ಲಂಡನ್ (ಪಿಟಿಐ): ಅಭಿವೃದ್ಧಿ ಹೊಂದುತ್ತಿರುವ ಭಾರತಕ್ಕೆ ಮೂರು ವರ್ಷಗಳ ನಂತರ ಆರ್ಥಿಕ ನೆರವು ಸ್ಥಗಿತಗೊಳಿಸಲು ಬ್ರಿಟನ್ ಚಿಂತಿಸುತ್ತಿದೆ.

ಭಾರತ ಆರ್ಥಿಕವಾಗಿ ಸದೃಢವಾಗುತ್ತಿರುವುದರಿಂದ ಹಾಗೂ ಬಡತನ ನಿರ್ಮೂಲನೆಗಾಗಿ ಸ್ಥಳೀಯವಾಗಿ ಹಮ್ಮಿಕೊಂಡ ಯೋಜನೆಗಳು ಪರಿಣಾಮಕಾರಿಯಾಗುತ್ತಿರುವುದರಿಂದ ಆ ದೇಶಕ್ಕೆ ವಾರ್ಷಿಕವಾಗಿ ನೀಡುತ್ತಿರುವ 160 ಕೋಟಿ ಪೌಂಡ್ ನೆರವನ್ನು ನಿಲ್ಲಿಸಲಾಗುತ್ತದೆ ಎಂದು ಬ್ರಿಟನ್ನ ಅಂತರರಾಷ್ಟ್ರೀಯ ಅಭಿವೃದ್ಧಿ ಕಾರ್ಯದರ್ಶಿ ಆಂಡ್ರ್ಯೂ ಮಿಚೆಲ್ `ದಿ ಸಂಡೆ ಟೈಮ್ಸ~ ಪತ್ರಿಕೆಗೆ ತಿಳಿಸಿದ್ದಾರೆ.

`ನಾವು ಅವರ ಜತೆ ಕೊನೆಯ ಹೆಜ್ಜೆ ಇಡುತ್ತಿದ್ದೇವೆ~ ಎಂದು ಆಂಡ್ರ್ಯೂ ಅವರು ಹೇಳಿದ್ದಾರೆ.
ಸದ್ಯಕ್ಕೆ ಬ್ರಿಟನ್ ಸರ್ಕಾರ, ಭಾರತಕ್ಕೆ 2015ರವರೆಗೆ ನೆರವು ನೀಡುವುದಾಗಿ ಬಹಿರಂಗವಾಗಿ ಹೇಳಿಕೊಂಡಿದೆ.

ಬ್ರಿಟನ್ ಸರ್ಕಾರದ ಆಡಳಿತದ ಕುರಿತಾಗಿ ನಡೆಸಿದ ಸಮೀಕ್ಷೆಯಲ್ಲಿ ಶೇ 69ರಷ್ಟು ಜನ ಭಾರತಕ್ಕೆ ನೆರವು ನಿಲ್ಲಿಸಬೇಕು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಸ್ವತಂತ್ರವಾಗಿ ಬಾಹ್ಯಾಕಾಶ ಯೋಜನೆಗಳನ್ನು ಕೈಗೊಳ್ಳುತ್ತಿರುವ, ಬಡತನ ನಿರ್ಮೂಲನೆಗಾಗಿ ವಾರ್ಷಿಕ 7000 ಪೌಂಡ್ಗಳಷ್ಟು ಹಣ ಮೀಸಲಿಡುವ ಭಾರತಕ್ಕೆ ನೆರವು ನೀಡುವ ಅಗತ್ಯವಿಲ್ಲ ಎಂದು ಬ್ರಿಟನ್ ನಾಗರಿಕರು ಈ ಸಮೀಕ್ಷೆಯಲ್ಲಿ ಹೇಳಿದ್ದಾರೆ.

ಬ್ರಿಟನ್ ಬೆಂಬಲಿತ ಐರೋಪ್ಯ ಯುದ್ಧ ವಿಮಾನ ಕಂಪೆನಿಯೊಂದು ಭಾರತೀಯ ಸೇನೆಗೆ ವಿಮಾನ ಪೂರೈಸುವ ಬಹುಕೋಟಿ ಒಪ್ಪಂದ ಮಾಡಿಕೊಳ್ಳಲು ವಿಫಲವಾದ ನಂತರ ಅಲ್ಲಿ ಭಾರತದ ವಿರುದ್ಧ ಅಸಹನೆಯ ದನಿಗಳು ಹೆಚ್ಚಾಗಿ ಕೇಳಿಬರುತ್ತಿವೆ.

2015ಕ್ಕಿಂತ ಮೊದಲೇ ಆರ್ಥಿಕ ನೆರವು ಸ್ಥಗಿತಗೊಳಿಸಿದಲ್ಲಿ ಅದು ರಾಜತಾಂತ್ರಿಕ ಬಿಕ್ಕಟ್ಟಿಗೆ ಕಾರಣವಾಗಬಹುದು ಎಂಬ ಆತಂಕವೂ ಬ್ರಿಟನ್ ಅಧಿಕಾರಿಗಳಲ್ಲಿ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.