ಶುಕ್ರವಾರ, ಜನವರಿ 24, 2020
18 °C

ಭತ್ತ, ಗೋವಿನಜೋಳ ಖರೀದಿ ಕೇಂದ್ರಕ್ಕೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲಘಟಗಿ: ಹೋಬಳಿ ಹಂತದಲ್ಲಿ  ಭತ್ತ ಹಾಗೂ ಗೋವಿನಜೋಳ ಖರೀದಿ ಕೇಂದ್ರ­­ವನ್ನು ಪ್ರಾರಂಭಿಸಿಬೇಕೆಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧಿಕಾಯನ್ನು ಒತ್ತಾಯಿಸಿದೆ.ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣದ ರೈತ ಭವನದಲ್ಲಿ ನಡೆದ ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ ಬಿ.ಸಿ. ಪಾಟೀಲ ನೇತೃತ್ವದಲ್ಲಿ ಜರುಗಿದ ಸಭೆಯಲ್ಲಿ, ಜಿಲ್ಲಾಧಿಕಾರಿಗಳನ್ನು ಒತ್ತಾ­ಯಿಸುವ ತೀರ್ಮಾನಕ್ಕೆ ಬರಲಾಯಿತು.ಈಗಾಗಲೇ ಜಿಲ್ಲಾಧಿಕಾರಿಗಳಿಗೆ ರೈತರ ಪರವಾಗಿ ಮನವಿ ಸಲ್ಲಿಸಿದ್ದು, ಭತ್ತದ ಖರೀದಿ ಕೇಂದ್ರ ತೆರೆಯುವ ಭರವಸೆ ದೊರೆತಿದ್ದರೂ, ಇನ್ನೂ ಖರೀದಿ ಕೇಂದ್ರ ಪ್ರಾರಂಭವಾಗಿಲ್ಲ ಎಂದರು.ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣದಲ್ಲಿ ಗೋವಿನಜೋಳ ಖರೀದಿ ಕೇಂದ್ರವನ್ನು ಆರಂಭಿಸಲಾಗಿದ್ದರೂ, ಖರೀದಿ­ಯನ್ನು ಇನ್ನಷ್ಟು ಚುರುಕು­ಗೊಳಿಸಬೇಕಿದ್ದು, ತೂಕದ ಯಂತ್ರ ಮತ್ತು ಸಿಬ್ಬಂದಿಗಳ ಅವಶ್ಯಕತೆ ಇದೆ ಎಂಬು­ದನ್ನು ಈ ಸಂದರ್ಭದಲ್ಲಿ ಹಾಜರಿದ್ದ ತಾಲ್ಲೂಕು ದಂಡಾಧಿಕಾರಿ ಕೆ.ಆರ್.ಕುಲಕರ್ಣಿ ಅವರಿಗೆ ಮನವರಿಕೆ ಮಾಡಲಾಯಿತು.ಇದೇ 25ರ ಒಳಗಾಗಿ ಬೇಡಿಕೆ ಈಡೇರದೇ ಇದ್ದಲ್ಲಿ  ಹೋರಾಟ ನಡೆಸಬೇಕಾಗುತ್ತ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಈ ಸಂದರ್ಭದಲ್ಲಿ ರೈತ ಸಂಘದ ತಾಲ್ಲೂಕು ಅಧ್ಯಕ್ಷ ಘಟಕದ ಚನ್ನಯ್ಯ­ಹಂಚಿನ­ಮನಿ, ಮಹ­ದೇವ­­ಗೌಡ ಸಿದ್ಧನಗೌಡ್ರ, ಶಿವಪ್ಪ ಹಿಂಡ­ಸಗೇರಿ, ಎಂ.ಕೆ.ತಡಸ, ­ರುದ್ರಪ್ಪ ಬಿಸರಳ್ಳಿ,­ ಚನ್ನಪ್ಪ ದೇವಿಕೊಪ್ಪ ಹಾಜರಿದ್ದರು.

ಪ್ರತಿಕ್ರಿಯಿಸಿ (+)