ಶುಕ್ರವಾರ, ಏಪ್ರಿಲ್ 23, 2021
22 °C

ಭಾಲ್ಕಿ: ರೈತ ಸಂಘದಿಂದ ಮಿಂಚಿನ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭಾಲ್ಕಿ: ಕಬ್ಬಿನ ಬೆಲೆಯನ್ನು 3000 ರೂ ಪ್ರತಿ ಟನ್‌ಗೆ ನಿಗದಿಪಡಿಸುವಂತೆ ಆಗ್ರಹಿಸಿ ಮಂಗಳವಾರ ರೈತ ಸಂಘಟನೆಯಿಂದ ಮಿಂಚಿನ ಪ್ರತಿಭಟನೆ ನಡೆಯಿತು. ಭಾಲ್ಕಿಯ ಬಸ್ ನಿಲ್ದಾಣದ ಮುಂದೆ ಮುಂಜಾನೆ 11ರಿಂದ ರಸ್ತೆ ತಡೆ ಮಾಡಿ ಧರಣಿ ನಡೆಸುವ ಮೂಲಕ  ವಾಹನಗಳ ಸಂಚಾರವನ್ನು ತಡೆಯಲಾಯಿತು. ಇದರಿಂದ ಸಾರ್ವಜನಿಕರಿಗೆ ಮತ್ತು ಪ್ರಯಾಣಿಕರಿಗೆ ಕೆಲ ಕಾಲ ತೊಂದರೆ ಉಂಟಾಯಿತು.ಸಂಘಟನೆಯ ರಾಜ್ಯ ಸಂಘಟನಾ ಕಾರ್ಯದರ್ಶಿ ಮಲ್ಲಿಕಾರ್ಜುನ ಸ್ವಾಮಿ ಮಾತನಾಡಿ, ರೈತರು ಸಹಕಾರಿ ಸಕ್ಕರೆ ಕಾರ್ಖಾನೆಗಳ ಮೇಲೆ ನಂಬಿಕೆ ಇಟ್ಟುಕೊಂಡು ಕಬ್ಬನ್ನು ಬೆಳೆದಿದ್ದಾರೆ. ಆದರೆ ಕಬ್ಬಿನ ಬೆಲೆ ನಿಗದಿ ಮಾಡದೇ ಕಟಾವು ಮಾಡಲಾಗುತ್ತಿದೆ. ಇದು ರೈತರಿಗೆ ಮಾಡುತ್ತಿರುವ ಅನ್ಯಾಯವಾಗಿದೆ ಎಂದು ಖಂಡಿಸಿದರು.ಸಂಘದ ತಾಲೂಕು ಅಧ್ಯಕ್ಷ ಸಿದ್ರಾಮಪ್ಪ ಅಣದೂರೆ ಮಾತನಾಡಿ, ಕೃಷಿ ಸಚಿವರ ನೇತೃತ್ವದಲ್ಲಿ ಅನೇಕ ತಜ್ಞರನ್ನೊಳಗೊಂಡ ಸಮಿತಿ ನೇಮಕಗೊಂಡು ಮೂರು ಸಭೆಗಳನ್ನು ನಡೆಸಿದರೂ ಕಬ್ಬಿನ ಬೆಲೆ ನಿಗದಿಪಡಿಸಲು ಆಗಲಿಲ್ಲ. ಕೂಡಲೇ ಮುಖ್ಯಮಂತ್ರಿಯವರು 3ಸಾವಿರ ರೂ ಬೆಲೆ ನಿಗದಿಪಡಿಸಬೇಕು.ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದು ಆಗ್ರಹಿಸಿದರು. ಇಲ್ಲದಿದ್ದರೆ ನ.09ರಂದು ಉಗ್ರ ಹೋರಾಟ ಮಾಡಲಾಗುವದು ಎಂದು ಮುಖ್ಯಮಂತ್ರಿಗಳಿಗೆ ಬರೆದ ಮನವಿ ಪತ್ರವನ್ನು ತಹಸೀಲ್ದಾರ ಮೂಲಕ ಸಲ್ಲಿಸಿದರು.ತಾಲ್ಲೂಕು ಕಾರ್ಯದರ್ಶಿ ಸುಭಾಷ ಇಟಗೆ, ಸಂಘಟನಾ ಕಾರ್ಯದರ್ಶಿ ಬಾಬುರಾವ ಜೋಳದಾಪಕೆ, ನಿರ್ಮಲಕಾಂತ ಪಾಟೀಲ, ಶಂಕರರಾವ ದಾಡಗೆ, ವಿಠಲರಾವ ಮೇತ್ರೆ, ವಿಶ್ವನಾಥ ಚಿಲಶಟ್ಟೆ, ಭಾವರಾವ ಜೋಳದಾಬಕೆ, ಹಣಮಂತರಾವ ಪಾಟೀಲ, ಧನರಾಜ ಮಾಕಾ, ಅನಿಲ ರಂಜೇರೆ, ಬಾಬುರಾವ ಪಾಟೀಲ, ಭೀಮಣ್ಣ ಕುಡ್ತೆ, ಪಾಶಾ ಪಟೇಲ, ಶಿವಕುಮಾರ ಅಣದೂರೆ, ಆನಂದ ತಮಾಸಂಗೆ, ಶಿವರಾಜ ಪಾಟೀಲ ಮುಂತಾದವರು ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.