ಜೋಹಾನ್ಸ್ಬರ್ಗ್ (ಪಿಟಿಐ): ಮೊದಲ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ ಮಹೇಂದ್ರ ಸಿಂಗ್ ದೋನಿ ಸಾರಥ್ಯದ ಭಾರತ ತಂಡ ತೋರಿದ ಪ್ರದರ್ಶನದ ಬಗ್ಗೆ ದಕ್ಷಿಣ ಆಫ್ರಿಕಾ ಮಾಜಿ ನಾಯಕ ಕೆಪ್ಲೆರ್ ವೆಸೆಲ್ಸ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ‘ಮೊದಲ ಟೆಸ್ಟ್ನಲ್ಲಿ ಭಾರತ ತಾಂತ್ರಿಕವಾಗಿ ಮತ್ತು ಮಾನಸಿಕವಾಗಿ ಅಮೋಘ ಪ್ರದರ್ಶನ ತೋರಿತು. ಎರಡನೇ ಪಂದ್ಯದಲ್ಲೂ ಇದೇ ರೀತಿಯ ಆಟವಾಡಲಿ’ ಎಂದು ವೆಸೆಲ್ಸ್ ಆಶಿಸಿದ್ದಾರೆ.

ವಾಂಡರರ್ಸ್ ಕ್ರೀಡಾಂಗಣದಲ್ಲಿ ಭಾನುವಾರ ಕೊನೆಗೊಂಡ ಪಂದ್ಯದಲ್ಲಿ ಭಾರತ ತಂಡ ದಕ್ಷಿಣ ಆಫ್ರಿಕಾ ಎದುರು ರೋಚಕ ಡ್ರಾ ಸಾಧಿಸಿತ್ತು. ಆತಿಥೇಯ ತಂಡಕ್ಕೆ ಗೆಲುವಿನ ಅವಕಾಶವಿತ್ತು. ಆದರೆ, ಪ್ರವಾಸಿ ತಂಡದ ವೇಗದ ಬೌಲರ್ಗಳು ಇದಕ್ಕೆ ಅವಕಾಶ ನೀಡಲಿಲ್ಲ. ‘ಭಾರತದ ಬ್ಯಾಟ್ಸ್ಮನ್ಗಳು ಹಾಗೂ ಬೌಲರ್ಗಳು ತೋರಿದ ಪ್ರದರ್ಶನ ಅಭೂತಪೂರ್ವವಾಗಿತ್ತು.

ಮೊದಲ ಟೆಸ್ಟ್ನಲ್ಲಿ ಯಾರು ಗೆಲ್ಲುತ್ತಾರೆ ಎಂದು ಹೇಳುವುದು ಕಷ್ಟವಿತ್ತು. ಪಂದ್ಯ ಡ್ರಾ ಆದ ಕಾರಣ ಎರಡೂ ತಂಡಗಳಿಗೂ ಸಂತೋಷವಾಗಿದೆ ಎನಿಸುತ್ತದೆ’ ಎಂದು ಆಸ್ಟ್ರೇಲಿಯಾ ತಂಡದ ಪರವೂ ಆಡಿದ್ದ ವೆಸೆಲ್ಸ್ ನುಡಿದರು. ಐಸಿಸಿ ಟೆಸ್ಟ್ ರ್ಯಾಂಕ್ನಲ್ಲಿ ಮೊದಲ ಎರಡು ಸ್ಥಾನಗಳನ್ನು ಹೊಂದಿರುವ ದಕ್ಷಿಣ ಆಫ್ರಿಕಾ ಮತ್ತು ಭಾರತ ತಂಡಗಳ ನಡುವೆ ಡಿ. 26ರಿಂದ ಪಂದ್ಯ ನಡೆಯಲಿದೆ.

ಇದು ‘ಬಾಕ್ಸಿಂಗ್ ಡೇ’ ಟೆಸ್ಟ್ ಎನ್ನುವುದು ವಿಶೇಷ. ಪ್ರಥಮ ಟೆಸ್ಟ್ನಲ್ಲಿ ವಿರಾಟ್ ಕೊಹ್ಲಿ ಒಟ್ಟು 215 ರನ್ ಗಳಿಸಿದ್ದರು. ಭಾರತ ತಂಡದ ಉಪನಾಯಕನ ಪ್ರದರ್ಶನದ ಬಗ್ಗೆಯೂ ವೆಸೆಲ್ಸ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

11ನೇ ಸ್ಥಾನಕ್ಕೇರಿದ ಕೊಹ್ಲಿ
ಉತ್ತಮ ಪ್ರದರ್ಶನ ತೋರುತ್ತಿರುವ ಕೊಹ್ಲಿ ಐಸಿಸಿ ಟೆಸ್ಟ್ ರ್ಯಾಂಕ್ನಲ್ಲಿ 11ನೇ ಸ್ಥಾನ ಪಡೆದಿದ್ದಾರೆ. ಬಲಗೈ ಬ್ಯಾಟ್ಸ್ಮನ್ ವೃತ್ತಿ ಜೀವನದಲ್ಲಿ ಗಳಿಸಿದ ಶ್ರೇಷ್ಠ ರ್್ಯಾಂಕ್ ಇದಾಗಿದೆ. ಅವರು ಈ ಮೊದಲು 20ನೇ ಸ್ಥಾನದಲ್ಲಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.