ಭಾರತ– ಜಿಂಬಾಬ್ವೆ ನಡುವಿನ ಎರಡನೇ ಏಕದಿನ ಕ್ರಿಕೆಟ್ ಪಂದ್ಯ
ಭಾರತ 8 ವಿಕೆಟ್ ನಷ್ಟಕ್ಕೆ 271 ರನ್

ಹರಾರೆ (ಏಜೆನ್ಸೀಸ್): ಭಾರತ– ಜಿಂಬಾಬ್ವೆ ನಡುವಿನ ಎರಡನೇ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ನಿಗದಿತ ಓವರ್‌ಗಳಲ್ಲಿ ಎಂಟು ವಿಕೆಟ್ ನಷ್ಟಕ್ಕೆ 271 ರನ್ ಕಲೆಹಾಕಿದೆ.
ಟಾಸ್ ಗೆದ್ದ ಜಿಂಬಾಬ್ವೆ ತಂಡ ಫೀಲ್ಡಿಂಗ್ ಆಯ್ದುಕೊಂಡಿತು. ಭಾರತ ತಂಡದ ಮುರಳಿ ವಿಜಯ್ 95 ಬಾಲ್‌ಗಳಲ್ಲಿ 72 ರನ್ ಗಳಿಸಿದರು.
ಅಜಿಕ್ಯ ರಹಾನೆ 63 (83), ಅಂಬಟಿ ರಾಯುಡು 41 (50), ಮನೋಜ್ ತಿವಾರಿ 22 (26), ರಾಬಿನ್ ಉತ್ತಪ್ಪ 13 (11), ಸ್ಟುವರ್ಟ್ ಬಿನ್ನಿ 25 (16), ಕೇದಾರ್ ಜಾದವ್ 16 (13) ರನ್ ಗಳಿಸಿದ್ದಾರೆ.
272 ರನ್ ಗೆಲುವಿನ ಗುರಿ ಜಿಂಬಾಬ್ವೆ ತಂಡದ ಎದುರಿಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.