ಶುಕ್ರವಾರ, ಏಪ್ರಿಲ್ 23, 2021
23 °C

ಭಕ್ತ ಸಮೂಹದಿಂದ ಶಿವನಾಮ ಸ್ಮರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿಗ್ಗಾಂವ: ಮಹಾಶಿವರಾತ್ರಿ ಹಬ್ಬದ ಅಂಗವಾಗಿ ಮಕ್ಕಳು, ಮಹಿಳೆಯರು ಸೇರಿದಂತೆ ಸಾವಿರಾರು ಜನರು ಬುಧವಾರ ಉಪವಾಸ, ಜಾಗರಣೆ ಮಾಡುವ ಮೂಲಕ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಹತ್ತಿರದ ನದಿ, ಹೊಂಡಗಳಲ್ಲಿ ಪುಣ್ಯ ಸ್ನಾನ ಮಾಡಿದ ಜನರು, ಹತ್ತಿರದ ಪುಣ್ಯ ಕ್ಷೇತ್ರಗಳಿಗೆ ಹೋಗಿ ವಿಶೇಷ ಪೂಜೆ ಸಲ್ಲಿಸಿದರು. ಅದರಲ್ಲೂ ಶಿವಲಿಂಗೇಶ್ವರ ದೇವನಿಗೆ ಎಲ್ಲಿಲ್ಲದ ವಿಶೇಷ ಪೂಜಾ ಕಾರ್ಯಕ್ರಮಗಳು ಜರುಗಿದವು.ತಾಲ್ಲೂಕಿನ ಭಾವೈಕತೆಯ ಕೇಂದ್ರ ಎನ್ನಿಸಿಕೊಂಡಿರುವ ಶಿಶುವಿನಹಾಳ ಶರೀಫಶಿವಯೋಗಿಗಳ ಪುಣ್ಯ ಕ್ಷೇತ್ರ ಹಾಗೂ ಬಾಡದ ಕನಕದಾಸರ ಪುಣ್ಯ ಕ್ಷೇತ್ರದಲ್ಲಿ ಸಾವಿರಾರು ಭಕ್ತರು ಬೆಳಿಗ್ಗೆಯಿಂದ ಭಕ್ತಿಪೂರ್ವಕವಾಗಿ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ತೊಡಗಿದ್ದರು. ಗಂಗೀಭಾವಿ ಪುಣ್ಯ ಕ್ಷೇತ್ರ: ತಾಲ್ಲೂಕಿನ ಗಂಗೀಭಾವಿ ಸುಕ್ಷೇತ್ರದಲ್ಲಿ ಮಹಾಶಿವರಾತ್ರಿ ಅಂಗವಾಗಿ ವಿಶೇಷ ಕಾರ್ಯಕ್ರಮಗಳು ಜರುಗಿದವು. ನೂರಾರು ಭಕ್ತರ ಸಮೂಹ ಗಂಗಾ ತೀರ್ಥಿದಲ್ಲಿ ಪುಣ್ಯ ಸ್ನಾನ ಮಾಡಿದರು. ಬೆಳಿಗ್ಗೆ ಜಗದ್ಗುರು ಪಂಚಾಚಾರ್ಯರ ದರ್ಶನ ಪಡೆದು ಶಿವಲಿಂಗ ಮೂರ್ತಿಗೆ ಪೂಜೆ ಹಾಗೂ  ಜಗದ್ಗುರು ಪಂಚಾಚಾರ್ಯರ ಮೂರ್ತಿಗೆ ಅಭಿಷೇಕ, ಮಂಗಳಾರತಿ ನೆರವೇರಿಸಿದರು. ಬಂಕಾಪೂರ: ತಾಲ್ಲೂಕಿನ ಬಂಕಾಪುರದ ಪೇಟೆ ಯಲ್ಲಮ್ಮ ಹಾಗೂ ಕೋಟೆ ಯಲ್ಲಮ್ಮ ದೇವಾಲಯ    ಅರಳತೆಮಠ, ದುರ್ಗಾದೇವಿ, ಮೈಲಾರಲಿಂಗೇಶ್ವರ ಹಾಗೂ ಮಂಜುನಾಥ ಸ್ವಾಮಿ ದೇವಸ್ಥಾನದಲ್ಲಿ ಭಕ್ರು ವಿಶೇಷ ಪೂಜೆ ಸಲ್ಲಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.