ವಲಾಂಗ್ ಬಳಿ ಉಗ್ರಹೋರಾಟ ಮುಂದುವರಿಕೆ
ನವದೆಹಲಿ, ನ. 17 - ನೀಫದ ಗಡಿಯಲ್ಲಿರುವ ವಲಾಂಗ್ ಪಟ್ಟಣದ ಉತ್ತರ ಮತ್ತು ದಕ್ಷಿಣಗಳಲ್ಲಿ ಭಾರತದ ಸ್ಥಾನಗಳ ಮೇಲೆ ಚೀಣಿ ಪಡೆಗಳು ಉಗ್ರವಾದ ದಾಳಿಯನ್ನು ನಡೆಸಿದ ನಂತರ ಆ ಪಟ್ಟಣಕ್ಕೆ ಚೀಣಿಯರಿಂದ ತಲೆದೋರಿರುವ ಅಪಾಯವೂ ಹೆಚ್ಚಾಗುತ್ತಿದೆ.

ಚೀಣೀಯರು ನಿನ್ನೆ ಬೆಳಗಿನ ಜಾವ ಆರಂಭಿಸಿದ ಈ ದಾಳಿಯಲ್ಲಿ ಇಂದು ಸಂಜೆ 5.30ರಲ್ಲಿ ಸಹ ಉಗ್ರವಾದ ಕದನವು ನಡೆಯುತ್ತಿತ್ತು. ಎರಡು ಕಡೆಗಳಲ್ಲಿಯೂ ಭಾರಿ ಸಾವು ನೋವುಗಳುಂಟಾಗಿದೆ.

ಬಿಜಾಪುರದಲ್ಲಿ ಸೈನಿಕ ಶಾಲೆ;35 ಲಕ್ಷ ರೂ. ವೆಚ್ಚ
ಬೆಂಗಳೂರು, ನ. 17 - ಬಿಜಾಪುರದಲ್ಲಿ ಸೈನಿಕರ ಶಾಲೆ ತೆರೆಯಲು ರಾಜ್ಯ ಸರಕಾರ ನಿರ್ಧರಿಸಿದೆ. ಶಾಲೆ ಆರಂಭಿಸಲು ಸುಮಾರು 35 ಲಕ್ಷ ರೂ. ವೆಚ್ಚವಾಗಲಿದ್ದು, ಅದನ್ನು ಪೂರ್ಣವಾಗಿ ರಾಜ್ಯ ಸರಕಾರ ವಹಿಸಿಕೊಳ್ಳುವುದು.

ಶಿಕ್ಷಕರನ್ನು ರಕ್ಷಣಾ ಇಲಾಖೆ ಒದಗಿಸುವುದು. ಮುಂದಿನ ವರ್ಷ ಆರಂಭವಾಗುವುದೆಂದು ನಿರೀಕ್ಷಿಸಲಾಗಿರುವ ಸೈನಿಕ ಶಾಲೆಗೆ ಪ್ರಥಮ ವರ್ಷ 150 ವಿದ್ಯಾರ್ಥಿಗಳನ್ನು, ನಂತರದ ವರ್ಷಗಳಲ್ಲಿ 300 ವಿದ್ಯಾರ್ಥಿಗಳನ್ನು ಸೇರಿಸಿಕೊಳ್ಳಲಾಗುವುದು.

ಫೈಲು ವಿಲೇವಾರಿಗೆ ಪರಮಾವಧಿಸಮಯ 5 ದಿನಗಳು: ಸರಕಾರದ ಕ್ರಮ
ಬೆಂಗಳೂರು, ನ. 17 - ತುರ್ತು ಪರಿಸ್ಥಿತಿ ಕಾರಣ ಸರಕಾರದ ಕೆಲಸ ಕಾರ್ಯಗಳು ಕಾಲವಿಳಂಬ ಆಗದಂತೆ ಶೀಘ್ರಗತಿಯಲ್ಲಿ ನಡೆಯಲು ರಾಜ್ಯ ಸರಕಾರವು ವಿವಿಧ ಕ್ರಮಗಳನ್ನು ಕೈಗೊಂಡಿದೆ.

