ಭಾನುವಾರ, ಜನವರಿ 19, 2020
26 °C
ಕ್ರಾಸ್‌ಲ್ಯಾಂಡ್‌ ಪಿಯು ಕ್ರಾಸ್‌ರೋಡ್ಸ್‌ 2013

ಬ್ರಹ್ಮಾವರ ಎಸ್‌.ಎಂ.ಎಸ್‌ ಪಿಯು ಕಾಲೇಜಿಗೆ ಸಮಗ್ರ ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬ್ರಹ್ಮಾವರ: ನಗರದ ಕ್ರಾಸ್‌ಲ್ಯಾಂಡ್‌ ಪದವಿ ಪೂರ್ವ ಕಾಲೇಜಿನಲ್ಲಿ ಶುಕ್ರವಾರ ಪರಿಸರದ ಪದವಿ ಪೂರ್ವ ವಿದ್ಯಾರ್ಥಿಗಳಿಗೆ ನಡೆದ ಸಾಂಸ್ಕೃತಿಕ ಕಾರ್ಯಕ್ರಮ ಕ್ರಾಸ್‌ರೋಡ್‌ನ ಸಮಗ್ರ ಪ್ರಶಸ್ತಿಯನ್ನು ಬ್ರಹ್ಮಾವರದ ಎಸ್‌.ಎಂ.ಎಸ್‌ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳ ತಂಡ ಪಡೆದುಕೊಂಡಿತು.ಪೇತ್ರಿಯ ವಿದ್ಯಾ ಟ್ಯುಟೋರಿಯಲ್‌ ಕಾಲೇಜಿನ ವಿದ್ಯಾರ್ಥಿಗಳ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿತು.

ಬಹುಮಾನ ವಿತರಿಸಿ ಮಾತನಾಡಿದ ಕೋಟ ಪಡುಕೆರೆ ಲಕ್ಷ್ಮೀ ಸೋಮ ಬಂಗೇರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ಮಂಜುನಾಥ ಆಚಾರಿ ವಿದ್ಯಾರ್ಥಿಗಳ ಜೀವನದಲ್ಲಿ ಕನಸುಗಳೊಂದಿಗೆ ಪ್ರಯತ್ನವೂ ಅಗತ್ಯವಾಗಿದೆ.ಸಾಧಕ ವ್ಯಕ್ತಿಗಳ ಆದರ್ಶವನ್ನು ಜೀವನದಲ್ಲಿ ಅಳವಡಿಸಿಕೊಂಡು ಜೀವನವನ್ನು ರೂಪಿಸಿಕೊಳ್ಳಬೇಕು. ಸಿಗುವ ಅವಕಾಶ

ಗಳನ್ನು ಉಪಯೋಗಿಸಿಕೊಂಡು ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಹೊರಹಾಕಿ ಜೀವನದಲ್ಲಿ ಯಶಸ್ಸನ್ನು ಗಳಿಸಿ ಎಂದು ಶುಭ ಹಾರೈಸಿ­ದರು.ಪದವಿ ಕಾಲೇಜಿನ ಉಪಪ್ರಾಂಶುಪಾಲರಾದ ಪ್ರೊ.ಎಲಿಜೆಬೆತ್‌ ರಾಯ್‌ ಮಾತನಾಡಿ ಸ್ಪರ್ಧೆ­ಯಲ್ಲಿ ಸೋಲು ಗೆಲುವುಗಳು ನಿಶ್ಚಿತ. ಸೋಲನ್ನು ಸ್ವೀಕರಿಸಿ ಭವಿಷ್ಯವನ್ನು ನಿರ್ಮಿಸಿಕೊಳ್ಳುವಂತೆ ಸಲಹೆ ನೀಡಿದರು.ಕನ್ನಡ, ಆಂಗ್ಲ ಭಾಷೆಯಲ್ಲಿ ಭಾಚಣ ಸ್ಪರ್ಧೆ, ಸಮೂಹಗಾನ, ಸಮೂಹ ನೃತ್ಯ ಮತ್ತು ರಸಪ್ರಶ್ನೆಗೆ ನಡೆದ ಸ್ಪರ್ಧೆಯಲ್ಲಿ ಪರಿಸರದ 6ಪದವಿ ಪೂರ್ವ ಮತ್ತು ಟ್ಯುಟೋರಿಯಲ್‌ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.ಉಪನ್ಯಾಸಕ ಶೇಷಗಿರಿ ಭಟ್‌, ವಿದ್ಯಾರ್ಥಿ ಸಂಘದ ಸಂಚಾಲಕಿ ಸರಿತಾ, ಉಪನ್ಯಾಸಕಿ­ಯರಾದ ಪ್ರತಿಭಾ ಶೆಟ್ಟಿ, ಮಮತಾ, ಜ್ಯೋತಿ, ಸ್ಮಿತಾ ಮೈಪಾಡಿ, ರಶ್ಮಿನ್‌ ತನ್ವೀರ್‌, ಉಪನ್ಯಾಸಕ ರವಿ ಶಾಸ್ರ್ತಿ ಉಪಸ್ಥಿತರಿದ್ದರು.ವಿದ್ಯಾರ್ಥಿಗಳಾದ ಜೆಫಿನ್‌ ಸ್ವಾಗತಿಸಿದರು. ಜೆರಿನ್‌ ವಂದಿಸಿದರು. ಲ್ಯೂಕ್‌ ಕಾರ್ಯಕ್ರಮ ನಿರೂಪಿಸಿದರು.

ಇದಕ್ಕೂ ಮುನ್ನ ಬೆಳಿಗ್ಗೆ ಬ್ರಹ್ಮಾವರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕಿ ಸವಿತಾ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಪ್ರತಿಕ್ರಿಯಿಸಿ (+)