ಸೋಮವಾರ, ಮಾರ್ಚ್ 1, 2021
31 °C

ಭಗವದ್ಗೀತೆ: ಮುಂದೆಯಾದರೂ ಚರ್ಚೆಗೆ ಸಿದ್ಧ– ಪೇಜಾವರ ಶ್ರೀ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭಗವದ್ಗೀತೆ: ಮುಂದೆಯಾದರೂ ಚರ್ಚೆಗೆ ಸಿದ್ಧ– ಪೇಜಾವರ ಶ್ರೀ

ಉಡುಪಿ: ಅಹಿತಕರ ಘಟನೆ ನಡೆಯಬಹುದು ಎಂಬ ಕಾರಣದಿಂದ ಮೈಸೂರಿನಲ್ಲಿ ಭಾನುವಾರ ಆಯೋಜಿಸಿದ್ದ ಭಗವದ್ಗೀತೆ ಪರ– ವಿರೋಧ ಚರ್ಚೆಗೆ ಪೊಲೀಸರು ಅನುಮತಿ ನೀಡಲಿಲ್ಲ ಎಂದು ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದರು.ಉಡುಪಿಯಲ್ಲಿ ಭಾನುವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ನಾವು ಕಾರ್ಯಕ್ರಮಕ್ಕೆ ಸಿದ್ಧರಾಗಿದ್ದು 200 ಪಾಸ್‌ಗಳನ್ನು ಪಡೆದಿದ್ದೆವು. ಅವರೂ ಸಿದ್ಧರಾಗಿದ್ದರು. ಭಗವದ್ಗೀತೆ ಕುರಿತು ಮಠದಲ್ಲಾಗಲೀ ಬೇರೆಡೆಯಾಗಲಿ ಮುಂದೆಯೂ  ಚರ್ಚೆಗೆ ಸಿದ್ಧ. ದ್ವೇಷ ಹುಟ್ಟಿಸುವ ಬಹಿರಂಗ ಚರ್ಚೆ ಬೇಡ’ ಎಂದರು.ರೈತರಿಗೆ ಸರ್ಕಾರ ಸ್ಪಂದಿಸುತ್ತಿಲ್ಲ: ರೈತರು ಆತ್ಮಹತ್ಯೆ ಮಾಡಿದರೆ ಕುಟುಂಬಕ್ಕೆ ನಷ್ಟ. ಆತ್ಮವಿಶ್ವಾಸ ಹಾಗೂ ಧೈರ್ಯದಿಂದ ಸಮಸ್ಯೆಯನ್ನು ಎದುರಿಸಬೇಕು. ಜನರು ಮತ್ತು ಮಾಧ್ಯಮ ಅವರ ಹಿಂದಿದೆ. ಸರ್ಕಾರ ರೈತರ ಸಮಸ್ಯೆಗೆ ಸರಿಯಾಗಿ ಸ್ಪಂದಿಸುತ್ತಿಲ್ಲ. ಅನ್ನಭಾಗ್ಯ ಯೋಜನೆ ಮಾಡಿದಂತೆ ರೈತರು ಸಾಲಬಾಧೆಯಿಂದ ಮುಕ್ತರಾಗಲು ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದರು.ಲಲಿತ್‌ ಅವರ ಪತ್ನಿ ಆರೋಪಿಯಲ್ಲ: ಮಾನವೀಯತೆ ದೃಷ್ಟಿಯಿಂದ ಇಂಗ್ಲೆಂಡ್‌ಗೆ ತೆರಳಲು ಲಲಿತ್‌ ಮೋದಿಗೆ ಸಹಾಯ ಮಾಡಿದ್ದರೆ ತಪ್ಪಿಲ್ಲ. ಅದರ ಹೊರತು ಮೋದಿಗೆ ಸಹಾಯ ಮಾಡಿದ್ದು ಸಾಬೀತಾದರೆ ಕ್ರಮ ಕೈಗೊಳ್ಳಬೇಕು ಎಂದರು.‘ದಾರಿಹೋಕರ’ ಜತೆ ಚರ್ಚೆ ಬೇಡ

ಮೈಸೂರು:
‘ಭಗವದ್ಗೀತೆ ಮತ್ತು ರಾಮಾಯಣದ ಬಗ್ಗೆ ಮುಕ್ತ ಚರ್ಚೆ’ ಕಾರ್ಯಕ್ರಮಕ್ಕೆ ನಗರ ಪೊಲೀಸ್‌ ಕಮಿಷನರ್‌ ಅನುಮತಿ ನಿರಾಕರಿಸಿರುವುದು ಸ್ವಾಗತಾರ್ಹ. ಇಂಥ ಚರ್ಚೆಯಲ್ಲಿ ಭಾಗವಹಿಸಲು ಮುಂದಿನ ದಿನಗಳಲ್ಲಿ ಪೇಜಾವರಶ್ರೀ ಒಪ್ಪಿಕೊಳ್ಳಬಾರದು ಎಂದು ಸಂಸದ ಪ್ರತಾಪಸಿಂಹ ತಿಳಿಸಿದರು.

‘ಭಗವದ್ಗೀತೆ ಮತ್ತು ರಾಮಾಯಣದ ಬಗ್ಗೆ ಮುಕ್ತ ಚರ್ಚೆ’ ಕಾರ್ಯಕ್ರಮದ ಹಿಂದಿನ ಉದ್ದೇಶ ಶುದ್ಧವಾಗಿರಲಿಲ್ಲ. ಮಾರಕಾಸ್ತ್ರ ನಿಷೇಧಿಸಲಾಗಿದೆ ಮತ್ತು ಅನುಚಿತ ವರ್ತನೆಗೆ ಅವಕಾಶ ಇಲ್ಲ ಎಂದು ಕಾರ್ಯಕ್ರಮದ ಪಾಸ್‌ನಲ್ಲಿ ಸೂಚಿಸಲಾಗಿದೆ. ಅಂದರೆ, ಕಾರ್ಯಕ್ರಮದಲ್ಲಿ ಗೊಂದಲ ಸೃಷ್ಟಿಯಾಗುವ ಸಾಧ್ಯತೆಗಳಿಂದಾಗಿ ಆಯೋಜಕರು ಈ ರೀತಿ ಸೂಚನೆ ಹಾಕಿದ್ದಾರೆ’ ಎಂದು ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ದಾರಿದೀಪವಾದ ‘ಭಗವದ್ಗೀತೆ’ ಬಗ್ಗೆ ಪ್ರೊ.ಕೆ.ಎಸ್‌. ಭಗವಾನ್‌, ಬಂಜಗೆರೆ ಜಯಪ್ರಕಾಶ್‌ ಅವರಂಥ ‘ದಾರಿಹೋಕ’ರೊಂದಿಗೆ ಚರ್ಚಿಸುವುದು ಪೇಜಾವರಶ್ರೀ ಅವರಂಥ ದೊಡ್ಡ ಯತಿವರ್ಯರ ಘನತೆಗೆ ಶೋಭೆ ತರುವಂಥದ್ದಲ್ಲ. ಮುಂದೆಯೂ ಇಂಥ ಯಾವುದೇ ಚರ್ಚೆಗೂ ಸಮ್ಮಿತಿಸಬಾರದು ಎಂದು ಮನವಿ ಮಾಡಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.