ಗುರುವಾರ , ಮೇ 13, 2021
38 °C

ಭಾರತ ಸೇನೆಗೆ ಐಎನ್ಎಸ್ ಚಕ್ರ ಜಲಾಂತರ್ಗಾಮಿ ಸೇರ್ಪಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಶಾಖಪಟ್ಟಣ (ಪಿಟಿಐ): ರಷ್ಯಾಮೂಲದ ಪರಮಾಣು ಚಾಲಿತ ~ನೇರ್ಪಾ~ ಜಲಾಂತರ್ಗಾಮಿಯನ್ನು ಸೇನೆಗೆ ಸೇರ್ಪಡೆ ಮಾಡುವುದರೊಂದಿಗೆ ಭಾರತವು ಬುಧವಾರ ಇಂತಹ ಅತ್ಯಾಧುನಿಕ ಸಮರನೌಕೆಗಳನ್ನು ಹೊಂದಿರುವ ಶಕ್ತಿಶಾಲಿ ರಾಷ್ಟ್ರಗಳ ಸಾಲಿಗೆ ಸೇರಿತು.ರಕ್ಷಣಾ ಸಚಿವ ಎ.ಕೆ. ಆಂಟನಿ ಅವರು ಇಲ್ಲಿನ ನೌಕಾ ನಿರ್ಮಾಣ ಸಂಕೀರ್ಣದಲ್ಲಿ ಔಪಚಾರಿಕವಾಗಿ ಅಕುಲಾ 2ನೇ ದರ್ಜೆಯ ~ನೆರ್ಪಾ~ವನ್ನು ಉದ್ಘಾಟಿಸಿ ಅದಕ್ಕೆ ~ಐಎನ್ಎಸ್ ಚಕ್ರ~ ಎಂಬುದಾಗಿ ಹೆಸರಿಟ್ಟರು.~ಐಎನ್ಎಸ್ ಚಕ್ರವು ರಾಷ್ಟ್ರದ ಭದ್ರತೆ ಮತ್ತು ಸಮಗ್ರತೆಯನ್ನು ಖಚಿತಪಡಿಸುವುದು~ ಎಂದು ನೌಕೆಯನ್ನು ಉದ್ಘಾಟಿಸಿದ ಬಳಿಕ ಆಂಟನಿ ನುಡಿದರು.ಇದಕ್ಕೆ ಮುನ್ನ ಭಾರತವು ಚಾರ್ಲಿ ದರ್ಜೆಯ ರಷ್ಯದ ಪರಮಾಣು ಜಲಾಂರ್ಗಾಮಿಯನ್ನು ಕಳೆದ 1988ರಿಂದಲೂ ಇಂತಹ ಸಮರನೌಕೆಗಳಿಗೆ ತನ್ನ ಸಿಬ್ಬಂದಿಗೆ ತರಬೇತಿ ನೀಡಲು ಬಳಸಿಕೊಳ್ಳುತ್ತಿತ್ತು.ಐಎನ್ ಎಸ್ ಚಕ್ರ ಸೇರ್ಪಡೆಯೊಂದಿಗೆ ಎರಡು ದಶಕಗಳ ಬಳಿಕ ಪರಮಾಣುಚಾಲಿತ ಜಲಾಂತರ್ಗಾಮಿ ಹೊಂದಿದ ಶಕ್ತಿಶಾಲಿ ರಾಷ್ಟ್ರಗಳ ಸಮೂಹಕ್ಕೆ ಭಾರತ ಸೇರಿದಂತಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.