ಚಂಡೀಗಡ (ಪಿಟಿಐ): ಭಾರತದ ಕ್ರಿಕೆಟಿಗರು 2010ರಲ್ಲಿ ಶ್ರೀಲಂಕಾ ಪ್ರವಾಸ ಕೈಗೊಂಡಿದ್ದಾಗ ಐಸಿಸಿಯ ಭ್ರಷ್ಟಾಚಾರ ನಿಗ್ರಹ ದಳದ ನಿಯಮಗಳನ್ನು ಉಲ್ಲಂಘಿಸಿದ್ದರು ಎಂದು ಪಂಜಾಬ್ ಕ್ರಿಕೆಟ್ ಸಂಸ್ಥೆ ಅಧ್ಯಕ್ಷ ಐ.ಎಸ್.ಬಿಂದ್ರಾ ಆರೋಪಿಸಿದ್ದಾರೆ. ಈ ವಿಷಯವನ್ನು ವರದಿಯಲ್ಲಿ ಉಲ್ಲೇಖಿಸಲಾಗಿತ್ತು. ಆದರೆ ಲಂಕಾ ಕ್ರಿಕೆಟ್ ಮಂಡಳಿ ಮೇಲೆ ಬಿಸಿಸಿಐ ಒತ್ತಡ ಹೇರಿ ಅದನ್ನು ತೆಗೆಸಿತ್ತು ಎಂದೂ ಅವರು ಹೇಳಿದ್ದಾರೆ.

`ಆ ಪ್ರವಾಸ ಅವಧಿಯಲ್ಲಿ ಲಂಕಾ ಸೇನಾಪಡೆಯ ನಿವೃತ್ತ ಅಧಿಕಾರಿಯೊಬ್ಬರು ಭಾರತ ತಂಡಕ್ಕೆ ಭದ್ರತೆ ನೀಡಿದ್ದರು. ಒಂದು ದಿನ ರಾತ್ರಿ ಒಬ್ಬ ಅಧಿಕಾರಿ ಹುಡುಗಿಯೊಬ್ಬಳನ್ನು ಆಟಗಾರ ಉಳಿದುಕೊಂಡಿದ್ದ ಕೊಠಡಿಗೆ ಕರೆತಂದಿದ್ದರು. ಆತ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಟಗಾರ. ಪಂದ್ಯಕ್ಕೆ ಮುನ್ನಾ ದಿನ ಆ ಹುಡುಗಿ ಆಟಗಾರನ ಕೊಠಡಿಯಲ್ಲಿ ರಾತ್ರಿ ಕಳೆದಿದ್ದಳು. ಐಸಿಸಿ ಪಟ್ಟಿಯಲ್ಲಿರುವ ಶಂಕಿತ ಬುಕ್ಕಿಯೊಬ್ಬ ಆ ಹುಡುಗಿ ಕಳುಹಿಸಿದ್ದ. ಇದು ಭದ್ರತೆಯ ಉಲ್ಲಂಘನೆ' ಎಂದು ಬಿಂದ್ರಾ ವಿವರಿಸಿದ್ದಾರೆ.

`ಸೇನಾಪಡೆಯ ನಿವೃತ್ತ ಅಧಿಕಾರಿಯ ಹೇಳಿಕೆ ಆಧರಿಸಿ ಲಂಕಾ ಮಂಡಳಿ ವರದಿ ಸಿದ್ಧಪಡಿಸಿತ್ತು. ಭಾರತ ತಂಡದ ಮ್ಯಾನೇಜರ್ ಹಾಗೂ ಐಸಿಸಿ ಭ್ರಷ್ಟಾಚಾರ ಘಟದ ಅಧಿಕಾರಿಗೂ ತಿಳಿಸಲಾಗಿತ್ತು. ಆದರೆ ಬಿಸಿಸಿಐನ ಒತ್ತಡದ ಕಾರಣ ಲಂಕಾ ಕ್ರಿಕೆಟ್ ಮಂಡಳಿ ವರದಿಯನ್ನು ಹಿಂಪಡೆದಿತ್ತು' ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.