ಗುರುವಾರ , ಜನವರಿ 23, 2020
19 °C

ಮಂಗಳವಾರ, 24-1-1962

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸೇಲಂ - ಬೆಂಗಳೂರು ರೈಲ್ವೆ ನಿರ್ಮಾಣ ಆರಂಭ

ಸೇಲಂ, ಜ. 23
- ಕಳೆದ ಐದು ದಶಕಗಳಿಂದಲೂ ಚಳವಳಿಗೆ ಕಾರಣವಾಗಿದ್ದ ಸೇಲಂ - ಬೆಂಗಳೂರು ರೈಲು ಮಾರ್ಗ ನಿರ್ಮಾಣದ ಕಾರ್ಯವನ್ನು ಮದರಾಸಿನ ಮುಖ್ಯಮಂತ್ರಿ ಶ್ರೀ ಕಾಮರಾಜರು ಇಂದು ಇಲ್ಲಿ ಉದ್ಘಾಟಿಸಿದರು.ಕಾಶ್ಮೀರ ಪ್ರಶ್ನೆ ಇತ್ಯರ್ಥಕ್ಕೆ ಕೆನೆಡಿ ಸಲಹೆ

ಕರಾಚಿ, ಜ. 23
- ಕಾಶ್ಮೀರ ಸಮಸ್ಯೆಗೆ ತೃಪ್ತಿಕರ ಪರಿಹಾರವನ್ನು ಕಂಡುಕೊಳ್ಳುವ ಕಾರ್ಯದಲ್ಲಿ ಉಭಯತ್ರರಿಗೂ ಒಪ್ಪಿಗೆಯಾಗುವ ವ್ಯಕ್ತಿಯೊಬ್ಬರು ಪ್ರಭಾವ ಬೀರಲು ಸಮ್ಮತಿ ನೀಡುವಿರಾ ಎಂದು ಅಧ್ಯಕ್ಷ ಕೆನೆಡಿಯವರು ಭಾರತ ಮತ್ತು ಪಾಕಿಸ್ತಾನಗಳನ್ನು ಕೇಳಿದ್ದಾರೆ.

ಅಧ್ಯಕ್ಷ ಕೆನೆಡಿಯವರು ಪ್ರಧಾನ ಮಂತ್ರಿ ನೆಹರೂ ಮತ್ತು ಅಧ್ಯಕ್ಷ ಅಯುಬ್‌ರಿಗೆ ವೈಯಕ್ತಿಕ ಪತ್ರಗಳನ್ನು ಬರೆದಿದ್ದಾರೆಂದು ಪಾಕಿಸ್ತಾನ್ ರೇಡಿಯೋ ತಿಳಿಸಿದೆ. ಪಾಕಿಸ್ತಾನ ಅಧ್ಯಕ್ಷರು ಈಗಾಗಲೆ ಉತ್ತರ ನೀಡಿದ್ದಾರೆಂದೂ ವರದಿಯಾಗಿದೆ.

ಪ್ರತಿಕ್ರಿಯಿಸಿ (+)