ಭಾನುವಾರ, ಜೂನ್ 13, 2021
23 °C

ಭವಿಷ್ಯದೊಂದಿಗೆ ಚೆಲ್ಲಾಟ ಬೇಡ

ಸೋಮಲಿಂಗಪ್ಪ ಗುಳದಳ್ಳಿ ಶಿಕ್ಷಕರು,ಕೊಪ್ಪಳ Updated:

ಅಕ್ಷರ ಗಾತ್ರ : | |

ಮಾರ್ಚ್ ತಿಂಗಳಲ್ಲಿ ಬಹುತೇಕ ಎಲ್ಲಾ ತರಗತಿಗಳ ಪರೀಕ್ಷೆಗಳು ಪ್ರಾರಂಭ­ಗೊಳ್ಳು ತ್ತಿದ್ದು, ಮಕ್ಕಳ ಭವಿಷ್ಯವನ್ನು ನಿರ್ಧರಿಸುವ ಎಸ್ಎಸ್ಎಲ್‌ಸಿ ಪರೀಕ್ಷೆಗಳು ಮಾರ್ಚ್ ಎರಡನೇ ವಾರದಲ್ಲಿ ಪ್ರಾರಂಭಗೊಳ್ಳುತ್ತವೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಈ ಹಂತದ ಅಭ್ಯಾಸ ಪ್ರಮುಖವಾಗಿರುತ್ತದೆ. ಆದರೆ ಸರ್ಕಾರ ಮಾತ್ರ ಓದಲು ಸೂಕ್ತವಾದ ಸಮಯದಲ್ಲಿಯೇ ಲೋಡ್‌ ಶೆಡ್ಡಿಂಗ್‌ ಮಾಡುವ ಮೂಲಕ ಮಕ್ಕಳ ಭವಿಷ್ಯದೊಂದಿಗೆ ಚೆಲ್ಲಾಟವಾಡುತ್ತದೆ.ಇಂಧನ ಸಚಿವರು ಹಾಗೂ ಮುಖ್ಯಮಂತ್ರಿ­ಗಳು ತಾವು ಭಾಗವಹಿಸುವ ಪ್ರತಿ ಕಾರ್ಯ­ಕ್ರಮದ ಭಾಷಣದಲ್ಲೂ ರೈತರಿಗೆ ಹಾಗೂ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ವಿದ್ಯುತ್‌ ಪೂರೈಸುತ್ತೇವೆ ಎಂದು ಹೇಳುತ್ತಾರೆ, ಆದರೆ ಪರೀಕ್ಷೆಗಳೂ ಹತ್ತಿರ ಬಂದರೂ ಕೂಡ ಲೋಡ್‌ ಶೆಡ್ಡಿಂಗ್‌ ನಿರಂತರವಾಗಿ ಮುಂದುವರೆದಿದೆ.ಮಕ್ಕಳಿಗೆ ಓದಲು ಅನುಕೂಲಕರ ಸಮಯ ದಲ್ಲಿ (ಸಾಯಂಕಾಲ 6 ರಿಂದ 10, ಬೆಳಿಗ್ಗೆ 4 ರಿಂದ 6 ಗಂಟೆ) ಸರಿಯಾಗಿ ವಿದ್ಯುತ್‌ ಒದಗಿಸು ವುದನ್ನು ಬಿಟ್ಟು ಲೋಡ್‌ ಶೆಡ್ಡಿಂಗ್‌ ಮಾಡುವ ಮೂಲಕ ರಾಜ್ಯವನ್ನು ಕತ್ತಲಲ್ಲಿ ಇಡುವುದಲ್ಲದೇ ಓದುವ ಮಕ್ಕಳಿಗೆ  ಉಂಡು ಮಲಗಿಸುವ ಕಾರ್ಯ ಮಾಡುತ್ತಿದೆ. ಇನ್ನಾದರೂ ಸರ್ಕಾರ ಎಚ್ಚೆತ್ತುಕೊಂಡು  ಸರಿಯಾಗಿ ವಿದ್ಯುತ್‌ ಪೂರೈ ಸುವ ಮೂಲಕ ಮಕ್ಕಳ ವಿದ್ಯಾಭ್ಯಾಸಕ್ಕೆ  ನೆರವಾಗಲಿ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.