ಭಾನುವಾರ, ಮೇ 22, 2022
22 °C
ದಕ್ಷಿಣ ಏಷ್ಯಾ ಜೂನಿಯರ್ ಟೇಬಲ್ ಟೆನಿಸ್

ಭಾರತಕ್ಕೆ ನಾಲ್ಕು ಚಿನ್ನದ ಪದಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಗಮನಾರ್ಹ ಪ್ರದರ್ಶನ ನೀಡಿದ ಭಾರತ ತಂಡದವರು ಇಲ್ಲಿ ನಡೆಯುತ್ತಿರುವ ದಕ್ಷಿಣ ಏಷ್ಯಾ ಜೂನಿಯರ್ ಟೇಬಲ್ ಟೆನಿಸ್ ಟೂರ್ನಿಯ ಎರಡನೇ ದಿನ ನಾಲ್ಕು ಚಿನ್ನದ ಪದಕ ಜಯಿಸಿದ್ದಾರೆ.ಭಾನುವಾರ ಇಂದಿರಾ ಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಟೂರ್ನಿಯ ಜೂನಿಯರ್ ಬಾಲಕರ (ಹಂತ-2) ಫೈನಲ್‌ನಲ್ಲಿ ಭಾರತ 3-0ರಲ್ಲಿ ಶ್ರೀಲಂಕಾ ತಂಡವನ್ನು ಸೋಲಿಸಿತು. ಸುಧಾಂಶು ಗ್ರೋವರ್ 11-5, 11-6, 11-6ರಲ್ಲಿ ವಿಮುಕ್ತಿ ವಿಜೆಸಿರಿ ಎದುರೂ, ಅಭಿಷೇಕ್ ಯಾದವ್ 11-9, 11-8, 8-11, 11-6ರಲ್ಲಿ ನಿರೋಶನ ಕಹಾವತಾತ ವಿರುದ್ಧವೂ, ರೋಹಿತ್ ರಾಜಶೇಖರ್ 11-6, 11-4, 11-6ರಲ್ಲಿ ದಿಲ್ಶಾನ್ ಏಕನಾಯಕ ಮೇಲೂ ಗೆಲುವು ಸಾಧಿಸಿದರು.ಇದಕ್ಕೂ ಮೊದಲು ನಡೆದ ಸೆಮಿಫೈನಲ್‌ನಲ್ಲಿ ಭಾರತ ತಂಡದವರು 3-0ರಲ್ಲಿ ನೇಪಾಳ ಎದುರು ಜಯ ಗಳಿಸಿದ್ದರು.ಜೂನಿಯರ್ ಬಾಲಕಿಯರ (ಹಂತ-3) ಫೈನಲ್‌ನಲ್ಲಿ ಭಾರತದವರು 3-0ರಲ್ಲಿ ಶ್ರೀಲಂಕಾ ತಂಡವನ್ನು ಪರಾಭವಗೊಳಿಸಿದರು. ಸುತೀರ್ಥ ಮುಖರ್ಜಿ 11-8, 11-7, 11-5ರಲ್ಲಿ ತಾರಿಕಿ ಡಿ ಸಿಲ್ವರ್ ಎದುರೂ, ಮಾಣಿಕಾ ಬಾತ್ರಾ 11-4, 11-7, 11-5ರಲ್ಲಿ ಸಂಕಲ್ಪನಾ ಮೇಲೂ, ರೀತ್ ರಿಷಿಯಾ 11-3, 11-4, 11-8ರಲ್ಲಿ ಚಾಮತಸರಾ ಫರ್ನಾಂಡೊ ವಿರುದ್ಧವೂ ವಿಜಯ ಸಾಧಿಸಿದರು.ಕೆಡೆಟ್ ಬಾಲಕರ (ಹಂತ-2) ವಿಭಾಗದ ಅಂತಿಮ ಪಂದ್ಯದಲ್ಲಿ ಭಾರತ ತಂಡದವರು 3-0ರಲ್ಲಿ ಲಂಕಾ ಎದುರು ಗೆದ್ದರು. ಬರ್ಡಿ ಬೋರೊ 11-4, 9-11, 11-8, 8-11, 11-8ರಲ್ಲಿ ಉದಯ ರಣಸಿಂಗೆ ಎದುರೂ, ಅನಿರ್ಬಾನ್ ಘೋಷ್ 11-7, 11-6, 11-5ರಲ್ಲಿ ಜಯಸಂಕಾ ಡಿಸಿಲ್ವಾ ವಿರುದ್ಧವೂ, ಅನಿರ್ಬಾನ್ ಘೋಷ್/ಲಾಲ್ರಿನ್ ಪೂಜಾ 11-3, 11-7, 11-9ರಲ್ಲಿ ಉದಯ ರಣಸಿಂಗೆ/ಪೂರ್ಣಿಮಾ ವರುಸವಿತಾನ ಮೇಲೂ ಜಯ ಗಳಿಸಿದರು.ಇದಕ್ಕೂ ಮೊದಲು ನಡೆದ ನಾಲ್ಕರ ಘಟ್ಟದ ಪಂದ್ಯದಲ್ಲಿ ಭಾರತ ತಂಡದವರು 3-0ರಲ್ಲಿ ನೇಪಾಳ ಎದುರು ಗೆಲುವು ಸಾಧಿಸಿದ್ದರು.

ಕೆಡೆಟ್ ಬಾಲಕಿಯರ (ಹಂತ-3) ವಿಭಾಗದ ಫೈನಲ್‌ನಲ್ಲಿ ಭಾರತ 3-0ರಲ್ಲಿ ಶ್ರೀಲಂಕಾ ತಂಡವನ್ನು ಮಣಿಸಿತು. ಶ್ರೀಜಾ ಅಕುಲಾ 11-1, 12-10, 11-5ರಲ್ಲಿ ಪಾವನಿ ಸಿರಿಸೇನಾ ಎದುರೂ, ಸಾಗರಿಕಾ ಮುಖರ್ಜಿ 11-3, 11-5, 11-4ರಲ್ಲಿ  ರಿ ಕರದನಾರಾಚಿ ವಿರುದ್ಧವೂ, ಸಾಗರಿಕಾ/ಹರ್ಷವಧಿನಿ 11-2, 11-3, 11-9ರಲ್ಲಿ ಪಾವನಿ/ಕರದನಾರಾಚಿ ಎದುರೂ ಜಯ ಗಳಿಸಿದರು.ಎರಡನೇ ದಿನದ ಸ್ಪರ್ಧೆಯಲ್ಲಿ ಶ್ರೀಲಂಕಾ ನಾಲ್ಕು ಕಂಚಿನ ಪದಕ ಜಯಿಸಿತು. ಬಾಂಗ್ಲಾದೇಶ, ಪಾಕಿಸ್ತಾನ ಹಾಗೂ ನೇಪಾಳ ಕಂಚಿನ ಪದಕ ಗೆದ್ದವು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.