ಬೆಂಗಳೂರು:ಯಶಸ್ ಅವರು ತಂದಿತ್ತ 31 ಪಾಯಿಂಟ್ಗಳ ನೆರವಿನಿಂದ ಪ್ರೆಸಿಡೆನ್ಸಿ ಕಾಲೇಜು ತಂಡದವರು ಇಲ್ಲಿ ನಡೆಯುತ್ತಿರುವ ಅಂತರ ಕಾಲೇಜು ಬ್ಯಾಸ್ಕೆಟ್ಬಾಲ್ ಟೂರ್ನಿಯಲ್ಲಿ ಜಯ ಸಾಧಿಸಿದರು.ಮೌಂಟ್ ಕಾರ್ಮೆಲ್ ಕಾಲೇಜು ಬ್ಯಾಸ್ಕೆಟ್ಬಾಲ್ ಕೋರ್ಟ್ನಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಪ್ರೆಸಿಡೆನ್ಸಿ ಕಾಲೇಜು 53-49 ರಲ್ಲಿ ಶ್ರೀ ಭಗವಾನ್ ಮಹಾವೀರ್ ಜೈನ್ ಕಾಲೇಜು ತಂಡವನ್ನು ಪರಾಭವಗೊಳಿಸಿತು.

ಆರ್ವಿಸಿಇ ತಂಡ 74- 50 ರಲ್ಲಿ ಬಿಎಂಸಿ ವಿರುದ್ಧ ಗೆಲುವು ಪಡೆಯಿತು. ವಿರಾಮದ ವೇಳೆಗೆ 34-26 ರಲ್ಲಿ ಮುನ್ನಡೆ ಸಾಧಿಸಿದ್ದ ವಿಜಯಿ ತಂಡದ ಪರ ವಿನಯ್ (14) ಮತ್ತು ಸೂರ್ಯ (20) ಅವರು ಉತ್ತಮ ಪ್ರದರ್ಶನ ನೀಡಿದರು.

ಎಂಎಸ್ಆರ್ಐಟಿ ತಂಡದವರು 42-30 ರಲ್ಲಿ ಎಂವಿಜೆಸಿಇ ತಂಡವನ್ನು ಮಣಿಸಿದರು.ವಿರಾಮದ ವೇಳೆಗೆ ಎಂಎಸ್ಆರ್ಐಟಿ 28-12 ರಲ್ಲಿ ಮೇಲುಗೈ ಸಾಧಿಸಿತ್ತು.ಸಮರ್ಥ್ (10) ಅವರು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಮತ್ತೊಂದು ಪಂದ್ಯದಲ್ಲಿ ರಾಹುಲ್ ಅವರು ತಂದಿತ್ತ 22 ಪಾಯಿಂಟ್ಗಳ ನೆರವಿನಿಂದ ಎಸ್ಜೆಸಿಸಿ ತಂಡ 52-44 ರಲ್ಲಿ ಬಾಲ್ಡ್ವಿನ್ಸ್ ವಿರುದ್ಧ ಜಯ ಪಡೆಯಿತು. ರಾಹುಲ್ಗೆ ಉತ್ತಮ ಬೆಂಬಲ ನೀಡಿದ ಶೇಷರಾಜ್ 12 ಪಾಯಿಂಟ್ಗಳನ್ನು ತಂದಿತ್ತರು.

ಎಂಸಿಸಿಗೆ ಜಯ: ಮೋನಿಕಾ (10) ಮತ್ತು ಕೃತ್ತಿಕಾ (16) ಅವರ ಉತ್ತಮ ಆಟದ ನೆರವಿನಿಂದ ಎಂಸಿಸಿ ತಂಡದವರು ಇದೇ ಟೂರ್ನಿಯ ಮಹಿಳೆಯರ ವಿಭಾಗದ ಪಂದ್ಯದಲ್ಲಿ 69-27 ರಲ್ಲಿ ಕ್ರೈಸ್ಟ್ ಕಾಲೇಜು ತಂಡವನ್ನು ಮಣಿಸಿದರು.

ವಿರಾಮದ ವೇಳೆಗೆ ಎಂಸಿಸಿ ತಂಡ 46-19 ರಲ್ಲಿ ಭಾರಿ ಅಂತರದ ಮುನ್ನಡೆ ಸಾಧಿಸಿತ್ತು.ಮತ್ತೊಂದು ಪಂದ್ಯದಲ್ಲಿ ಎಸ್ಬಿಎಂಜೆಸಿ ತಂಡ 39-25 ರಲ್ಲಿ ಕ್ರಿಸ್ತು ಜಯಂತಿ ಕಾಲೇಜು ತಂಡವನ್ನು ಸೋಲಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.