ಮಂಗಳವಾರ, ಏಪ್ರಿಲ್ 20, 2021
32 °C

ಭಕ್ತಿ ಸಂಪತ್ತು ಕೊಳ್ಳೆಹೊಡೆಯಲಾಗದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾವೇರಿ: `ವಿಶ್ವದಲ್ಲಿ ಖನಿಜ, ನೈಸರ್ಗಿಕ ಹಾಗೂ ಭೌತಿಕ ಸಂಪತ್ತನ್ನು ಕೊಳ್ಳೆ ಹೊಡೆಯಬಹುದು ಆದರೆ, ಭಾರತದ ಭಕ್ತಿ ಸಂಪತ್ತನ್ನು ಕೊಳ್ಳೆಹೊಡೆ ಯಲಾಗದು~ ಎಂದು ಚಿತ್ರದುರ್ಗದ ಶಿವಮೂರ್ತಿ ಮುರಘಾ ಶರಣರು ಹೇಳಿದರು.  ನಗರದ ಹೊಸ ಮಠದ ಬಸವಕೇಂದ್ರದಲ್ಲಿ ಇತ್ತೀಚೆಗೆ ನಡೆದ ಮನೆ ಮನಗಳಿಗೂ ಶರಣರ ಸಂದೇಶ ಮುಕ್ತಾಯ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ತತ್ವಜ್ಞಾನಿಗಳು, ದಾರ್ಶನಿಕರು, ಸಂತರು, ಶಿವ ಶರಣರು ಭಕ್ತಿಯ ನಾಡನ್ನು ಕಟ್ಟಿದರೇ, ಗಾಂಧೀಜಿ ರಾಷ್ಟ್ರ ಭಕ್ತಿ, ಅಂಬೇಡ್ಕರ್ ಸಂವಿಧಾನ ಭಕ್ತಿ, ಮಧರ್‌ಥೆರಸಾ ಕರುಣಿಯ ಭಕ್ತಿ, ಬಸವಣ್ಣನ ಸಮಾನತೆ ಭಕ್ತಿಯ ನಾಡು ಕಟ್ಟಿ ಸಮಾಜದ ಒಳಿತಿಗೆ ಹಗಲಿರುಳು ಶ್ರಮಿಸಿದ್ದಾರೆ ಎಂದು ತಿಳಿಸಿದರು.ಸಮಾರಂಭದ ಸಮ್ಮುಖ ವಹಿಸಿದ್ದ ಹೊಸಮಠದ ಬಸವಶಾಂತಲಿಂಗ ಶ್ರೀಗಳು ಮಾತನಾಡಿ, ಮನುಷ್ಯರಿಗೆ ಅದೃಷ್ಟ ಕೆಲವೊಂದು ಸಾರಿ ಕೈಕೊಡಬಹುದು ಆದರೆ, ಪರಿಶ್ರಮ ಆತನನ್ನು ಉತ್ತುಂಗಕ್ಕೆ ಕೊಂಡೊಯ್ಯ್‌ತ್ತದೆ ಎಂಬುವುದನ್ನು ಅರಿತು ಪ್ರತಿಯೊಬ್ಬರು ಪರಿಶ್ರಮ ದಿಂದ ಜೀವನ ನಡೆಸಬೇಕು ಎಂದರು.ಬಾವಿಯಲ್ಲಿನ ನೀರು ಕೆಲವರಿಗೆ ಮಾತ್ರ ದೊರೆತರೇ, ಹರಿಯುವ ನೀರು ಎಲ್ಲರಿಗೂ ದೊರೆಯುತ್ತದೆ. ಹೀಗೆ ಶಿವ ಶರಣರ ವಿಚಾರಗಳು ಹರಿಯುವ ನೀರಿದ್ದಂತೆ. ಈ ದಿಸೆಯಲ್ಲಿ ಶಿವ ಶರಣರ ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಸಲಹೆ ಮಾಡಿದರು.

 

ಇದೇ ಸಂದರ್ಭದಲ್ಲಿ ವಿಧಾನ ಪರಿಸತ್ ಸದಸ್ಯ ಸೋಮಣ್ಣ ಬೇವಿನಮರದ ಅವರನ್ನು ಸನ್ಮಾನಿಸಿದ ಶ್ರೀಗಳು, ಬಸವಲಿಂಗ ನಾಮಾವಳಿ ಗ್ರಂಥ ಬಿಡುಗಡೆ ಮಾಡಿದರು.ಈ ಸಂದರ್ಭದಲ್ಲಿ ಶಿರಸಿ ರುದ್ರದೇವರ ಮಠದ ಮಲ್ಲಿಕಾರ್ಜುನ ಶ್ರೀಗಳು, ವಿಧಾನ ಪರಿಷತ್ ಸದಸ್ಯ ಸೋಮಣ್ಣ ಬೇವಿನಮರದ, ಕೆಸಿಸಿ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಶಿವ ಕುಲಕರ್ಣಿ ಹಾಜರಿದ್ದರು.ಧಾರವಾಡ ಹಾಲು ಒಕ್ಕೂಟ ಅಧ್ಯಕ್ಷ ಬಸವರಾಜ ಅರಬಗೊಂಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಭಾಗ್ಯವತಿ ಕೋಡಬಾಳ ಪ್ರಾರ್ಥಿಸಿದರು. ನಾಗೇಂದ್ರ ಕಟಕೋಳ ಸ್ವಾಗತಿಸಿದರು. ಕೃಷ್ಣಾ ಜವಳಿ ನಿರೂಪಿಸಿ ದರು. ಶಿವಬಸಪ್ಪ ಮುದ್ದಿ ವಂದಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.