ಗುರುವಾರ , ಜೂನ್ 24, 2021
29 °C

ಭ್ರಷ್ಟರ ವಿರುದ್ಧ ಹೋರಾಟ ಅಗತ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೀದರ್: ವಿದ್ಯಾರ್ಥಿಗಳು ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸಬೇಕು ಎಂದು ಸಮಾಜ ಸೇವಕ ಚೆನ್ನಪ್ಪ ಸಂಗೋಳಗಿ ಸಲಹೆ ನೀಡಿದರು.ತಾಲ್ಲೂಕಿನ ರಾಜಗೀರಾ ಗ್ರಾಮದ ಮಾತೆ ಮಾಣಿಕೇಶ್ವರಿ ಆಶ್ರಯದಲ್ಲಿ ಈಚೆಗೆ ನಡೆದ ಮನ್ನಳ್ಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ಶಿಬಿರದ ಸಮಾರೋಪ ಸಮಾರಂಭದಲ್ಲಿ  ಅವರು ಮಾತನಾಡಿದರು.ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸುವ ಸಮಾಜ ಸೇವಕ ಅಣ್ಣ ಹಜಾರೆ ಅವರಂತೆ ಎಲ್ಲರೂ ಅದರ ವಿರುದ್ಧ ಧ್ವನಿ ಎತ್ತಬೇಕು ಎಂದರು. ಅಧ್ಯಕ್ಷತೆ ವಹಿಸಿದ ಪ್ರಾಚಾರ್ಯ ಸೋಮಶೇಖರ ಬಿರಾದಾರ ಎನ್‌ಎಸ್‌ಎಸ್  ಶಿಬಿರದಿಂದ ವಿದ್ಯಾರ್ಥಿಗಳ ಸರ್ವಾಂಗೀಣ ವಿಕಾಸವಾಗಲಿದೆ ಎಂದರು.ಮಾತೆ ಮಾಣಿಕೇಶ್ವರಿ ಆಶ್ರಮದ ಸದಾನಂದ ಶಿವಯೋಗಿ, ಬಸವರಾಜ ಬಿರಾದಾರ ಮಾತನಾಡಿದರು.  ಮಾಣಿಕರಾವ ಸೂರ್ಯವಂಶಿ. ಗಂಗಾಧರ ಕೋರಿ, ಡಾ. ಸಂಜೀವಕುಮಾರ. ರಾಜಕುಮಾರ ಹೊಸದೊಡ್ಡೆ,  ಸಂಗಶೆಟ್ಟಿ ಶೆಟಕಾರ ಉಪಸ್ಥಿತರಿದ್ದರು. ಮಹೇಶಕುಮಾರ ನಿರೂಪಿಸಿದರು. ಮಂಜುಳಾ ವಂದಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.