ಬುಧವಾರ, ಜನವರಿ 22, 2020
20 °C

ಭ್ರಷ್ಟಾಚಾರ ತಡೆ ಕಾನೂನು ವ್ಯಾಪ್ತಿಗೆ ಕಾರ್ಪೊರೇಟ್ ವಲಯ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಖಾಸಗಿ ವಲಯದಲ್ಲೂ ಭ್ರಷ್ಟಾಚಾರ ನಡೆಯುತ್ತಿರುವ ಆರೋಪ ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಕಾರ್ಪೊರೇಟ್ ವಲಯವನ್ನು ಕೂಡ ಉದ್ದೇಶಿತ ಭ್ರಷ್ಟಾಚಾರ ತಡೆ ಕಾನೂನಿನ ಅಡಿ ತರಲು ಸರ್ಕಾರ ಪರಿಶೀಲನೆ ನಡೆಸಿದೆ.ಇದೇ 24ರಂದು ಹಾಜರಾಗಿ ನಿಲುವು ತಿಳಿಸುವಂತೆ ಸಿವಿಸಿ, ಸಿಬಿಐ ಮತ್ತು ಜಾರಿ ನಿರ್ದೇಶನಾಲಯಗಳಿಗೆ ಸಂಸತ್ ಸ್ಥಾಯಿ ಸಮಿತಿ ಪತ್ರ ಬರೆದಿದೆ. ಲೋಕಸಭೆಯಲ್ಲಿ ಅನುಮೋದನೆ ಪಡೆದಿರುವ ಕಾಯ್ದೆಗೆ ರಾಜ್ಯಸಭೆ ಅಂಗೀಕಾರ ನೀಡಬೇಕಾಗಿದೆ.

ಪ್ರತಿಕ್ರಿಯಿಸಿ (+)