ಕೊಪ್ಪ: ರಾಜ್ಯದ ಮರ್ಯಾದೆ ಬಿ.ಜೆ.ಪಿ. ಸರ್ಕಾರದ ಭ್ರಷ್ಟಾಚಾರದ ಜಾರುಗುಪ್ಪೆಯಲ್ಲಿ ಜಾರಿ ಬೀಳುತ್ತಿದೆ. ಹಿಂದೆಂದು ಕಂಡು ಕೇಳದ ಭ್ರಷ್ಟ ಸರ್ಕಾರ ರಾಜ್ಯದಲ್ಲಿದೆ ಎಂದು ಕೇಂದ್ರ ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ ಹೇಳಿದರು.

ಇಲ್ಲಿನ ಪುರಸಭಾ ಕ್ರೀಡಾಂಗಣದಲ್ಲಿ ಮಂಗಳವಾರ ಕಾಂಗ್ರೆಸ್ ಏರ್ಪಡಿಸಿದ್ದ ಬಹಿರಂಗಸಭೆ ಉದ್ದೇಶಿಸಿ ಅವರು ಮಾತನಾಡಿದರು.ಬಿಜೆಪಿ ಮಂತ್ರಿಗಳ ಗಣಿಲೂಟಿ, ಡಿನೋಟಿಫಿಕೇಷನ್ ಹಗರಣ, ನೀಲಿಚಿತ್ರ ವೀಕ್ಷಣೆಯಂತಹ ಕೃತ್ಯಗಳಿಂದ ರಾಜ್ಯದ ಮಾನ ಹರಾಜು ಹಾಕಿದ್ದಾರೆ. ದೇಶ ವಿದೇಶಗಳಲ್ಲಿ ನಾಡಿನ ಮಾನ ಕಳೆದ ಬಿಜೆಪಿಗೆ ಮತದಾರರು ತಕ್ಕ ಪಾಠ ಕಲಿಸುತ್ತಾರೆಂಬ ವಿಶ್ವಾಸವಿದೆ ಎಂದರು.

ತಮ್ಮ ಸರ್ಕಾರ ಬಿಸಿಯೂಟ ಕಾರ್ಯಕ್ರಮದ ಮೂಲಕ ರಾಷ್ಟ್ರಕ್ಕೆ ಮಾದರಿಯಾಗಿದೆ. ಇಂದಿನ ಸರ್ಕಾರ ಒಂದೇ ಒಂದು ಹೇಳಿಕೊಳ್ಳುವ ಸಾಧನೆ ಮಾಡಿಲ್ಲ, ಬದಲಾಗಿ ಭ್ರಷ್ಟಾಚಾರವೆಸಗಿ ಅದನ್ನೇ ಸಮರ್ಥಿಸಿಕೊಳ್ಳುತ್ತಿರುವುದು ನಾಚಿಕೆಗೇಡಿತನ ಸಂಗತಿ ಎಂದರು.

ಕೇಂದ್ರ ಸರ್ಕಾರ ಕಾಫಿ ಬೆಳೆಗಾರರ ಸಂಕಷ್ಟಕ್ಕೆ ನೆರವಾದಂತೆ ಅಡಿಕೆ ಹಳದಿ ಎಲೆರೋಗ ಪೀಡಿತರಿಗೂ ನೆರವಾಗಲಿದೆ. ಗೋರಕ್ ಸಿಂಗ್ ವರದಿಯನ್ನು ಅನುಷ್ಠಾನಗೊಳಿಸಲಿದೆ. ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಆಯವ್ಯಯದ ನಂತರ ಪೂರಕ ಅಯವ್ಯಯದ ವೇಳೆಗೆ ಬೆಳೆಗಾರರಿಗೆ ನೆರವು ದೊರೆಯಲಿದೆ ಎಂದರು.

