ಸೋಮವಾರ, ಜೂನ್ 14, 2021
27 °C

ಬ್ಯಾಸ್ಕೆಟ್‌ಬಾಲ್‌: ಕ್ವಾರ್ಟರ್‌ ಫೈನಲ್‌ಗೆ ಕರ್ನಾಟಕ ಮಹಿಳಾ ತಂಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಐಎಎನ್‌ಎಸ್‌): ಕರ್ನಾಟಕ ಮಹಿಳಾ ತಂಡ ಇಲ್ಲಿ ನಡೆಯುತ್ತಿರುವ 64ನೇ ರಾಷ್ಟ್ರೀಯ ಬ್ಯಾಸ್ಕೆಟ್‌ಬಾಲ್‌ ಚಾಂಪಿಯನ್‌ ಷಿಪ್‌ನಲ್ಲಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದೆ.



ತ್ಯಾಗರಾಜ ಕ್ರೀಡಾ ಸಂಕೀರ್ಣದಲ್ಲಿ ಸೋಮವಾರ ನಡೆದ ಪ್ರೀ ಕ್ವಾರ್ಟರ್‌ ಫೈನಲ್‌ ಹೋರಾಟದಲ್ಲಿ ಕರ್ನಾಟಕ  ಮಹಿಳಾ ತಂಡದವರು 84–72ರಲ್ಲಿ ಆಂಧ್ರಪ್ರದೇಶ ತಂಡವನ್ನು ಮಣಿಸಿದರು.



ಪುರುಷರಿಗೆ ನಿರಾಸೆ: ಪುರುಷರ ವಿಭಾಗದ ಪಂದ್ಯದಲ್ಲಿ ಕರ್ನಾಟಕ 54–87ರಲ್ಲಿ ತಮಿಳು ನಾಡು ತಂಡದ ವಿರುದ್ಧ ನಿರಾಸೆ ಅನುಭವಿಸಿತು.‌ ಪ್ರೀ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಕರ್ನಾಟಕ 90–77ರಲ್ಲಿ ರಾಜಸ್ತಾನದ ಎದುರು ಜಯ ಪಡೆದಿತ್ತು.



ಸೆಮಿಫೈನಲ್‌ಗೆ ಉತ್ತರಾಖಂಡ:  ಪುರುಷರ ವಿಭಾಗದ ಮತ್ತೊಂದು ಕ್ವಾರ್ಟರ್‌ ಫೈನಲ್‌ ಪೈಪೋಟಿಯಲ್ಲಿ  ಹಾಲಿ ಚಾಂಪಿಯನ್‌ ಉತ್ತರಾ ಖಂಡ ತಂಡ 93–74ರಲ್ಲಿ ಕೇರಳ ತಂಡವನ್ನು ಮಣಿಸಿ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿತು.



ದಿನದ ಮತ್ತೊಂದು ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಸರ್ವೀಸಸ್‌  104–72ರಲ್ಲಿ ರೈಲ್ವೇಸ್‌ ತಂಡವನ್ನು ಸೋಲಿಸಿ ನಾಲ್ಕರ ಘಟ್ಟಕ್ಕೆ ತಲುಪಿತು.



ಮಹಿಳಾ ವಿಭಾಗದ ಕ್ವಾರ್ಟರ್‌ ಫೈನಲ್‌ ಹೋರಾಟದಲ್ಲಿ ದೆಹಲಿ 111–58ರಲ್ಲಿ ಪಂಜಾಬ್‌ ತಂಡವನ್ನು ಬಗ್ಗುಬಡಿದು ಸೆಮಿಫೈನಲ್‌ ಪ್ರವೇಶ ಪಡೆದುಕೊಂಡಿತು.



ಈ ವಿಭಾಗದ ಇತರ ಪಂದ್ಯಗಳಲ್ಲಿ ಹರಿ ಯಾಣ 75–59ರಲ್ಲಿ ಛತ್ತೀಸಗಡದ ಮೇಲೂ, ರೈಲ್ವೇಸ್‌ 90–50ರಲ್ಲಿ ತಮಿಳುನಾಡು ತಂಡದ ಎದುರೂ ಗೆದ್ದು ನಾಲ್ಕರ ಘಟ್ಟಕ್ಕೆ ತಲುಪಿದವು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.