ಭಾನುವಾರ, ಮೇ 9, 2021
22 °C

ಭಾರಿ ಗಾಳಿಗೆ ಮನೆ ನೆಲಸಮ

ಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪ್ರಹಳಿಯಾಳ:ತಾಲ್ಲೂಕಿನ ದುಸಗಿ ಗ್ರಾಮದಲ್ಲಿ ಶನಿವಾರ ರಾತ್ರಿ ಬೀಸಿದ ಭಾರಿ ಗಾಳಿಗೆ ಮನೆಯೊಂದು ಸಂಪೂರ್ಣ ನೆಲಸಮವಾಗಿ, ಕೊಟ್ಟಿಗೆಯಲ್ಲಿದ್ದ ಎರಡು ಎಮ್ಮೆ ಹಾಗೂ ಎರಡು ದನಗಳು  ಸಾವಿಗೀಡಾದ ಘಟನೆ ನಡೆದಿದೆ. ಘಟನೆಯಲ್ಲಿ ಸುಮಾರು ನಾಲ್ಕು ಲಕ್ಷ ಹೆಚ್ಚು ಹಾನಿಯನ್ನು ಅಂದಾಜಿಸಲಾಗಿದೆ.ಹಾನಿಗೊಳಗಾದ ಮನೆ ಹಾಗೂ ಮೃತಪಟ್ಟ ಜಾನುವಾರುಗಳು ಸೀತಾರಾಮ ಮಾರುತಿ ಚಹ್ವಾಣ ಎಂಬುವವರ ಕುಟುಂಬಕ್ಕೆ ಸೇರಿದವು ಎನ್ನಲಾಗಿದೆ.ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ, ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೋಟ್ನೆಕರ್ ಸ್ಥಳಕ್ಕೆ ಭೇಟಿ ನೀಡಿ ತಹಶೀಲ್ದಾರರಿಗೆ ಸೂಕ್ತ ಪರಿಹಾರ ನೀಡಲು ಆದೇಶಿಸಿದರು ತಹಶೀಲ್ದಾರ್ ಶಾರದಾ ಕೋಲಕರ  ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಪಶು ವೈದ್ಯಾಧಿಕಾರಿ ಮೃತ ಎಮ್ಮೆ ಹಾಗೂ ದನಗಳ ಮರಣೋತ್ತರ ಪರೀಕ್ಷೆ ನಡೆಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.