ಶನಿವಾರ, ಮೇ 21, 2022
23 °C

ಬ್ರಹ್ಮರಥೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಗರದಲ್ಲಿ ಇಂದು, ನಾಳೆ ಎರಡು ಕಡೆ ಬ್ರಹ್ಮರಥೋತ್ಸವ ನಡೆಯಲಿದೆ. ಸನಾತನ ಭಕ್ತ ಮಂಡಲಿ ಟ್ರಸ್ಟ್ ಆಶ್ರಯದಲ್ಲಿ ಮಂಗಳವಾರ ಬೆಳಿಗ್ಗೆ 7 ಕ್ಕೆ ಕಲಶಸ್ಥಾಪನೆ, ಕೋದಂಡರಾಮಸ್ವಾಮಿಗೆ ಮಹಾಕುಂಭಾಭಿಷೇಕ, ಸಪರಿವಾರ ಶ್ರೀರಾಮತಾರಕ ಹೋಮ, 12.30ಕ್ಕೆ ಬ್ರಹ್ಮರಥೋತ್ಸವ, ಮಹಾನೀರಾಜನ. ಸಂಜೆ 6 ಕ್ಕೆ ರಥಾವರೋಹಣ, ಶಾಂತ್ಯುತ್ಸವ, ಉಯ್ಯಾಲೋತ್ಸವ,.

ಬುಧವಾರ ನವಗ್ರಹ ಕುಂಭಾಭಿಷೇಕ. ಬೆಳಿಗ್ಗೆ 8.30ಕ್ಕೆ  ಶ್ರೀವಲ್ಲಿ ಶ್ರೀದೇವಸೇನಾ ಸುಬ್ರಹ್ಮಣ್ಯ ಹೋಮ, ನಾಗದೇವತಾ ಹೋಮ, ಪೂರ್ಣಾಹುತಿ, ಕುಂಭಾಭಿಷೇಕ. ಸಂಜೆ ದೇವರ ಕಲ್ಯಾಣೋತ್ಸವ.

ಸ್ಥಳ: ಕೋದಂಡರಾಮ ದೇವಾಲಯ, ಕಾರ್ಡ್ ರಸ್ತೆ (ಪೂರ್ವ), ವಿಜಯನಗರ.

ಸತ್ಯನಾರಾಯಣ ದೇವಾಲಯ

ಸ್ಫೂರ್ತಿ ವಿನಾಯಕ ಸಹಿತ ಶ್ರೀ ಸತ್ಯನಾರಾಯಣ ಸ್ವಾಮಿ ದೇವಾಲಯದಲ್ಲಿ  ಮಂಗಳವಾರ ರಾತ್ರಿ 8ಕ್ಕೆ ಕೆರೆಯ ಹತ್ತಿರ ಗಜೇಂದ್ರ ಮೋಕ್ಷಪುರಾಣ ಸೇವೆ, ನಂತರ ಗಜ ನಾದನೋತ್ಸವ.

ಬುಧವಾರ ಬೆಳಿಗ್ಗೆ ಬ್ರಹ್ಮರಥೋತ್ಸವ. ಈ ಸಂದರ್ಭದಲ್ಲಿ ವಿಮಾನದಿಂದ ಪುಷ್ಪವೃಷ್ಟಿ. ಸಂಜೆ ದೇವಾಲಯದ ಆವರಣದಲ್ಲಿ ಬಾಣ ಬಿರುಸುಗಳ ಪ್ರದರ್ಶನ, ನೃತ್ಯಗಳೊಂದಿಗೆ ವಿಧವಿಧವಾದ ವಾದ್ಯಮೇಳ, ವಿವಿಧ ದೇವರುಗಳ ಪಲ್ಲಕ್ಕಿಗಳ ಮೆರವಣಿಗೆ. ಸಂಜೆ 7 ಕ್ಕೆ ಎಂ.ಕೃಷ್ಣೇಗೌಡ, ರಿಚರ್ಡ್ ಲೂಯಿಸ್, ಮೈಸೂರ್ ಆನಂದ್ ಹಾಗೂ ಕಿರ್ಲೋಸ್ಕರ್ ಅವರಿಂದ ನಗೆಹಬ್ಬ.ಸ್ಥಳ: ಹುಳಿಮಾವು, ಬನ್ನೇರುಘಟ್ಟ ರಸ್ತೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.