ಮುಂಬೈ (ಪಿಟಿಐ): ಸಾಲ ನೀಡಿಕೆ ಪ್ರಮಾಣಕ್ಕಿಂತ ಬ್ಯಾಂಕುಗಳ ಠೇವಣಿ ಸಂಗ್ರಹ ಮತ್ತೊಮ್ಮೆ ಏರಿಕೆ ಕಂಡಿದೆ. ಮಾ.7ಕ್ಕೆ ಕೊನೆಗೊಂಡಂತೆ ಬ್ಯಾಂಕುಗಳ ಠೇವಣಿ ಸಂಗ್ರಹ ಶೇ 15.55ರಷ್ಟು ಹೆಚ್ಚಿದ್ದು ₨76.92 ಲಕ್ಷ ಕೋಟಿಗೆ ಏರಿಕೆ ಕಂಡಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಹೇಳಿದೆ.

ವಾಣಿಜ್ಯ ಬ್ಯಾಂಕುಗಳಲ್ಲಿನ ಠೇವಣಿ ಸಂಗ್ರಹ ₨66.57 ಲಕ್ಷ ಕೋಟಿಯಷ್ಟಾಗಿದೆ. ಠೇವಣಿ ಸಂಗ್ರಹಕ್ಕೆ ಹೋಲಿಸಿದರೆ, ಸಾಲ ನೀಡಿಕೆ ಪ್ರಮಾಣ ವಾರ್ಷಿಕ ಶೇ 14.65ರಷ್ಟು ಏರಿಕೆ ಕಂಡಿದೆ. ಈ ವರ್ಷ ₨59.37 ಲಕ್ಷ ಕೋಟಿ ಸಾಲ ನೀಡಲಾಗಿದೆ. ಕಳೆದ ಸಾಲಿನಲ್ಲಿ ₨51.78 ಲಕ್ಷ ಕೋಟಿ ಸಾಲ ನೀಡಲಾಗಿತ್ತು.

ಪ್ರಸಕ್ತ ಹಣಕಾಸು ವರ್ಷದಲ್ಲಿ ಠೇವಣಿ ಸಂಗ್ರಹ ಶೇ 14ರಷ್ಟು ಮತ್ತು ಸಾಲ ನೀಡಿಕೆ ಪ್ರಮಾಣ ಶೇ 15ರಷ್ಟು ಹೆಚ್ಚಬಹುದು ಎಂದು ‘ಆರ್ಬಿಐ’ ಅಂದಾಜು ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.