ಸರಕಾರ ಕೈಗೊಂಡಿರುವ ಕ್ರಮಗಳಲ್ಲಿ ಒಂದಾಗಿ ಒಂದು ಫೈಲನ್ನು ವಿಲೇವಾರಿ ಮಾಡಲು ಪರಮಾವಧಿ ಕಾಲವನ್ನು ಐದು ದಿನಗಳೆಂದು ಈಗ ಗೊತ್ತು ಮಾಡಲಾಗಿದೆ. ಮೊದಲು ಹತ್ತು ದಿನವಿತ್ತು.

ಕೆಲವು ವಸ್ತುಗಳ ಬೆಲೆ ಪ್ರದರ್ಶಿಸಲು ರಾಜ್ಯದ ವರ್ತಕರಿಗೆ ಸೂಚನೆ
ಬೆಂಗಳೂರು, ನ. 17 - ಕೆಲವು ಪದಾರ್ಥಗಳ ಒಟ್ಟು ವ್ಯಾಪಾರದ ಬೆಲೆ ಮತ್ತು ಚಿಲ್ಲರೆ ಮಾರಾಟದ ಬೆಲೆಗಳನ್ನು ಪ್ರಾಮುಖ್ಯವಾಗಿ ಕಾಣುವಂತೆ ಪ್ರದರ್ಶಿಸಬೇಕೆಂದು ರಾಜ್ಯದಲ್ಲಿ ವರ್ತಕರಿಗೆ ಸೂಚನೆ ನೀಡುವ ಆಜ್ಞೆಯೊಂದನ್ನು ಸರಕಾರವು ಹೊರಡಿಸಲಿದೆ. ಅಕ್ಕಿ, ರಾಗಿ, ಜೋಳ, ಸಾವೆ ಮುಂತಾದ ಕಾಳುಗಳು, ಬೇಳೆಗಳು, ಮೆಣಸಿನಕಾಯಿ, ಹತ್ತಿ ನೂಲು ಮತ್ತು ಆರ್ಟ್ ಸಿಲ್ಕ್ ಈ ವಸ್ತುಗಳ ಬೆಲೆಗಳನ್ನು ಪ್ರದರ್ಶಿಸುವಂತೆ ಕೇಳಲಾಗುವುದು.

ಕೇಂದ್ರ, ರಾಜ್ಯ ಸರ್ಕಾರಗಳ ನೌಕರರಕೆಲಸದ ಕಾಲಾವಧಿ ವಿಸ್ತರಣೆ?
ನವದೆಹಲಿ, ನ. 17 - ಕೇಂದ್ರ ಸರ್ಕಾರದ ನೌಕರರ ಕೆಲಸದ ಕಾಲಾವಧಿಯನ್ನು ಅರ್ಧಗಂಟೆ ಕಾಲ ಹೆಚ್ಚಿಸಲಾಗುವುದು (ಎಂದರೆ ಬೆಳಿಗ್ಗೆ 10ರಿಂದ ಸಂಜೆ 5-30ರವರೆಗೆ) ಎಂದು ತಿಳಿದು ಬಂದಿದೆ. ಇನ್ನು ಕೆಲವು ದಿನಗಳಲ್ಲೇ ಇದು ಜಾರಿಗೆ ಬರಲಿರುವ ನಿರೀಕ್ಷೆಯಿದೆ. ರಾಜ್ಯ ಸರ್ಕಾರಗಳೂ ಇದೇ ರೀತಿ ಕೆಲಸದ ಅವಧಿಯನ್ನು ಹೆಚ್ಚಿಸುವ ನಿರೀಕ್ಷೆಯಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.