ಚಂಡಿಗಡ (ಪಿಟಿಐ): ಸಾರ್ವಜನಿಕ ಹಣ ದುರುಪಯೋಗ, ಒಳಸಂಚು ಹಾಗೂ ವಂಚನೆಯ ಆರೋಪದ ಮೇಲೆ ಪಂಜಾಬ್ ನ್ಯಾಷನಲ್ ಬ್ಯಾಂಕ್ ನ ಹಿರಿಯ ವ್ಯವಸ್ಥಾಪಕ ಹಾಗೂ ನಿವೃತ್ತ ಮುಖ್ಯ ವ್ಯವಸ್ಥಾಪಕ ಸೇರಿದಂತೆ ಬ್ಯಾಂಕ್ ನ ಕೆಲವು ನಿವೃತ್ತ ಹಿರಿಯ ಅಧಿಕಾರಿಗಳ ವಿರುದ್ಧ ಸಿಬಿಐ ತಂಡ ಭಾನುವಾರ ಪ್ರಕರಣವನ್ನು ದಾಖಲಿಸಿದೆ.

ಎಸ್.ಎಂ. ಮಹಾಜನ್ (ನಿವೃತ್ತ ಮುಖ್ಯ ವ್ಯವಸ್ಥಾಪಕ), ಎನ್.ಕೆ. ಮೆಹತಾ (ನಿವೃತ್ತ ಉಪ ವ್ಯವಸ್ಥಾಪಕ), ಆರ್.ಕೆ. ಛಾಬ್, ಧೀರಜ್ ಸಿಂಗ್ ಹಾಗೂ ಮಮತಾ ಚೌಧರಿ ಬಂಧಿತ ಆರೋಪಿಗಳಾಗಿದ್ದಾರೆ.

~ಬ್ಯಾಂಕ್ ಅಧಿಕಾರಿಗಳು 2005-09 ರ ಅವಧಿಯಲ್ಲಿ ಸಾರ್ವಜನಿಕ ಹಣದ ದುರುಪಯೋಗ ಮಾಡಿಕೊಳ್ಳುವುದರೊಂದಿಗೆ ನಕಲಿ ಹಾಗೂ ಮುಚ್ಚಿದ ಕಂಪೆನಿಗಳಿಗೆ ಬ್ಯಾಂಕಿನಿಂದ ಸಾಲು ಮುಂಜೂರು ಮಾಡಿರುವುದು ಬೆಳಕಿಗೆ ಬಂದಿದೆ. ಇವರೊಂದಿಗೆ ಬ್ಯಾಂಕ್ ನ ನಿವೃತ್ತ ಅಧಿಕಾರಿಗಳು ಹಾಗೂ ಉದ್ದೆಮಿಗಳು ಶಾಮೀಲಾಗಿರುತ್ತಾರೆ. ಇದರಿಂದ ಬ್ಯಾಂಕ್ ಗೆ ಒಟ್ಟು 3.95 ಕೋಟಿ ರೂ. ಹಣ ನಷ್ಟವಾಗಿರುತ್ತದೆ~ ಎಂದು ಸಿಬಿಐನ ಹಿರಿಯ ಅಧಿಕಾರಿಗಳ ತಂಡ ತಿಳಿಸಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ತನಿಖೆ ಆರಂಭಗೊಂಡಿದ್ದು, ಬ್ಯಾಂಕ್ ನ ದಾಖಲೆಗಳನ್ನು ವಶಪಡಿಸಿಕೊಂಡಿದ್ದು, ಆರೋಪಿಗಳ ವಿಚಾರಣೆ ನಡೆಸಲಾಗುತ್ತಿದೆ~ ಎಂದು ಸಿಬಿಐ ಹಿರಿಯ ಅಧಿಕಾರಿ ಮಹೇಶ್ ಅಗರವಾಲ್ ಸುದ್ದಿ ಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.