ರಿಯೊ ಡಿ ಜನೈರೊ (ಎಪಿ): ವನಿತೆಯರ ಜಿಮ್ನಾಸ್ಟಿಕ್ಸ್ನ ಬ್ಯಾಲೆನ್ಸಿಂಗ್ ಬೀಮ್ ವಿಭಾಗದಲ್ಲಿ ಅಮೆರಿಕದ ಪ್ರಾಬಲ್ಯಕ್ಕೆ ಸೋಮವಾರ ತೆರೆ ಬಿತ್ತು. ಸೈಮನ್ ಬೈಲ್ಸ್ ಅವರ ಐದು ಚಿನ್ನದ ಪದಕ ಗಳನ್ನು ಗೆಲ್ಲುವ ಕನಸಿನ ಓಟಕ್ಕೂ ತೆರೆ ಬಿತ್ತು.

ನೆದರ್ಲೆಂಡ್ನ ಸಾನ್ ವೇವರ್ಸ್ ಚಿನ್ನದ ಪದಕಕ್ಕೆ ಕೊರಳೊಡ್ಡಿದರು. ಬೈಲ್ಸ್ ಕಂಚಿನ ಪದಕಕ್ಕೆ ತೃಪ್ತಿಪಡ ಬೇಕಾಯಿತು. ಅವರ ಸಹಪಾಠಿ ಲಾರೀ ಹರ್ನೆಂಜ್ ಬೆಳ್ಳಿ ಪದಕ ಪಡೆದರು.

ರಿಯೊ ಒಲಿಂಪಿಕ್ಸ್ನ ಜಿಮ್ನಾಸ್ಟಿಕ್ಸ್ನಲ್ಲಿ ಸಿಮೋನ್ಗೆ ಇದು ನಾಲ್ಕನೇ ಪದಕ. ಅವರು ತಂಡದ ವಿಭಾಗ, ಆಲ್ರೌಂಡ್ ವಿಭಾಗ ಮತ್ತು ವಾಲ್ಟ್ನಲ್ಲಿ ಚಿನ್ನದ ಪದಕಗಳನ್ನು ಗಳಿಸಿದ್ದರು. ಫ್ಲೋರ್ ಎಕ್ಸೈಜ್ ಮಾತ್ರ ಈಗ ಬಾಕಿ ಉಳಿದಿದೆ.

ಬ್ಯಾಲೆನ್ಸಿಂಗ್ ಬೀಮ್ನಲ್ಲಿ ಉತ್ತಮ ಪ್ರದರ್ಶನ ನೀಡಿದ ನೆದರ್ಲೆಂಡ್ನ ವೇವರ್ಸ್ ಅವರು 15.466 ಪಾಯಿಂಟ್ ಗಳನ್ನು ಗಳಿಸಿದರು. ಅದ ರೊಂದಿಗೆ ಅಗ್ರಸ್ಥಾನದಲ್ಲಿ ಮೆರೆದರು. ಬೀಮ್ ಮೇಲೆ ಅಮೋಘ ವಾದ ಸಮತೋಲನ ಸಾಧಿಸಿದ ಅವರು, ಟಕ್ ಸಮರ್ ಸಾಲ್ಟ್, ರೋಲಿಂಗ್ ಸೇರಿದಂತೆ ಕ್ಷಿಷ್ಟಕರ ಕಸರತ್ತುಗಳನ್ನು ಶಿ ಸ್ತುಬದ್ಧವಾಗಿ ಮಾಡಿದರು. ಅದರೊಂದಿಗೆ ನಿರ್ಣಾಯಕರ ಮನ ಗೆದ್ದರು.

ಅವರಿಗೆ ನಿಕಟ ಪೈಪೋಟಿ ಒಡ್ಡಿದ ಅಮೆರಿಕದ ಲಾರೀ 15.333 ಅಂಕಗ ಳನ್ನು ಸಂಗ್ರಹಿಸುವಲ್ಲಿ ಸಫಲರಾದರು. ಎರಡನೇ ಸ್ಥಾನ ಪಡೆದರು. 19 ವರ್ಷದ ಬೈಲ್ಸ್ ತಮ್ಮ ಎಂದಿನ ಚುರುಕುತನದ ಪ್ರದರ್ಶನ ನೀಡಿದರೂ ವೇವರ್ಸ್ ಅವರನ್ನು ಹಿಂದಿಕ್ಕಲು ಆಗಲಿಲ್ಲ. ಪೆಟ್ರೊನಿಯಸ್ಗೆ ಚಿನ್ನ: ಗ್ರೀಸ್ನ ಎಲ್ಫೆತೆರಿಯೊಸ್ ಅವರು ಪುರುಷರ ಜಿಮ್ನಾಸ್ಟಿಕ್ಸ್ನ ರಿಂಗ್ಸ್ನಲ್ಲಿ ಚಿನ್ನದ ಪದಕ ಗೆದ್ದರು.

ಅಮೋಘವಾದ ಕಸರತ್ತುಗಳ ಮತ್ತು ನಿಖರವಾದ ಎಲಿಮೆಂಟ್ಗಳ ಮೂಲಕ 16.000 ಅಂಕಗಳನ್ನು ಗಳಿಸಿದ ಅವರು ಮೊದಲ ಸ್ಥಾನ ಪಡೆದರು.
ಆತಿಥೇಯ ಬ್ರೆಜಿಲ್ನ ಆರ್ಥರ್ ಜನೆಟ್ಟಿ (15.766 ಅಂಕಗಳು) ಮತ್ತು ರಷ್ಯಾದ ಡೆನಿಸ್ ಅಬ್ಲಿಯಾಜಿನ್ (15.700) ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕ ಪಡೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.