ಮೈಸೂರು: ಪುಟ್ಟ ಮಕ್ಕಳ ಕೈಯಲ್ಲಿ ಹಾರಾಡಿದ ರಾಷ್ಟ್ರಧ್ವಜ.. ಬಸ್ಸು, ಆಟೋಗಳ ಮೇಲೆ ರಾರಾಜಿಸಿದ ತ್ರಿವರ್ಣ ಧ್ವಜ.. ನಗರದ ಶಾಲಾ-ಕಾಲೇಜು, ಸಂಘ- ಸಂಸ್ಥೆಗಳಲ್ಲಿ ಮೊಳಗಿದ ರಾಷ್ಟ್ರ ಪ್ರೇಮ.. `ಭಾರತಾಂಬೆ ನಿನ್ನ ಜನುಮ ದಿನ~.. ಹಾಡಿಗೆ ಹೆಜ್ಜೆ ಹಾಕಿದ ನೂರಾರು ವಿದ್ಯಾರ್ಥಿಗಳು..

-ಇವು, ಚಾಮುಂಡಿ ವಿಹಾರ ಕ್ರೀಡಾಂಗಣ ಹಾಗೂ ನಗರದಲ್ಲಿ ಬುಧವಾರ ಕಂಡು ಬಂದ ದೃಶ್ಯ. ನಗರದ ಎಲ್ಲೆಡೆ 66ನೇ ಸ್ವಾತಂತ್ರ್ಯೋತ್ಸವದ ಸಡಗರ, ಸಂಭ್ರಮ ಮನೆ ಮಾಡಿತ್ತು. ಆಟೋ ಚಾಲಕರು ಆಟೋಗಳಿಗೆ ರಾಷ್ಟ್ರಧ್ವಜ ಕಟ್ಟಿ ದೇಶ ಪ್ರೇಮ ಮೆರೆದರು. ಪುಟಾಣಿ ಮಕ್ಕಳು ಹಾಲುಗಲ್ಲದ ಮೇಲೆ ಕೇಸರಿ, ಬಿಳಿ, ಹಸಿರು ಬಣ್ಣವಿರುವ ರಾಷ್ಟ್ರಧ್ವಜದ ಚಿತ್ರ ಬಿಡಿಸಿಕೊಂಡು ಸಂಭ್ರಮಿಸಿದರು.

ಕುಣಿದು, ನಲಿದ ಚಿಣ್ಣರು
ಚಿನ್ಮಯ ವಿದ್ಯಾಲಯದ 300 ವಿದ್ಯಾರ್ಥಿಗಳು `ಯೋಗಾಸನ~ ಕಾರ್ಯಕ್ರಮ ನಡೆಸಿಕೊಟ್ಟರು. ಸೂರ್ಯ ನಮಸ್ಕಾರ ಸೇರಿದಂತೆ ವಿವಿಧ ಬಗೆಯ ಆಸನಗಳನ್ನು ಅಚ್ಚುಕಟ್ಟಾಗಿ ಪ್ರದರ್ಶಿಸಿದರು. ರಾಷ್ಟ್ರಧ್ವಜದ ಚಿತ್ರವಿರುವ ಟೀಶರ್ಟ್ ಧರಿಸಿ ಎಲ್ಲರ ಗಮನ ಸೆಳೆದರು.

ಹೆಬ್ಬಾಳಿನ ಅಣ್ಣಯ್ಯಪ್ಪ ಭೈರವೇಶ್ವರ ಶಾಲೆ ವಿದ್ಯಾರ್ಥಿಗಳು ಪ್ರಸ್ತುತ ಪಡಿಸಿದ `ನಾಡಗೀತೆ ಹಾಗೂ ವೀರಗಾಸೆ ನೃತ್ಯ~ ನೋಡುಗರನ್ನು ಮಂತ್ರ ಮುಗ್ಧರನ್ನಾಗಿಸಿತು. 550 ವಿದ್ಯಾರ್ಥಿಗಳು ನಾಡಗೀತೆಗೆ ಹೆಜ್ಜೆ ಹಾಕಿದರು.

ವಿದ್ಯಾರ್ಥಿನಿಯರು ವೀರಗಾಸೆ, ಪಟಕುಣಿತವನ್ನು ಪ್ರದರ್ಶಿಸುವ ಮೂಲಕ ವೇದಿಕೆಯ ಗಮನ ಸೆಳೆದರು.
ಹೆಬ್ಬಾಳಿನ ಪರಮಹಂಸ ವಿದ್ಯಾಲಯದ 300 ವಿದ್ಯಾರ್ಥಿ ಗಳು `ಭಾರತಾಂಬೆ ನಿನ್ನ ಜನುಮ ದಿನ..

ಭಾರತೀಯರು ಶೌರ್ಯ ಮೆರೆದ ದಿನ~.. ಹಾಡಿಗೆ ಹೆಜ್ಜೆ ಹಾಕಿದರು. ಎನ್.ಆರ್.ಮೊಹಲ್ಲಾದ ಸಂತ ಆನ್ಸ್ ಶಾಲೆಯ 650 ಮಕ್ಕಳು `ನಮ್ಮೀ ತಾಯ್ನೆಲವು~ ಹಾಡಿಗೆ ನೃತ್ಯ ಮಾಡಿದರು.

