ಬೆಂಗಳೂರು: ಯುವಕರು ದೇಶದ ನಿರ್ಮಾಣದಲ್ಲಿ ಹಿಂದೆ ಉಳಿದಿದ್ದಾರೆ. ದೇಶದ ಏಳಿಗೆಯ ಬಗೆಗೆ ಅವರು ಏನೂ ಯೋಚಿಸುತ್ತಿಲ್ಲ ಎಂದು ಗೊಣಗುವವರಿಗೆ `ಹೆಮ್ಮೆಯ ಭಾರತೀಯರು~ ಸಂಘಟನೆಯ ಯುವಕರು ತಕ್ಕ ಉತ್ತರ ನೀಡಿದ್ದಾರೆ.

ಹೈದರಾಬಾದಿನ ಯುವಜನರ ತಂಡವು ಕನ್ಯಾಕುಮಾರಿಯಿಂದ ನವದೆಹಲಿವರೆಗೆ ಭ್ರಷ್ಟಾಚಾರ ವಿರುದ್ಧ ಜಾಗೃತಿ ಮೂಡಿಸಲು ಪಾದಯಾತ್ರೆ ಆರಂಭಿಸಿದೆ.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘಟನೆಯ ಸದಸ್ಯ ವಿವೇಕ ರೆಡ್ಡಿ ಮಾತನಾಡಿ, `ಪ್ರಾಮಾಣಿಕ ಹೆಜ್ಜೆಗಳು ಭಾರತದಾದ್ಯಂತ ನಡಿಗೆ~ ಎಂಬ ಧ್ಯೇಯ ವಾಕ್ಯದೊಂದಿಗೆ ಭ್ರಷ್ಟಾಚಾರದ ವಿರುದ್ಧ ಜನರಿಗೆ ಜಾಗೃತಿ ಮೂಡಿಸುವ ಪ್ರಯತ್ನದಲ್ಲಿ ಪಾದಯಾತ್ರೆಯನ್ನು ಡಿಸೆಂಬರ್ 18 ರಿಂದ ಕನ್ಯಾಕುಮಾರಿಯಿಂದ ಆರಂಭಿಸಿದ್ದೇವೆ~ ಎಂದರು.

`ಪಾದಯಾತ್ರೆ ಸುಮಾರು 5000 ಕಿ.ಮೀ.ಗಳಿಗಿಂತ ಹೆಚ್ಚು ದೂರವನ್ನು ಕ್ರಮಿಸುವುದಾಗಿದೆ. ಎಪ್ರಿಲ್ 7 ರೊಳಗೆ ನವದೆಹಲಿಯನ್ನು ತಲುಪುವ ನಿರೀಕ್ಷೆ ಇದೆ~ ಎಂದರು.

`ಯುವ ವೃತ್ತಿಪರರು ಹಾಗೂ ವಿದ್ಯಾರ್ಥಿಗಳು ತಮ್ಮ ವೈಯಕ್ತಿಕ, ಸಾಮಾಜಿಕ ಮತ್ತು ವೃತ್ತಿಪರ ಜೀವನದಲ್ಲಿ ಉತ್ತಮವಾದುದನ್ನು ಒಪ್ಪಿಕೊಳ್ಳುವುದರ ಮೂಲಕ, ನೀತಿಸಂಹಿತೆಯನ್ನು ಪ್ರೋತ್ಸಾಹಿಸುವುದರ ಮೂಲಕ ಪ್ರಾಮಾಣಿಕ ರಾಜ್ಯ ಕಟ್ಟಲು ಸಾಧ್ಯ~ ಎಂದು ಹೇಳಿದರು.

`ಬೆಂಗಳೂರಿನಲ್ಲಿ ಸಾರ್ವಜನಿಕ ಸಮಾರಂಭವನ್ನು ಜನವರಿ 8 ರಂದು ಕಬ್ಬನ್ ಉದ್ಯಾನದಲ್ಲಿ ಬೆಳಿಗ್ಗೆ 8 ಕ್ಕೆ ಏರ್ಪಡಿಸಲಾಗಿದೆ. ನಂತರ ಪಾದಯಾತ್ರೆಯು ಕಬ್ಬನ್ ರಸ್ತೆ, ಅನಿಲ್ ಕುಂಬ್ಳೆ ವೃತ್ತ, ರೆಸಿಡೆನ್ಸಿ ರಸ್ತೆ, ಸೆಂಟ್ ಮಾರ್ಕ್ ರಸ್ತೆ ಮೂಲಕ ತೆರಳಲಿದೆ~ ಎಂದು ಹೇಳಿದರು.

`ಯುವಕರು ಅದರಲ್ಲೂ ವಿದ್ಯಾರ್ಥಿಗಳು ಸಂಘಟಿತರಾಗಿ ಯಾವುದೇ ರಾಜಕೀಯ ಪ್ರೇರಿತವಿಲ್ಲದೆ, ಯಾವುದೇ ಉದ್ದೇಶವಿಲ್ಲದೇ ನಿಸ್ವಾರ್ಥದಿಂದ ಜನರಲ್ಲಿ ಭ್ರಷ್ಟಾಚಾರದ ಬಗೆಗೆ ಜಾಗೃತಿ ಮೂಡಿಸುವ ಸಣ್ಣ ಪ್ರಯತ್ನವಿದು~ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.