ಶುಕ್ರವಾರ, ಮೇ 7, 2021
25 °C

ಬ್ಯಾಂಕ್ ಖಾತೆಗಳಿಗೆ ವಿದೇಶದಿಂದಲೇ ಕನ್ನ : ರೂ 13 ಲಕ್ಷ ಮಂಗಮಾಯ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ: ಕಳೆದೆರಡು ತಿಂಗಳ ಅವಧಿಯಲ್ಲಿ ಇಲ್ಲಿನ 12 ಪೊಲೀಸರು ಸೇರಿದಂತೆ ಒಟ್ಟು 29 ವ್ಯಕ್ತಿಗಳ ಆ್ಯಕ್ಸಿಸ್ ಬ್ಯಾಂಕ್ ಖಾತೆಗಳಿಗೆ ಕನ್ನ ಹಾಕಿರುವ ಸೈಬರ್ ಚೋರರು ರೂ 13 ಲಕ್ಷ ನಗದು ಲಪಟಾಯಿಸಿರುವ ಘಟನೆ ಬೆಳಕಿಗೆ ಬಂದಿದೆ.



ಬ್ರಿಟನ್ ಮತ್ತು ಗ್ರೀಸ್ ರಾಷ್ಟ್ರಗಳ ಎಟಿಎಂಗಳಿಂದ ಯೂರೊ ಕರೆನ್ಸಿಯಲ್ಲಿ ಈ ನಗದು ಪಡೆಯಲಾಗಿದೆ. ತಮ್ಮ ಖಾತೆಗಳಿಂದ ಹಣ ಪಡೆದಿರುವ ಬಗ್ಗೆ ಪೊಲೀಸರ ಮೊಬೈಲ್‌ಗಳಿಗೆ ಎಸ್‌ಎಂಎಸ್ ಬಂದ ನಂತರ ಈ ಕಿಡಿಗೇಡಿತನ ಬಹಿರಂಗಗೊಂಡಿತು. ಎಸ್‌ಎಂಎಸ್ ಬಂದ ತಕ್ಷಣ  ಪೊಲೀಸರು ಹತ್ತಿರದ ಎಟಿಎಂ ಗಳಿಗೆ ಹೋಗಿ ಪರೀಕ್ಷಿಸಿದಾಗ ಅವರ ಖಾತೆಗಳಿಂದ ಹಣ ತೆಗೆದಿರುವುದು ಖಚಿತಪಟ್ಟಿತು. ಡೆಬಿಟ್ ಕಾರ್ಡ್‌ಗಳನ್ನು ಪಡಿಯಚ್ಚಿನಂತೆ ನಕಲು ಮಾಡಿ ಈ ದುಷ್ಕೃತ್ಯ ಎಸಗಿರಬಹುದು ಎಂಬುದು ಪೊಲೀಸರ ಅಂದಾಜು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.