ಜ್ಯೂರಿಕ್ (ಎಎಫ್‌ಪಿ/ಐಎಎನ್‌ಎಸ್): ಮಂಗಳವಾರ ರಾತ್ರಿ ನಡೆದ ಅಚ್ಚರಿಯ ಬೆಳವಣಿಗೆಯಲ್ಲಿ ಫಿಫಾ ಅಧ್ಯಕ್ಷ ಸೆಪ್ ಬ್ಲಾಟರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

79 ವರ್ಷದ ಸ್ವಿಟ್ಜರ್‌ಲೆಂಡ್‌ನ ಬ್ಲಾಟರ್ 17 ವರ್ಷಗಳಿಂದ ಫಿಫಾ ಅಧ್ಯಕ್ಷ ರಾಗಿ ಕೆಲಸ ಮಾಡಿದ್ದರು. ಹೋದ ವಾರವಷ್ಟೇ ಆಧ್ಯಕ್ಷರಾಗಿ ಐದನೇ ಬಾರಿ ಪುನರಾಯ್ಕೆಯಾಗಿದ್ದರು.

ಫುಟ್‌ಬಾಲ್ ಟೂರ್ನಿಗಳನ್ನು ಸಂಘ ಟಿಸುವ ವಿಚಾರದಲ್ಲಿ ಫಿಫಾ ಭ್ರಷ್ಟಾಚಾರ ಎಸಗಿದೆ ಎನ್ನುವ ಆರೋಪಗಳು ಕೇಳಿ ಬಂದಿದ್ದವು.
ಆದ್ದರಿಂದ ಪೊಲೀಸರು ಇಬ್ಬರು ಫಿಫಾ ಉಪಾಧ್ಯಕ್ಷರು ಸೇರಿದಂತೆ ಕೆಲ ಪ್ರಮುಖ ಅಧಿಕಾರಿಗಳನ್ನು ಬಂಧಿಸಿದ್ದರು. ಈ ಕಾರಣಕ್ಕಾಗಿ ಬ್ಲಾಟರ್ ರಾಜೀನಾಮೆ ನೀಡಿದ್ದಾರೆ.

ಜೊತೆಗೆ, ಸದ್ಯದಲ್ಲಿಯೇ ಫಿಫಾದ ವಿಶೇಷ ಕಾಂಗ್ರೆಸ್ ಸಭೆ ಕರೆಯಲಾಗುವುದು ಎಂದು ಅವರು ತಿಳಿಸಿದ್ದಾರೆ. ಮಂಗಳವಾರ ಪತ್ರಿಕಾಗೋಷ್ಠಿಯ ನಡೆಸಿದ ಬ್ಲಾಟರ್ ತಮ್ಮ ರಾಜೀನಾಮೆ ವಿಚಾರವನ್ನು ತಿಳಿಸಿದರು. ‘ರಾಜೀನಾಮೆ ವಿಚಾರ ಅತ್ಯಂತ ಕಠಿಣ ನಿರ್ಧಾರ. ಆದರೆ, ಸರಿ ಯಾದ ನಿರ್ಧಾರ’ ಎಂದು ನುಡಿದರು.

‘ಫಿಫಾ ಜೊತೆ ಹಲವು ವರ್ಷಗಳಿಂದ ಒಡನಾಟ ಹೊಂದಿದ್ದೇನೆ. ಬದುಕಿನ ಬಹುತೇಕ ಭಾಗವನ್ನು ಫುಟ್‌ಬಾಲ್ ಅಭಿವೃದ್ಧಿಗಾಗಿ ಕಳೆದಿದ್ದೇನೆ. ಆದರೆ, ಕೆಲವರು ನನ್ನ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಐದನೇ ಬಾರಿಗೆ ಅಧ್ಯಕ್ಷನಾಗಿ ಆಯ್ಕೆಯಾದ ಬಳಿಕ ಪ್ರತಿಯೊಬ್ಬರಿಂದ ಬೆಂಬಲ ಲಭಿಸುತ್ತಿಲ್ಲ. ಆದ್ದರಿಂದ ಮತ್ತೆ ಕಾಂಗ್ರೆಸ್ ಸಭೆ ನಡೆಸುತ್ತೇವೆ’ ಎಂದು ವಿವರಿಸಿದರು.

ಭಾರತ ಬೆಂಬಲ: ಅಖಿಲ ಭಾರತ ಫುಟ್‌ಬಾಲ್ ಫೆಡರೇಷನ್ ಬ್ಲಾಟರ್ ಬೆಂಬಲಕ್ಕೆ ನಿಂತಿದೆ.

‘ಬ್ಲಾಟರ್ ನಮಗೆ ಸಾಕಷ್ಟು ಸಹಾಯ ಮಾಡಿದ್ದಾರೆ. ನಮ್ಮ ದೇಶದಲ್ಲಿ ಹಲವು ಟೂರ್ನಿಗಳನ್ನು ನಡೆಸಲು ಅವಕಾಶಗಳನ್ನು ಕೊಟ್ಟಿದ್ದಾರೆ. ಆದ್ದರಿಂದ ನಾವು ಅವರಿಗೆ ಪೂರ್ಣ ಬೆಂಬಲ ನೀಡುತ್ತೇವೆ’ ಎಂದು ಎಐಎಫ್‌ಎಫ್ ಉಪಾಧ್ಯಕ್ಷ ಸುಬ್ರತಾ ದತ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.