ಬುಧವಾರ, ನವೆಂಬರ್ 20, 2019
20 °C

ಭುವನ ಸುಂದರಿ ಪಟ್ಟದತ್ತ ವನ್ಯಾ ಕಣ್ಣು

Published:
Updated:

ಚಂಡೀಗಢದ ಸುಂದರಿ ವನ್ಯ ಶರ್ಮಾಳಿಗೆ ಇದೀಗ ಭುವನ ಸುಂದರಿಯ ಪಟ್ಟ ಹೊರತುಪಡಿಸಿದರೆ ಮತ್ತೇನೂ ಕಾಣುತ್ತಿಲ್ಲವಂತೆ. ಒಮ್ಮೆ ವಿಶ್ವ ಸುಂದರಿಯರ ಸಾಲಿನಲ್ಲಿ ಭಾರತವನ್ನು ಪ್ರತಿನಿಧಿಸಬೇಕು. ಭುವನ ಸುಂದರಿ ಪಟ್ಟವನ್ನು ಗೆಲ್ಲಬೇಕು ಎಂಬುದು ಅವರ ಹಟವಂತೆ. ಅದನ್ನು ಅವರೇ ಕೋಲ್ಕತ್ತದಲ್ಲಿ ಹೇಳಿಕೊಂಡಿದ್ದಾರೆ.ಮಾರ್ಚ್‌ನಲ್ಲಿ ನಡೆದ ಸೌಂದರ್ಯ ಸ್ಪರ್ಧೆಯಲ್ಲಿ ಮಿಸ್ ಇಂಡಿಯಾ ವರ್ಲ್ಡ್ ಎನಿಸಿಕೊಂಡ 19 ವರ್ಷದ ವನ್ಯ ಶರ್ಮಾಗೆ ಡಯಾನಾ ಹೇಡನ್, ಪ್ರಿಯಾಂಕಾ ಚೋಪ್ರಾ ಆದರ್ಶವಂತೆ.

`ಪ್ರಿಯಾಂಕಾ ಚೋಪ್ರಾ ಗೆಲುವಿನ ನಂತರ ಒಂದು ದಶಕದ ಅವಧಿಯೇ ಕಳೆದುಹೋಗಿದೆ. ಮತ್ತೊಮ್ಮೆ ಭುವನಸುಂದರಿಯ ಕಿರೀಟವನ್ನು ಭಾರತಕ್ಕೆ ತರಬೇಕಿದೆ.

 

ಈ ಮಾತನ್ನು ಸೌಂದರ್ಯ ಸ್ಪರ್ಧೆಗಿಂತ ಮುಂಚೆಯೇ ನಾನು ನನ್ನಷ್ಟಕ್ಕೆ ಹೇಳಿಕೊಳ್ಳುತ್ತಿದ್ದೆ. ಆ ಕಿರೀಟವನ್ನು ತಂದೇ ತರುವೆ ಎನ್ನುವ ಭರವಸೆ ನನಗಿದೆ~ ಎಂದು ವನ್ಯಾ ಹೇಳಿದ್ದಾರೆ.

ಪ್ರಿಯಾಂಕಾಳಂತೆಯೇ ಬಾಲಿವುಡ್ ಪ್ರವೇಶಿಸಲಿದ್ದಾರೆಯೇ ಎಂಬ ಪ್ರಶ್ನೆಗೆ ವನ್ಯಾ, `ಸದ್ಯ ನನ್ನ ಗಮನವನ್ನು ಸಂಪೂರ್ಣವಾಗಿ ಸೌಂದರ್ಯ ಸ್ಪರ್ಧೆಯ ಮೇಲೆಯೇ ಕೇಂದ್ರೀಕರಿಸಿದ್ದೇನೆ.ಚೀನಾ ಯಾನದ ನಂತರವೇ ಆ ಬಗ್ಗೆ ಯೋಚಿಸುವೆ~ ಎಂದಿದ್ದಾರೆ. ಅಂದಹಾಗೆ, ಸೌಂದರ್ಯ ಸ್ಪರ್ಧೆಗೂ ಮೊದಲೇ ಈ ಬೆಡಗಿಗೆ ಬಾಲಿವುಡ್‌ನಲ್ಲಿ ನಟಿಸುವ ಅವಕಾಶ ಹುಡುಕಿಕೊಂಡು ಬಂದಿತ್ತಂತೆ. ಆದರೆ, ಸೌಂದರ್ಯ ಸ್ಪರ್ಧೆಯ ಕಡೆ ಗಮನ ಕೇಂದ್ರೀಕರಿಸಿದ್ದರಿಂದ ಆ ಅವಕಾಶದ ಕುರಿತು ಹೆಚ್ಚು ತಲೆ ಕೆಡಿಸಿಕೊಂಡಿರಲಿಲ್ಲವಂತೆ. ಈಗಲೂ ಅದೇನಿದ್ದರೂ ಭುವನ ಸುಂದರಿ ಸ್ಪರ್ಧೆಯ ನಂತರವೇ ಎಂದು ಹೇಳುತ್ತಾರೆ ವನ್ಯ.

 

ಪ್ರತಿಕ್ರಿಯಿಸಿ (+)