ವಿಧಾನ ಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ, ಭಾರತೀಯ ಸಂಸ್ಕೃತಿಯ ವಾರಸುದಾರರಂತೆ ವರ್ತಿಸುತಿದ್ದ ಬಿ.ಜೆ.ಪಿ.ಯವರು ನೀಲಿಚಿತ್ರ ವೀಕ್ಷಣೆ, ರೇವ್ ಪಾರ್ಟಿಗಳಿಂದ ತಮ್ಮ ಸಂಸ್ಕೃತಿ ಬಯಲು ಮಾಡಿದ್ದಾರೆ. ಭ್ರಷ್ಟಾಚಾರದಲ್ಲಿ ಸಿಲುಕಿ ಜೈಲಿಗೆ ಹೋದರೂ ವಿಜಯದ ಸಂಕೇತ ತೋರಿಸುವ ಭಂಡತನಕ್ಕಿಳಿದಿದ್ದಾರೆ ಎಂದರು.

ಕಳೆದ 60 ವರ್ಷದಲ್ಲಿ ರಾಜ್ಯ ಸರ್ಕಾರ 60 ಸಾವಿರ ಕೋಟಿ ಸಾಲ ಮಾಡಿದ್ದಾರೆ. ಬಿ.ಜೆ.ಪಿ. 3 ವರ್ಷದಲ್ಲಿ ರೂ.47 ಸಾವಿರ ಕೋಟಿ ಸಾಲಮಾಡಿ ರಾಜ್ಯದ ಅರ್ಥಿಕ ಸ್ಥಿತಿಯನ್ನು ಹದಗೆಡಿಸಿದ್ದಾರೆ ಎಂದು ದೂರಿದರು. ಅಡಿಕೆ ಬೆಳೆಗಾರರ ಸಮಸ್ಯೆ ಪರಿಹಾರಕ್ಕೆ ಕೇಂದ್ರದ ಕಡೆ ಬೆಟ್ಟು ಮಾಡುವ ರಾಜ್ಯ ಸರ್ಕಾರ ರೂ.500 ಕೋಟಿ ಒದಗಿಸಲು ಯಾರು ಅಡ್ಡಿ ಬಂದಿದ್ದರೆಂದು ಅವರು ಪ್ರಶ್ನಿಸಿದರು.

ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ಕೃಷ್ಣಾ ನೇತೃತ್ವದ ಸರ್ಕಾರ ಬಡವರಿಗೆ 9.5ಲಕ್ಷ ಮನೆ ಕಟ್ಟಿಕೊಟ್ಟಿದ್ದಾರೆ. ಕಳೆದ 6 ವರ್ಷದಿಂದ ಬಿಜೆಪಿ ಸರ್ಕಾರಕ್ಕೆ 50 ಸಾವಿರ ಮನೆ ನಿರ್ಮಿಸಲು ಸಾಧ್ಯವಾಗಿಲ್ಲ ಎಂದರಲ್ಲದೆ ನೀರಾವರಿಗಾಗಲಿ ವಿದ್ಯುತ್ ಉತ್ಪಾದನೆಗಾಗಲಿ ಗಮನ ಹರಿಸದೆ ಅಭಿವೃದ್ಧಿ ಮಂತ್ರ ಪಠಿಸುತ್ತಿದೆ ಎಂದು ವ್ಯಂಗ್ಯವಾಡಿದರು.

ಚಲನಚಿತ್ರ ತಾರೆಯರಾದ ಭಾವನ, ಆದಿಲೋಕೇಶ್ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು. ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್, ಶಾಸಕರಾದ ದಿನೇಶ್ಗುಂಡುರಾವ್, ಅಲ್ಲಮ ವೀರಭದ್ರಪ್ಪ, ಕಿಮ್ಮನೆ ರತ್ನಾಕರ್, ಇಬ್ರಾಹಿಂ, ಬಿ.ಎಲ್.ಶಂಕರ್, ನಟಿ ಉಮಾಶ್ರೀ, ಕೆ.ಜಿ.ಶೋಭಿಂತ್, ಎಚ್.ಎಂ.ನಟರಾಜ್, ಎಚ್.ಜಿ.ವೆಂಕಟೇಶ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.