳಭಾಗದಲ್ಲಿದ್ದ ಸುಮಾರು 4 ಅಡಿ ಉದ್ದ ಈ ಹಾವು ನೋಡಲು ಜನಜಂಗುಳಿಯೇ ಸೇರಿತ್ತು.

ಕೊಳಕು ಮಂಡಲವು ಕಾಶೀಪುರ ರಸ್ತೆಯ ಸಿದ್ರಾಮ ಬಡಾವಣೆಯ ರಾಧಾಕೃಷ್ಣ ಎಂಬುವರ ಮನೆಯ ಮುಂಭಾಗದಲ್ಲಿ ಹಾವು ಕಾಣಿಸಿಕೊಂಡಿತ್ತು. ಸುಮಾರು ನಾಲ್ಕೂವರೆ ಅಡಿ ಉದ್ದ ಇದ್ದ ಈ ಹಾವು ಸ್ನೇಕ್ ಕಿರಣ್ ಬಲೆಗೆ ಬಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.