ಮಂಗಳವಾರ, ಜೂನ್ 15, 2021
24 °C

ಭಾರತೀಯರಿಗೆ ಈಗಲೂ ಉದ್ಯೋಗ ಅವಕಾಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಂಡನ್ (ಪಿಟಿಐ): ಮುಂದಿನ ತಿಂಗಳು 6 ರಿಂದ ಜಾರಿಯಾಗಲಿರುವ ನೂತನ ವೀಸಾ ನೀತಿಯ ಹೊರತಾಗಿಯೂ ಬ್ರಿಟನ್‌ನಲ್ಲಿ ಭಾರತದ ಪರಿಣತ ವಿದ್ಯಾರ್ಥಿಗಳಿಗೆ ಉದ್ಯೋಗವಕಾಶಗಳು ಇನ್ನೂ ಇವೆ ಎಂದು ಉನ್ನತ ಶಿಕ್ಷಣ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.`ಪ್ರಸ್ತುತ ಬ್ರಿಟನ್‌ನಲ್ಲಿ ಶ್ರೇಣಿ-1ರ ಅನ್ವಯ (ವಿದ್ಯಾಭ್ಯಾಸ ಮುಗಿದ   ನಂತರ) 2 ವರ್ಷಗಳ ವರೆಗೆ ವಿದ್ಯಾರ್ಥಿಗಳು ಕೆಲಸ ಮಾಡಬಹುದಾಗಿದೆ. ಆದರೆ ಏಪ್ರಿಲ್‌ನಿಂದ ಜಾರಿಗೆ ಬರಲಿರುವ ಹೊಸ ವೀಸಾ ನಿಯಮದಿಂದಾಗಿ ಈ ವ್ಯವಸ್ಥೆ ಬದಲಾಗಿದೆ.ಹಾಗಾಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಪದವಿ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳು ಉದ್ಯೋಗ ನಿಮಿತ್ತ ಇಲ್ಲಿ ನೆಲೆಸಲು ಅರ್ಜಿ ಸಲ್ಲಿಸಬಹುದು~ ಎಂದು ಬ್ರಿಟನ್ ವಿಶ್ವವಿದ್ಯಾಲಯಗಳ ಅಧ್ಯಕ್ಷ ಪ್ರೊ. ಎರಿಕ್ ಥಾಮಸ್ ಹೇಳಿದ್ದಾರೆ.40,000 ಅವಕಾಶ?

ಐರೋಪ್ಯ ಒಕ್ಕೂಟ ಮತ್ತು ಭಾರತದ ನಡುವಿನ ರಹಸ್ಯ ಒಪ್ಪಂದದನ್ವಯ ಕನಿಷ್ಠ ನಲವತ್ತು ಸಾವಿರ ಭಾರತೀಯರಿಗೆ ಯುರೋಪ್‌ನಲ್ಲಿ ಉದ್ಯೋಗಾನುಮತಿ ಸಿಗುವ ಸಾಧ್ಯತೆ ಎಂದು  ಮಾಧ್ಯಮ ವರದಿ ತಿಳಿಸಿದೆ.ಬ್ರಿಟನ್‌ನಲ್ಲೇ ಸುಮಾರು ಹನ್ನೆರಡು ಸಾವಿರ ಭಾರತೀಯರಿಗೆ ಉದ್ಯೋಗ ದೊರೆಯಲಿದೆ.  ಒಪ್ಪಂದದ ಮಾಹಿತಿ ಸೋರಿಕೆಯಾದ ಹಿನ್ನೆಲೆಯಲ್ಲಿ ಈ ವಿವರಗಳು ಬಹಿರಂಗಗೊಂಡಿವೆ ಎನ್ನಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.