ಹೋರಾಟಗಾರರಿಗೆ ಸನ್ಮಾನ
ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದ ಕೆ.ಎಸ್.ಶಿವಣ್ಣ (ನಂಜನಗೂಡು), ಬಿ.ಎಸ್.ತೋಟಪ್ಪ (ಕೆ.ಆರ್.ನಗರ), ಕೆ.ಕೃಷ್ಣಪ್ಪ (ಪಾಂಡವಪುರ), ಸಿ.ದೊಡ್ಡೇಗೌಡ (ಗುಂಡ್ಲುಪೇಟೆ), ಎಂ.ಡಿ.ರಾಜೇಂದ್ರಕುಮಾರ್ ಜೈನ್ (ಮೈಸೂರು) ಹಾಗೂ ರಾಷ್ಟ್ರಪತಿ ಪದಕ ವಿಜೇತ ಕೆ.ಆರ್.ಸಂಚಾರ ಠಾಣೆ ಇನ್ಸ್ಪೆಕ್ಟರ್ ಪ್ರಭಾಕರ್ ಬಾರ್ಕಿ, ಕೆ.ಆರ್.ಠಾಣೆ ಇನ್ಸ್ಪೆಕ್ಟರ್ ಎಂ.ಪಿ.ಜಯಮೂರ್ತಿ, ಇನ್ಸ್ಪೆಕ್ಟರ್ ಕೆ.ಮೋಹನ್ದಾಸ್ ಅವರನ್ನು ಸನ್ಮಾನಿಸಲಾಯಿತು.

ಪಥ ಸಂಚಲನ ಬಹುಮಾನ
ಸಶಸ್ತ್ರಪಡೆ ವಿಭಾಗ: ಕರ್ನಾಟಕ ರಾಜ್ಯ ಮೀಸಲು ಪಡೆ-ಎಂ.ನಾಗೇಂದ್ರಸ್ವಾಮಿ (ಪ್ರಥಮ), ನಗರ ಸಂಚಾರ ವಿಭಾಗ-ಎನ್.ಮಲ್ಲೇಶ್ (ದ್ವಿತೀಯ), ಗೃಹ ರಕ್ಷಕ ದಳ-ಆರ್.ಸಿದ್ದಪ್ಪಾಜಿ (ತೃತೀಯ).

ಶಸ್ತ್ರರಹಿತ ವಿಭಾಗ: ಅಶ್ವಾರೋಹಿದಳ-ಮಹದೇವ್ (ಪ್ರಥಮ), ಅಗ್ನಿಶಾಮಕ ಮತ್ತು ತುರ್ತು ಸೇವೆಗಳು-ಎಚ್.ಎಂ.ಸಿದ್ದೇಗೌಡ (ದ್ವಿತೀಯ).

ಶಾಲಾ ವಿಭಾಗ: ಬಾಲಕಿಯರ ಸೇವಾ ದಳ-ಸುಧಾರಾಣಿ (ಪ್ರಥಮ), ಎನ್ಸಿಸಿ ಭೂಸೇನೆ-ಪ್ರಶಾಂತಕುಮಾರ್ (ದ್ವಿತೀಯ), ಗೈಡ್ಸ್-ಐಶ್ವರ್ಯ (ತೃತೀಯ).

ವಿಶೇಷ ಬಹುಮಾನ: ಹಿನ್ನಲೆ ಸಂಗೀತ-ಸಿ.ಹುಚ್ಚಯ್ಯ (ಡಿಎಆರ್), ಶಿವಣ್ಣ (ಕೆಎಸ್ಆರ್ಪಿ), ಅಂಥೋಣಿ ಪ್ರಕಾಶ್ (ಸಿಎಆರ್), ಅಬೀದ್ (ಸ್ಟಿಕ್ ಮೇಜರ್).

ಸರ್ಕಾರಿ ಶಾಲೆ ಮಕ್ಕಳು ಕಾಣೆ!
ಪ್ರತಿ ವರ್ಷ ಜಿಲ್ಲಾಡಳಿತ ಆಯೋಜಿಸುವ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಸರ್ಕಾರಿ ಶಾಲೆ ಮಕ್ಕಳೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಡುತ್ತಿದ್ದರು. ಆದರೆ, ಈ ಬಾರಿ ಶಿಕ್ಷಣ ಇಲಾಖೆ ಉತ್ತರ ವಲಯದ ಖಾಸಗಿ ಶಾಲೆಗಳ ಮಕ್ಕಳು ಮಾತ್ರ ಪಾಲ್ಗೊಂಡಿದ್ದರು. ಚಿನ್ಮಯ ವಿದ್ಯಾಲಯ, ಅಣ್ಣಯ್ಯಪ್ಪ ಭೈರವೇಶ್ವರ ಶಾಲೆ, ಪರಮಹಂಸ ವಿದ್ಯಾಲಯ, ಸಂತ ಆನ್ಸ್ ಶಾಲೆ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ಸರ್ಕಾರಿ ಶಾಲೆ ಮಕ್ಕಳನ್ನು ಕಡೆಗಣಿಸಿರುವ ಬಗ್ಗೆ ಕೆಲವರು ಆಕ್ರೋಶ ವ್ಯಕ್ತಪಡಿಸಿದರು.

ಉಪಾಹಾರ
ಶ್ರೀ ಸುಮತಿನಾಥ್ ಜೈನ್ ನವಯುವಕ್ ಮಂಡಲ್ ಹಾಗೂ ಜೈನ್ ಯೂತ್ ಅಸೋಸಿಯೇಷನ್ ವತಿಯಿಂದ ಸ್ವಾತಂತ್ರ್ಯೋತ್ಸವ ಸಮಾರಂಭಕ್ಕೆ ಆಗಮಿಸಿದ್ದ ಐದು ಸಾವಿರ ವಿದ್ಯಾರ್ಥಿಗಳಿಗೆ ಸಿಹಿ ಹಾಗೂ ಉಪಾಹಾರದ ವ್ಯವಸ್ಥೆ ಮಾಡಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.