ಗುರುವಾರ , ಜೂನ್ 24, 2021
29 °C

ಭಾರತ–ಪಾಕ್‌ ವಿಭಜನೆ ನೆನಪು ಸಂರಕ್ಷಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್‌(ಪಿಟಿಐ):  ಭಾರತ–ಪಾಕಿ­ಸ್ತಾನ ವಿಭಜನೆಯ ಅತ್ಯಂತ ಕರಾಳ ನೆನಪುಗಳನ್ನು ಉಳಿಸಿ­ಕೊಳ್ಳುವ ಯೋಜ­ನೆ­ಯೊಂದು ಸದ್ದಿಲ್ಲದೆ ಅಮೆರಿಕದ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲ­ಯ­ದಲ್ಲಿ ಆರಂಭವಾಗಿದೆ.ಬರ್ಕಿಲಿ ನಗರದಲ್ಲಿರುವ ಕ್ಯಾಲಿಫೋ­ರ್ನಿಯಾ ವಿವಿ ಸಂಶೋಧ­ನಾರ್ಥಿ ಹಾಗೂ ಭಾರತ ಮೂಲದ ಗುಣಿತಾ ಸಿಂಗ್‌ ಭಲ್ಲಾ ಅವರು ಇತಿಹಾಸ ಆಸಕ್ತ ಸಮಾನ ಮನಸ್ಕರ­ರೊಂದಿಗೆ ಹುಟ್ಟು ಹಾಕಿರುವ ಸ್ವಯಂಸೇವಾ ಸಂಸ್ಥೆ ಈ ಮಹತ್ತರ ಕಾರ್ಯವನ್ನು ಕೈಗೆತ್ತಿ­ಕೊಂಡಿದೆ.1947ರ ಭಾರತ–ಪಾಕಿಸ್ತಾನ ವಿಭಜನೆಯ ನೆನಪು­ಗಳನ್ನು ಸಂಗ್ರಹಿಸಿ­ಡುವ ನಿಟ್ಟಿನಲ್ಲಿ ಈ ಘಟನೆಗೆ ಸಾಕ್ಷಿ­ಯಾದ ಜನರನ್ನು ಭೇಟಿಯಾಗಿ ಸುಮಾರು ಒಂದು ಸಾವಿರ ಸಂದರ್ಶನ­ಗಳನ್ನು ಮಾಡಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.