ಬೆಂಗಳೂರು: ‘ಭಾರತ ಹಾಗೂ ಜಪಾನ್ ಪರಸ್ಪರ ಸಂಸ್ಕೃತಿಯನ್ನು ವಿನಿಮಯ ಮಾಡಿಕೊಳ್ಳುವ ಮೂಲಕ ಹೊಸ ಪರಂಪರೆಗೆ ನಾಂದಿ ಹಾಡಬೇಕು’ ಎಂದು ಲೋಟಸ್ ಸಂಸ್ಥೆಯ ಮುಖ್ಯಸ್ಥೆ ಶ್ಯಾಮಲಾ ಗಣೇಶ್ ತಿಳಿಸಿದರು.

ಜಪಾನ್ ಸರ್ಕಾರದ ವಿದೇಶಾಂಗ ಸಚಿವಾಲಯ ನಗರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಜಪಾನಿನ ಭಾಷೆಯನ್ನು ಕಲಿಯಲು ಬಹಳ ಮಂದಿ ಉತ್ಸುಕರಾಗಿದ್ದಾರೆ. ಹಾಗಾಗಿ 1984ರಲ್ಲಿಯೇ ಪತಿ ಗಣೇಶ್ ಅವರ ಸಹಕಾರದೊಂದಿಗೆ ನಗರದಲ್ಲಿ ಜಪಾನ್ ಭಾಷಾ ಶಾಲೆಯನ್ನು ತೆರೆಯಲಾಯಿತು. ಭಾಷೆಯ ಮೂಲಕ ಸಂಸ್ಕೃತಿಯ ಕೊಡುಕೊಳ್ಳುವಿಕೆ ಸಾಧ್ಯವಾಗುತ್ತದೆ’ ಎಂದರು.

‘ಶಾಸ್ತ್ರೀಯ ಸಂಗೀತದ ಬಗ್ಗೆ ಮೊದಲಿನಿಂದಲೂ ಒಲವಿತ್ತು. ಪತಿಯು ಜಪಾನಿನಲ್ಲಿ ಕಾರ್ಯನಿರ್ವಹಿಸಿದ್ದರಿಂದ ಆ ನೆಲದ ಸಂಸ್ಕೃತಿ, ಸಂಗೀತ, ಭಾಷೆ ಎಲ್ಲವನ್ನು ತಿಳಿದು-ಕೊಳ್ಳಲು ಸಾಧ್ಯವಾಯಿತು. ಪತಿಯ ಮರಣಾನಂತರವೂ ಎರಡು ಸಂಸ್ಕೃತಿಗಳ ನಡುವೆ ಸೇತುವೆಯಂತೆ ಕಾರ್ಯನಿರ್ವಹಿಸುತ್ತಿದ್ದೇನೆ’ ಎಂದರು.

ಜಪಾನಿನ ಭಾರತದ ರಾಯಭಾರ ಕಚೇರಿಯ ಮುಖ್ಯಸ್ಥ ನೊಬೊಕಿ ಯಾಮಾಮೊಟೊ, ‘ಭಾರತ ಹಾಗೂ ಜಪಾನಿನ ಸಂಸ್ಕೃತಿಯ ನಡುವೆ ಬಾಂಧವ್ಯ ಬೆಸೆಯಲು ಶ್ಯಾಮಲಾ ಅವರು ಹೊಸ ಮಾರ್ಗವನ್ನು ಅನುಸರಿಸಿ ವಿಶೇಷರಾಗಿದ್ದಾರೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.