ಗುರುವಾರ , ಜೂನ್ 17, 2021
21 °C

ಮಂತ್ರಾಲಯ: ನಾಳೆಯಿಂದ ಗುರುಭಕ್ತಿ ಉತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಯಚೂರು: ಮಂತ್ರಾಲಯ ರಾಘವೇಂದ್ರ ಸ್ವಾಮಿ ಮಠದಲ್ಲಿ ಮಾ. 3ರಿಂದ 8ರವರೆಗೆ ರಾಘವೇಂದ್ರ ಗುರುಭಕ್ತಿ ಉತ್ಸವ ನಡೆಯಲಿದೆ. 

ರಾಘವೇಂದ್ರ ಸ್ವಾಮಿ 393ನೇ ಪಟ್ಟಾಭಿಷೇಕ ಮಹೋತ್ಸವ ಹಾಗೂ 419ನೇ ವರ್ಧಂತಿ ಉತ್ಸವ ಅಂಗವಾಗಿ ಈ ಗುರುಭಕ್ತಿ ಉತ್ಸವ­ವನ್ನು ಮಂತ್ರಾಲಯ  ರಾಘವೇಂದ್ರ­ಸ್ವಾಮಿ ಮಠ ಆಯೋ­ಜಿಸಿದೆ. ಮಠದ ಪೀಠಾಧಿಪತಿಗಳಾದ ಸುಯತೀಂದ್ರತೀರ್ಥ ಸ್ವಾಮೀಜಿ, ಉತ್ತರಾಧಿಕಾರಿ ಸುಬುಧೇಂದ್ರತೀರ್ಥ ಸ್ವಾಮೀಜಿ ಅವರ ಸಾನ್ನಿಧ್ಯ ವಹಿಸುವರು.ಮಾ. 3ರಂದು ಪಟ್ಟಾಭಿಷೇಕ ನಡೆಯಲಿದ್ದು, ಬೆಳಿಗ್ಗೆ 9ಕ್ಕೆ ಪಟ್ಟಾಭಿಷೇಕ ಉತ್ಸವ ನಡೆಯಲಿದೆ. 8ರಂದು ವರ್ಧಂತಿ ಉತ್ಸವ ನಡೆಯಲಿದೆ. ಮಾ. 3ರಿಂದ 8ರವರೆಗೆ ಪ್ರತಿದಿನ ಬೆಳಿಗ್ಗೆ ಜ್ಞಾನ ಯಜ್ಞ, ಸಂಜೆ ಭಜನೆ ಸಂಧ್ಯಾ, ಜ್ಞಾನ ಯಜ್ಞ, ಸಂಗೀತ ಸಂಧ್ಯಾ, ಹರಿದಾಸವಾಣಿ, ದಾಸವಾಣಿ, ನೃತ್ಯ, ಹಾಸ್ಯ ದೀಪಿಕಾ ಮುಂತಾದ ಕಾರ್ಯಕ್ರಮಗಳು ನಡೆಯಲಿವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.