ಭಾನುವಾರ, ಏಪ್ರಿಲ್ 18, 2021
32 °C

ಭ್ರಷ್ಟಾಚಾರಕ್ಕೆ ಕಡಿವಾಣ: ಭಾರತದ ಅನುಮೋದನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಕೋಲ್ಕತ್ತ (ಪಿಟಿಐ): ವಿಶ್ವಸಂಸ್ಥೆಯು 2005ರಲ್ಲಿ ನಡೆಸಿದ ಭ್ರಷ್ಟಾಚಾರ ವಿರೋಧಿ ಸಮಾವೇಶದಲ್ಲಿ ಭಾಗವಹಿಸಿದ್ದ ಭಾರತವು ಈ ನಿಟ್ಟಿನಲ್ಲಿ ವಿಶ್ವಸಂಸ್ಥೆಯ ಆಶಯವನ್ನು ಅನುಮೋದಿಸುತ್ತದೆ ಎಂದು ಕೇಂದ್ರ ಹಣಕಾಸು ಸಚಿವ ಪ್ರಣವ್ ಮುಖರ್ಜಿ ಹೇಳಿದ್ದಾರೆ.‘ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಸುದೀರ್ಘವಾದ ಕಾನೂನು ಹೋರಾಟದ ಅಗತ್ಯವಿದೆ’ಎಂದು ಅವರು ಸೋಮವಾರ ಇಲ್ಲಿ ನಡೆದ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ತಿಳಿಸಿದರು.

 

‘ಲೋಕಪಾಲ ಮಸೂದೆಯನ್ನು ಮುಂದಿನ ಮಳೆಗಾಲದ ಅಧಿವೇಶನದಲ್ಲೇ ಸಂಸತ್‌ನಲ್ಲಿ ಮಂಡಿಸಲು ಯುಪಿಎ ಸಿದ್ಧವಿದೆ’ ಎಂದ ಅವರು, ‘ಕರಡು ಸಮಿತಿಯು ಆದಷ್ಟು ಶೀಘ್ರದಲ್ಲೇ ತನ್ನ ಕಾರ್ಯವನ್ನು ಪೂರೈಸುತ್ತದೆ’ ಎಂಬ ಆಶಯವನ್ನು ಜನ ಲೋಕಪಾಲ ಜಂಟಿ ಕರಡು ಸಮಿತಿಯ ಅಧ್ಯಕ್ಷರೂ ಆದ ಅವರು ವ್ಯಕ್ತಪಡಿಸಿದರು.

 

‘ಲೋಕಪಾಲ ಮಸೂದೆ ಕುರಿತಂತೆ ಬಿಜೆಪಿ ಈಗ ಆಕ್ಷೇಪಿಸುತ್ತಿರುವುದು ಆ ಪಕ್ಷದ ಸ್ವಭಾವಕ್ಕೆ ತಕ್ಕಂತೆಯೇ ಇದೆ. ಬಿಜೆಪಿ ಅನುಸರಿಸಿಕೊಂಡು ಬಂದಿರುವ ಧೋರಣೆಯೇ ಅಂತಹದ್ದು’ ಎಂದು ಟೀಕಿಸಿದ ಅವರು, ಆದರೂ ಈ ಮಸೂದೆ ಅಂಗೀಕಾರವಾಗಲು ಅಗತ್ಯ ಸಹಕಾರವನ್ನು ನೀಡುವುದಾಗಿ ಹೇಳಿರುವ ಬಿಜೆಪಿ ಮುಖಂಡ ಎಲ್.ಕೆ. ಅಡ್ವಾಣಿಯವರ ಹೇಳಿಕೆಯನ್ನು ಸ್ವಾಗತಿಸಿದರು.

 

‘ಚಿತ್ರೀಕರಣ: ನಿರ್ಧಾರ ಸಮಿತಿಗೆ ಸೇರಿದ್ದು’

 

ನವದೆಹಲಿ ವರದಿ: ಜನ ಲೋಕಪಾಲ ಜಂಟಿ ಕರಡು ಸಮಿತಿ ಕಾರ್ಯ ಕಲಾಪಗಳ ವಿಡಿಯೊ ಚಿತ್ರೀಕರಣ ಮಾಡುವ ಕುರಿತು ಆ ಸಮಿತಿಯೇ ನಿರ್ಧರಿಸಲಿದೆ ಎಂದು ಸಮಿತಿಯ ಸದಸ್ಯರಲ್ಲಿ ಒಬ್ಬರಾದ ಕೇಂದ್ರ ಸಚಿವ ಸಲ್ಮಾನ್ ಖುರ್ಷಿದ್ ತಿಳಿಸಿದ್ದಾರೆ.

 

ಕರಡು ಸಮಿತಿ ನಡೆಸುವ ಪ್ರತಿಯೊಂದು ಕಾರ್ಯದಲ್ಲೂ ಪರಾದರ್ಶಕತೆ ಕಾಯ್ದುಕೊಳ್ಳುವ ಉದ್ದೇಶದಿಂದ ವಿಡಿಯೊ ಚಿತ್ರೀಕರಣ ಮಾಡಬೇಕು ಎಂಬ ಅಣ್ಣಾ ಹಜಾರೆ ಅವರ ಒತ್ತಾಯಕ್ಕೆ ಪ್ರತಿಕ್ರಿಯಿಸಿರುವ ಅವರು, ‘ಈ ಬಗ್ಗೆ ವೈಯಕ್ತಿಕವಾಗಿ ನಾನು ಏನೂ ಹೇಳುವುದಿಲ್ಲ. ಈ ಕುರಿತು ಸಮಿತಿಯೇ ನಿರ್ಧರಿಸಲಿದೆ. ಲೋಕಪಾಲ್ ಮಸೂದೆ ಮಂಡನೆಯು ಅತ್ಯಂತ ಅದ್ಯತೆಯ ವಿಚಾರವಾಗಿದ್ದು, ಇದರ ಕರಡು ಆದಷ್ಟು ಶೀಘ್ರದಲ್ಲೇ ಸಿದ್ಧವಾಗಲಿದೆ’ ಎಂದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.