ಭಾನುವಾರ, ಜನವರಿ 26, 2020
31 °C

ಬ್ಯಾಡ್ಮಿಂಟನ್: ಆನಂದ್ ಪವಾರ್, ಸೌರಭ್ ವರ್ಮಾಗೆ ನಿರಾಸೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಭಾರತದ ಆನಂದ್ ಪವಾರ್ ಮತ್ತು ಸೌರಭ್ ವರ್ಮಾ ಸೋಲ್‌ನಲ್ಲಿ ನಡೆಯುತ್ತಿರುವ ಕೊರಿಯಾ ಸೂಪರ್ ಸೀರಿಸ್ ಬ್ಯಾಡ್ಮಿಂಟನ್ ಟೂರ್ನಿಯ ಪ್ರಧಾನ ಹಂತ ಪ್ರವೇಶಿಸಲು ವಿಫಲರಾದರು.ಮಂಗಳವಾರ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಅರ್ಹತಾ ಹಂತದ ಎರಡನೇ ಸುತ್ತಿನ ಪಂದ್ಯದಲ್ಲಿ ಆನಂದ್ 18-21, 24-22, 18-21 ರಲ್ಲಿ ಕೊರಿಯಾದ ಸುಂಗ್ ಮಿನ್ ಪಾರ್ಕ್ ಎದುರು ಸೋಲು ಅನುಭವಿಸಿದರು.ಸೌರಭ್ ವರ್ಮಾ 21-15, 14-21, 18-21 ರಲ್ಲಿ ಮಲೇಷ್ಯದ ಡರೆನ್ ಲೀವ್ ಎದುರು ಪರಾಭವಗೊಂಡರು.

ಸೌರಭ್ ಇತ್ತೀಚೆಗೆ ನಡೆದ ಸಯ್ಯದ್ ಮೋದಿ ಗ್ರ್ಯಾನ್ ಪ್ರಿ ಟೂರ್ನಿಯ ಫೈನಲ್ ಪ್ರವೇಶಿಸಲು ಯಶಸ್ವಿಯಾಗಿದ್ದರು.ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಪಿ.ವಿ. ಸಿಂಧು ಕೂಡಾ ಪ್ರಧಾನ ಹಂತ ಪ್ರವೇಶಿಸಲಿಲ್ಲ.ಅರ್ಹತಾ ಹಂತದ ಎರಡನೇ ಸುತ್ತಿನ ಪಂದ್ಯದಲ್ಲಿ ಭಾರತದ ಆಟಗಾರ್ತಿ 19-21, 14-21 ರಲ್ಲಿ ಆತಿಥೇಯ ದೇಶದ ಹೆ ಯೂನ್ ಹ್ವಾಂಗ್‌ಗೆ ಶರಣಾದರು. ಮೊದಲ ಪಂದ್ಯದಲ್ಲಿ ಅವರು 21-19, 21-18 ರಲ್ಲಿ ಇಂಡೊನೇಷ್ಯದ ಮರಿಯಾ ಫೆಬಿ ಕುಸುಮಸ್ತುತಿ ವಿರುದ್ಧ ಜಯ ಸಾಧಿಸಿದ್ದರು.

ಪ್ರತಿಕ್ರಿಯಿಸಿ (+)