ಶುಕ್ರವಾರ, ಜನವರಿ 17, 2020
24 °C

ಬ್ಯಾಡಗಿ: ಮೆಣಸಿನಕಾಯಿ ಬೆಲೆ ಏರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬ್ಯಾಡಗಿ: ಇಲ್ಲಿಯ ಮಾರುಕಟ್ಟೆಗೆ ಸೋಮವಾರ 46,091 ಚೀಲ ಮೆಣಸಿನಕಾಯಿ ಆವಕವಾಗಿದ್ದು, ಕನಿಷ್ಠ ಬೆಲೆಯಲ್ಲಿ ಏರಿಕೆ ಕಂಡುಬಂದಿದೆ.ಪ್ರತಿ ಕ್ವಿಂಟಲ್‌ಗೆ ಬ್ಯಾಡಗಿ ಕಡ್ಡಿ ಮೆಣಸಿನಕಾಯಿ ಕನಿಷ್ಠ ದರದಲ್ಲಿ ರೂ 1,689 ಏರಿಕೆಯಾಗಿದ್ದರೆ, ಗರಿಷ್ಠ ದರದಲ್ಲಿ ರೂ 980 ಇಳಿಕೆಯಾಗಿದೆ.  ಬ್ಯಾಡಗಿ ಡಬ್ಬಿ ಮೆಣಸಿನಕಾಯಿ ಕನಿಷ್ಠ ದರದಲ್ಲಿ ರೂ 2,900 ಏರಿಕೆಯಾಗಿದ್ದರೆ, ಗರಿಷ್ಠ ದರದಲ್ಲಿ  ರೂ 200 ಮಾತ್ರ ಇಳಿಕೆಯಾಗಿದೆ. ಗುಂಟೂರ ಮೆಣಸಿನಕಾಯಿ ಕನಿಷ್ಠ ದರದಲ್ಲಿ ಸ್ಥಿರತೆ ಮುಂದುವರಿದಿದ್ದು, ಗರಿಷ್ಠ ದರದಲ್ಲಿ ರೂ 980 ಇಳಿಕೆಯಾಗಿದೆ. ಕಳೆದ ಗುರುವಾರ ಮಾರುಕಟ್ಟೆಗೆ 43,945 ಚೀಲ ಮೆಣಸಿನಕಾಯಿ ಆವಕವಾಗಿತ್ತು.

ಪ್ರತಿಕ್ರಿಯಿಸಿ (+)