ಸೋಮವಾರ, ಮೇ 17, 2021
31 °C
50 ವರ್ಷಗಳ ಹಿಂದೆ

ಭಾನುವಾರ, 23-6-1963

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ, ಜೂನ್ 22 - ಕಾರಾಕೊರಂ ಕಣಿವೆಗೆ ಇರುವ ಸಾಂಪ್ರದಾಯಿಕ ಭಾರತೀಯ ಮಾರ್ಗದಲ್ಲಿರುವ ದೇಪ್ಸಾಂಗ್ ಲಾಗೆ ಈಶಾನ್ಯದಲ್ಲಿ 1200 ಗಜ ದೂರದಲ್ಲಿ ಠಾಣ್ಯವೊಂದನ್ನು ಸ್ಥಾಪಿಸಿ ಕಟ್ಟಡವೊಂದನ್ನು ನಿರ್ಮಿಸಿ ಚೀಣವು ಲಡಕ್‌ನಲ್ಲಿ ಹೊಸದಾಗಿ ದುರಾಕ್ರಮಣ ನಡೆಸಿದೆ.



ಗಡಿಯ ಪಶ್ಚಿಮ ಭಾಗದಲ್ಲಿ (ಲಡಕ್‌ನಲ್ಲಿ) ಚೀಣವು ಕೊಲಂಬೋ ಸಲಹೆಗಳನ್ನು ಅಲಕ್ಷಿಸಿ ಏಕಪಕ್ಷೀಯವಾಗಿ ಸ್ಥಾಪಿಸಿರುವ ಏಳು ಪೌರ ಠಾಣ್ಯಗಳ ಜತೆಗೆ ಈ ಹೊಸ ನೆಲೆ ಸ್ಥಾಪಿತವಾಗಿದೆ.



ಚೀಣದ ಈ ಇತ್ತೀಚಿನ ದುರಾಕ್ರಮಣ ಕೃತ್ಯಕ್ಕೆ ಭಾರತ ಸರ್ಕಾರ ಜೂನ್ 17ರಂದು ಕಳಿಸಿರುವ ಪತ್ರದಲ್ಲಿ ಉಗ್ರವಾಗಿ ಪ್ರತಿಭಟಿಸಿ, ಹೊಸನೆಲೆಯು ಚೀಣ ಸರ್ಕಾರವೇ ರೂಪಿಸಿರುವ ನಿಸ್ಸೇನೀಕೃತ ವಲಯದಲ್ಲಿದೆಯೆಂದು ತಿಳಿಸಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.