ಶನಿವಾರ, ಮೇ 8, 2021
19 °C

ಭೂಮಿ ನೀಡೆವು: ನಿರಾಣಿ ಸ್ಪಷ್ಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಪಾಷ್ ಸ್ಪೇಸ್ ಇಂಟರ್‌ನ್ಯಾಷನಲ್ ಲಿಮಿಟೆಡ್ ಕಂಪೆನಿಗೆ ನೀಡಿರುವ ಭೂಮಿಯನ್ನು ಬೇರೆ ಯಾವುದೇ ಕಂಪೆನಿಗೆ ನೀಡುವುದಿಲ್ಲ ಎಂದು ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ತಿಳಿಸಿದ್ದಾರೆ.ಪಾಷ್ ಕಂಪೆನಿಗೆ ನೀಡಲಾದ ಭೂಮಿಯನ್ನು ನಿರಾಣಿ ಅವರು ಪ್ರೈಸಾಕ್ ಹೌಸಿಂಗ್ ಕನ್‌ಸ್ಟ್ರಕ್ಷನ್ ಲಿಮಿಟೆಡ್ ಕಂಪೆನಿಗೆ ನೀಡಲು ಪ್ರಯತ್ನಿಸುತ್ತಿದ್ದಾರೆ ಎಂದು ಲೋಕಾಯುಕ್ತಕ್ಕೆ ದೂರು ಸಲ್ಲಿಕೆಯಾಗಿರುವ ಕುರಿತು `ಪ್ರಜಾವಾಣಿ~ಯಲ್ಲಿ ಭಾನುವಾರ ವರದಿ ಪ್ರಕಟವಾಗಿತ್ತು.`ಪಾಷ್ ಕಂಪೆನಿಗೆ ನೀಡಲಾದ ಭೂಮಿಯನ್ನು ಬೇರೆ ಯಾವುದೇ ಕಂಪೆನಿಗೆ ಹಸ್ತಾಂತರಿಸಿಲ್ಲ~ ಎಂದು ನಿರಾಣಿ ಅವರು ಅಧಿಕೃತ ಹೇಳಿಕೆಯಲ್ಲಿ ತಿಳಿಸಿದ್ದಾರೆ. `ದೊಡ್ಡತೋಗೂರಿನಲ್ಲಿ ಪಾಷ್ ಕಂಪೆನಿಗೆ ನೀಡಲಾದ ಭೂಮಿಯಲ್ಲೇ ಪ್ರೈಸಾಕ್ ಕಂಪೆನಿಯು ಯೋಜನೆಯೊಂದನ್ನು ಕೈಗೆತ್ತಿಕೊಳ್ಳಲು ಮುಂದಾಗಿತ್ತು. ಆದರೆ ಪ್ರೈಸಾಕ್‌ನ  ಈ ಪ್ರಸ್ತಾವ ತಿರಸ್ಕರಿಸಲಾಗಿದೆ~ ಎಂದು ತಿಳಿಸಿದ್ದಾರೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.