ಬ್ಯಾಡ್ಮಿಂಟನ್: ಪಿ.ವಿ. ಸಿಂಧುಗೆ ಬೆಳ್ಳಿ

ರಿಯೊ ಡಿ ಜನೈರೊ: ರಿಯೊ ಒಲಿಂಪಿಕ್ಸ್ನ ಮಹಿಳೆಯರ ಬ್ಯಾಡ್ಮಿಂಟನ್ ಫೈನಲ್ ಪಂದ್ಯದಲ್ಲಿ ಸ್ಪೇನ್ನ ಕ್ಯಾರೊಲಿನಾ ಮರಿನ್ ಎದುರು ಪರಾಭವಗೊಂಡ ಭಾರತದ ಪಿ.ವಿ. ಸಿಂಧು ಬೆಳ್ಳಿ ಪದಕ ತಮ್ಮದಾಗಿಸಿಕೊಂಡಿದ್ದಾರೆ.
ರಿಯೊ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ಗೆದ್ದ ಮೊದಲ ಕ್ರೀಡಾಪಟು ಎಂಬ ಹೆಗ್ಗಳಿಕೆಗೆ ಸಿಂಧು ಪಾತ್ರರಾಗಿದ್ದಾರೆ.
ಮೊದಲ ಸೆಟ್ನಲ್ಲಿ ಪಿ.ವಿ. ಸಿಂಧು 21–19ರಲ್ಲಿ ಗೆಲುವು ಪಡೆದರು. ಎರಡನೇ ಸೆಟ್ನಲ್ಲಿ ಕ್ಯಾರೊಲಿನಾ ಮರಿನ್ 21–12ರ ಗೆಲುವು ದಾಖಲಿಸಿದರು.
ಮೂರನೇ ಸೆಟ್ನಲ್ಲಿ ಕ್ಯಾರೊಲಿನಾ ಮರಿನ್ 21–15ರ ಮೂಲಕ ಸ್ಪರ್ಧೆಯ ಅಂತಿಮ ಗೆಲುವನ್ನು ತಮ್ಮದಾಗಿಸಿಕೊಂಡರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.