ಬುಧವಾರ, ಸೆಪ್ಟೆಂಬರ್ 23, 2020
21 °C

ಬ್ಯಾಡ್ಮಿಂಟನ್: ಸೆಮಿಫೈನಲ್‌ಗೆ ನಿಕಿತಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬ್ಯಾಡ್ಮಿಂಟನ್: ಸೆಮಿಫೈನಲ್‌ಗೆ ನಿಕಿತಾ

ಬೆಂಗಳೂರು: ನಿಕಿತಾ ರಮೇಶ್ ಅವರು ಇಲ್ಲಿ ನಡೆಯುತ್ತಿರುವ ಬೌರಿಂಗ್ ಇನ್‌ಸ್ಟಿಟ್ಯೂಟ್ ಮತ್ತು ಕರ್ನಾಟಕ ಬ್ಯಾಡ್ಮಿಂಟನ್ ಸಂಸ್ಥೆ ಆಶ್ರಯದ ಫೈವ್ ಸ್ಟಾರ್ ರಾಜ್ಯ ರ್ಯಾಂಕಿಂಗ್ ಬ್ಯಾಡ್ಮಿಂಟನ್ ಟೂರ್ನಿಯ ಬಾಲಕಿಯರ 10 ವರ್ಷ ವಯಸ್ಸಿನೊಳಗಿನವರ ವಿಭಾಗದ ಸೆಮಿಫೈನಲ್ ಪ್ರವೇಶಿಸಿದರು.



ಗುರುವಾರ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ನಿಕಿತಾ 21-8, 21-5 ರಲ್ಲಿ ಕೀರ್ತನಾ ವಿರುದ್ಧ ಸುಲಭ ಗೆಲುವು ಪಡೆದರು. ಇತರ ಪಂದ್ಯಗಳಲ್ಲಿ ತೃಷಾ ಹೆಗ್ಡೆ 21-7, 21-8 ರಲ್ಲಿ ಜೆ. ದೀತ್ಯಾ ಎದುರೂ, ಪ್ರಾರ್ಥನಾ ವಾಸುದೇವನ್ 21-8, 21-8 ರಲ್ಲಿ ಅದಿತಿ ಕೃಷ್ಣ ಮೇಲೂ, ದೃತ್ಯತೀಶ್ 21-11, 22-10 ರಲ್ಲಿ ಆರ್. ಸಹನಾ ವಿರುದ್ಧವೂ ಗೆಲುವು ಪಡೆದರು.



ಅವಿನಾಶ್‌ಗೆ ಜಯ: ಬಾಲಕರ 12 ವರ್ಷ ವಯಸ್ಸಿನೊಳಗಿನವರ ವಿಭಾಗದ ಪ್ರೀ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಅವಿನಾಶ್ ಅವರು 21-9, 18-21, 21-19 ರಲ್ಲಿ ಶಕೀಲ್ ವಿರುದ್ಧ ಜಯ ಪಡೆದು ಎಂಟರಘಟ್ಟ ಪ್ರವೇಶಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.